ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸುವ ನಕಲಿ ಹಿಂದುಗಳು ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನೆಯ ದಿನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಸಿದ್ಧಾಂತವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ಈ ಎರಡು ಸಿದ್ಧಾಂತಗಳಲ್ಲಿ ಒಂದು ಸಿದ್ಧಾಂತ ಮಾತ್ರ ದೇಶವನ್ನು ಆಳಬಲ್ಲದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ನಮ್ಮ ಪಕ್ಷವು ಅಧಿಕಾರವನ್ನು ಬಲಪಡಿಸಿತ್ತು, ಆಡಳಿತಾರೂಢ BJP ಈಗ ಅಧಿಕಾರಗಳನ್ನುಸಡಿಲ ಮಾಡಿದೆ ಎಂದು ಹೇಳಿದ್ದಾರೆ.
“ಯೇ ಕಿಸ್ ಪ್ರಕಾರ ಕೆ ಹಿಂದೂ ಹೈ. ಯೆ ಜೂತೆ ಹಿಂದೂ ಹೈ. ಯೇ ಹಿಂದೂ ಧರ್ಮ ಕಾ ಪ್ರಯೋಗ ಕರ್ತೆ ಹೈ, ಯೇ ಧರ್ಮ ಕಿ ದಲಾಲಿ ಕರ್ತೆ ಹೈ, ಮಗರ್ ಯೇ ಹಿಂದೂ ನಹಿನ್ ಹೈ (“ಅವರು ಯಾವ ರೀತಿಯ ಹಿಂದುಗಳು? ಅವರು ನಕಲಿ ಹಿಂದುಗಳು. ಅವರು ಹಿಂದೂ ಧರ್ಮವನ್ನು ಬಳಸುತ್ತಾರೆ. ಅವರು ಧರ್ಮದ ದಲ್ಲಾಳಿಗಳು, ಆದರೆ ಅವರು ಹಿಂದುಗಳಲ್ಲ”) ಎಂದು ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.