• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

ಪ್ರತಿಧ್ವನಿ by ಪ್ರತಿಧ್ವನಿ
August 25, 2026
in Top Story, ಕರ್ನಾಟಕ, ಸಿನಿಮಾ
0
‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಸಿನಿಮಾದ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು, ಮಾನಹಾನಿಕರ ಅಥವಾ ದಾರಿ ತಪ್ಪಿಸುವಂತಹ ಮಾಹಿತಿಯನ್ನು ಹರಡುವ ಪ್ರಯತ್ನಗಳನ್ನು ತಡೆಯಲು ಚಿತ್ರತಂಡ ಕಾನೂನು ಕ್ರಮ ಕೈಗೊಂಡಿದೆ.

Yash visit Dharmasthala : ಧರ್ಮಸ್ಥಳಕ್ಕೆ ಬಂದ ಯಶ್​​ಗೆ ಸನ್ಮಾನಿಸಿದ ವೀರೇಂದ್ರ ಹೆಗ್ಗಡೆ..! #RockingStarYash

ಕೆವಿಎನ್ ಪ್ರೊಡಕ್ಷನ್ಸ್ ಮನವಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಯಾಲಯವು ‘ಜಾನ್ ಡೋ’ (John Doe) ತಡೆಯಾಜ್ಞೆ ನೀಡಿದೆ. ಚಿತ್ರದ ಕುರಿತು ಅನಾಮಧೇಯ ವ್ಯಕ್ತಿಗಳು ಅಥವಾ ಗುರುತಿಸಲಾಗದ ಸಂಸ್ಥೆಗಳು ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಸೃಷ್ಟಿಸಿ, ಪ್ರಕಟಿಸಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ತಡೆಯುವುದು ಈ ಆದೇಶದ ಪ್ರಮುಖ ಉದ್ದೇಶವಾಗಿದೆ.

‘ಜಾನ್ ಡೋ’ ಆದೇಶ ಎಂದರೇನು?

ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಮುಂಚಿತವಾಗಿ ಸ್ಪಷ್ಟವಾಗಿ ತಿಳಿದಿಲ್ಲದ ಸಂದರ್ಭಗಳಲ್ಲಿ, ಅನಾಮಧೇಯ ವ್ಯಕ್ತಿಗಳಿಂದ ಸಂಭವಿಸಬಹುದಾದ ಹಾನಿಯನ್ನು ತಡೆಯಲು ನ್ಯಾಯಾಲಯ ನೀಡುವ ನಿರ್ಬಂಧಕ ಆದೇಶವನ್ನು ಸಾಮಾನ್ಯವಾಗಿ ‘ಜಾನ್ ಡೋ’ ಆದೇಶ ಎಂದು ಕರೆಯಲಾಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಇಂತಹ ಆದೇಶಗಳನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆಯಬಹುದಾದ ಅನಧಿಕೃತ ಪ್ರಸಾರ, ಸುಳ್ಳು ಮಾಹಿತಿ ಅಥವಾ ಸಂಘಟಿತ ಡಿಜಿಟಲ್ ದಾಳಿಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ.

Yash visit Dharmasthala : ಎಲ್ಲರಿಗೂ ಒಳ್ಳೆಯದು ಆಗಲಿ ಎಂದ ನಟ ಯಶ್‌..! #toxic #india #moive

ಈ ಆದೇಶದ ಪ್ರಮುಖ ಅಂಶವೆಂದರೆ, ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ನಿರ್ಬಂಧವಿಲ್ಲ. ಸಿನಿಮಾ ಇಷ್ಟವಾಗದಿದ್ದರೆ ಅದರ ಬಗ್ಗೆ ಟೀಕೆ ಮಾಡುವುದು, ವಿಮರ್ಶೆ ಬರೆಯುವುದು ಅಥವಾ ತಮ್ಮ ಅನುಭವ ಹಂಚಿಕೊಳ್ಳುವುದನ್ನು ತಡೆಯುವ ಉದ್ದೇಶ ಈ ಆದೇಶಕ್ಕಿಲ್ಲ. ಆದರೆ, ಸುಳ್ಳು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುವುದು, ಮಾನಹಾನಿಕರ ಆರೋಪಗಳನ್ನು ಹರಡುವುದು ಅಥವಾ ಸಂಘಟಿತವಾಗಿ ಚಿತ್ರದ ವಿರುದ್ಧ ಡಿಜಿಟಲ್ ನೆಗೆಟಿವಿಟಿ ಸೃಷ್ಟಿಸುವಂತಹ ಪ್ರಯತ್ನಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.

Yash visit Dharmasthala : ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ಬಂದ ನಟ ಯಶ್..! #pratidhvani

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಘೋಷಣೆಯಾದ ದಿನದಿಂದಲೇ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದ ಹಾಡುಗಳು, ಟ್ರೇಲರ್ ಹಾಗೂ ಪ್ರಚಾರದ ಕೆಲವು ಅಂಶಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿವೆ. ಅದರಲ್ಲೂ ಯಶ್ ಮತ್ತು ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿರುವ ಹಾಡುಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರವು ವಯಸ್ಕರಿಗಾಗಿ ರೂಪಿಸಲಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ ಎಂಬ ಮಾಹಿತಿಯನ್ನೂ ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಇನ್ನು ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ ಚಿತ್ರತಂಡ ಈ ತಡೆಯಾಜ್ಞೆ ತಂದಿದ್ದು, ಸಿನಿ ಪ್ರಿಯರು ಟಾಕ್ಸಿಕ್ ವೀಕ್ಷಣೆ ಬಳಿಕ ನಿಜವಾದ ವಿಮರ್ಶೆ ನೀಡುವಂತೆ ತಿಳಿಸಿದೆ.

Yash : ರಾಕಿಭಾಯ್ ಸರಳತೆ ಕೊಂಡಾಡಿದ ಬಾಲಿವುಡ್ ನಟ #toxicthemovie #prathidhwani
Previous Post

ರಾಜ್ಯದಲ್ಲಿ ಇನ್ನೆರೆಡು ದಿನಗಳಲ್ಲಿ ಮೋಡ ಬಿತ್ತನೆಗೆ ಚಾಲನೆ: ಇಲ್ಲಿದೆ ಸಂಪೂರ್ಣ ಮಾಹಿತಿ

Next Post

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

Related Posts

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ
ಸಿನಿಮಾ

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

by ಪ್ರತಿಧ್ವನಿ
August 25, 2026
0

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮದುವೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 29 ಮತ್ತು 30ರಂದು ಪಾವನಾ ಅವರೊಂದಿಗೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ...

Read moreDetails
ಈದ್ ಮಿಲಾದ್ ಆಚರಣೆಗೆ ಡಿಜೆ ಬ್ರೇಕ್;4 ದಿನಗಳ ಕಾಲ ಸರ್ಕಾರದಿಂದ ನಿರ್ಬಂಧ

ಈದ್ ಮಿಲಾದ್ ಆಚರಣೆಗೆ ಡಿಜೆ ಬ್ರೇಕ್;4 ದಿನಗಳ ಕಾಲ ಸರ್ಕಾರದಿಂದ ನಿರ್ಬಂಧ

August 25, 2026
ರಾಯಚೂರು ಐಐಐಟಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ; ಸಚಿವ ಎಂ.ಬಿ. ಪಾಟೀಲ ಘೋಷಣೆ

ರಾಯಚೂರು ಐಐಐಟಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ; ಸಚಿವ ಎಂ.ಬಿ. ಪಾಟೀಲ ಘೋಷಣೆ

August 25, 2026
‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

August 25, 2026
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

August 25, 2026
Next Post
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada