• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್‌ ಹೋರಾಟ:10 ದಿನದ 170 ಕಿ.ಮೀ ಪಾದಯಾತ್ರೆ ಘೋಷಣೆ

ಪ್ರತಿಧ್ವನಿ by ಪ್ರತಿಧ್ವನಿ
August 25, 2026
in Top Story, ಕರ್ನಾಟಕ, ರಾಜಕೀಯ
0
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್‌ ಹೋರಾಟ:10 ದಿನದ 170 ಕಿ.ಮೀ ಪಾದಯಾತ್ರೆ ಘೋಷಣೆ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ವಾಲ್ಮೀಕಿ ನಿಗಮ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 1ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿವರೆಗೆ ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಸುಮಾರು 170ರಿಂದ 200 ಕಿ.ಮೀ.ವರೆಗೆ ಪಾದಯಾತ್ರೆ ನಡೆಯಲಿದ್ದು, ಜೆಡಿಎಸ್ ಕೂಡ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಿಜೆಪಿ ತಿಳಿಸಿದೆ.

BK Hariprasad vs BJP : ಪರಿಷತ್‌ನಲ್ಲಿ ಬಿಜೆಪಿ ಗಲಾಟೆ ಬಿಕೆ ಹರಿಪ್ರಸಾದ್‌ ಗರಂ..! #chalavadinarayanaswamy

ರಾಯಚೂರು ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಗುರುಗುಂಟದಿಂದ ಪಾದಯಾತ್ರೆ ಆರಂಭವಾಗಲಿದ್ದು, ಬಳಿಕ ಲಿಂಗಸುಗೂರು, ಮಸ್ಕಿ, ಸಿಂಧನೂರು, ಶಿರಗುಪ್ಪ, ತೆಕ್ಕಲಕೋಟೆ, ಸಿಂದಗೇರಿ ಮಾರ್ಗವಾಗಿ ಬಳ್ಳಾರಿ ತಲುಪಲಿದೆ. ಸುಮಾರು 8ರಿಂದ 9 ವಿಧಾನಸಭಾ ಕ್ಷೇತ್ರಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ನಾಲ್ಕು ಎಸ್‌ಟಿ ಕ್ಷೇತ್ರಗಳು ಒಳಗೊಂಡಿವೆ. ಪಾದಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಚಾಲನೆ ನೀಡಲಿದ್ದು, ಸಮಾರೋಪ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

 

ವಾಲ್ಮೀಕಿ ನಿಗಮ ಹಗರಣ, ಮೀಸಲಾತಿ, ಉತ್ತರ ಕರ್ನಾಟಕದ ನೀರಾವರಿ, ಬರ ಪರಿಸ್ಥಿತಿ ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ವಿಚಾರಗಳನ್ನು ಜನರ ಮುಂದಿಟ್ಟು ಹೋರಾಟ ನಡೆಸುವುದಾಗಿ ಬಿಜೆಪಿ ತಿಳಿಸಿದೆ.

yathindra vs Sharavana :  ಸದನದಲ್ಲಿ ಶರವಣ, ಸಚಿವ ಯತೀಂದ್ರ ನಡುವೆ ವಾಕ್ಸಮರ..! #yathindrasiddaramaiah

ವಾಲ್ಮೀಕಿ ನಿಗಮದ ಅಕ್ರಮದ ವಿಚಾರದಲ್ಲಿ ರಾಜ್ಯ ಸರ್ಕಾರ ಮುಖ್ಯ ಆರೋಪಿಯಾಗಿರುವ ಬಿ. ನಾಗೇಂದ್ರ ಅವರನ್ನು ರಕ್ಷಿಸುತ್ತಿದೆ. ಅಧಿವೇಶನದಲ್ಲಿ ಸರ್ಕಾರ ಈ ಸತ್ಯ ಎದುರಿಸಲಾಗದೆ ಕಲಾಪವನ್ನು ಮೊಟಕುಗೊಳಿಸಿದೆ ಎಂದು ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ. ಇದೇ ವೇಳೆ, ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸರ್ಕಾರ ಕಡೆಗಣಿಸಿದೆ ಮತ್ತು ವಾಲ್ಮೀಕಿ ಸಮುದಾಯದ ಮೀಸಲಾತಿ ವಿಚಾರದಲ್ಲೂ ಅನ್ಯಾಯವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

BJP MLA’s Daughter Accused  of Assaulting Woman PSI : ಯಾರು ಯಾರಿಗೆ ಹೊಡೆದ್ರು, ತಪ್ಪು ಯಾರದ್ದು ನೋಡಿ..!

ಪಾದಯಾತ್ರೆ ಸಂಬಂಧ ನಡೆದ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಸಿ.ಟಿ. ರವಿ, ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ರಾಜುಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

R Ashok VS Krishna Byre Gowda ನಾವು ಮಾತಾಡೋದನ್ನು ಬಿಟ್ಟು, ಬರೀ ಅವ್ರದ್ದೆ ತೋರಿಸ್ತಾರೆ ಆ ಇಲಾಖೆಯವ್ರು..!
Previous Post

ಮನೆಗೆಲಸ, ಅತ್ತೆ-ಮಾವನ ಆರೈಕೆ ಪತ್ನಿಗೆ ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

Next Post

ಊರ್ವಶಿ ಥಿಯೇಟರ್‌ಗೆ ವಿದಾಯ: ಚಿತ್ರರಂಗದ ಪರಿಸ್ಥಿತಿ ಬಗ್ಗೆ ನಟ ಜಗ್ಗೇಶ್‌ ಬೇಸರ

Related Posts

ಈದ್ ಮಿಲಾದ್ ಆಚರಣೆಗೆ ಡಿಜೆ ಬ್ರೇಕ್;4 ದಿನಗಳ ಕಾಲ ಸರ್ಕಾರದಿಂದ ನಿರ್ಬಂಧ
Top Story

ಈದ್ ಮಿಲಾದ್ ಆಚರಣೆಗೆ ಡಿಜೆ ಬ್ರೇಕ್;4 ದಿನಗಳ ಕಾಲ ಸರ್ಕಾರದಿಂದ ನಿರ್ಬಂಧ

by ಪ್ರತಿಧ್ವನಿ
August 25, 2026
0

ಬೆಂಗಳೂರು: ರಾಜ್ಯದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಹಾಗೂ ಮೆರವಣಿಗೆಗಳ ಸಂದರ್ಭದಲ್ಲಿ ಡಿಜೆ ಸಿಸ್ಟಂ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸೌಹಾರ್ದತೆ ಕಾಪಾಡುವ...

Read moreDetails
ರಾಯಚೂರು ಐಐಐಟಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ; ಸಚಿವ ಎಂ.ಬಿ. ಪಾಟೀಲ ಘೋಷಣೆ

ರಾಯಚೂರು ಐಐಐಟಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ; ಸಚಿವ ಎಂ.ಬಿ. ಪಾಟೀಲ ಘೋಷಣೆ

August 25, 2026
‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

August 25, 2026
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

August 25, 2026
‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

August 25, 2026
Next Post
ಊರ್ವಶಿ ಥಿಯೇಟರ್‌ಗೆ ವಿದಾಯ: ಚಿತ್ರರಂಗದ ಪರಿಸ್ಥಿತಿ ಬಗ್ಗೆ ನಟ ಜಗ್ಗೇಶ್‌ ಬೇಸರ

ಊರ್ವಶಿ ಥಿಯೇಟರ್‌ಗೆ ವಿದಾಯ: ಚಿತ್ರರಂಗದ ಪರಿಸ್ಥಿತಿ ಬಗ್ಗೆ ನಟ ಜಗ್ಗೇಶ್‌ ಬೇಸರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada