• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬ್ರೇಕಿಂಗ್ ನ್ಯೂಸ್: ನಟ ಸೋನುಸೂದ್‌ಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಐಟಿ ದಾಳಿ!

ನೀಲಿ by ನೀಲಿ
September 15, 2021
in ದೇಶ
0
ಬ್ರೇಕಿಂಗ್ ನ್ಯೂಸ್: ನಟ ಸೋನುಸೂದ್‌ಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಐಟಿ ದಾಳಿ!
Share on WhatsAppShare on FacebookShare on Telegram

ನಟ, ಸಮಾಜ ಸೇವಕ ಸೋನುಸೂದ್ ಅವರ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಸೋನುಸೂದ್ ಅವರ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಅವರ ಕಚೇರಿಯಲ್ಲಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ADVERTISEMENT

ಮುಂಬೈನಲ್ಲಿ ನಟ ಸೋನುಸೂದ್ ಅವರ ನಿವಾಸಗಳು ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಸೋನುಸೂದ್ ಅವರಿಗೆ ಸಂಬಂಧಿಸಿದ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಐಟಿ ದಾಳಿ ನಡೆದಿದೆ.

ಕೊರೊನಾ ಸಂದರ್ಭದಲ್ಲಿ ನಟ ಸೋನುಸೂದ್ ಸಾವಿರಾರು ಮಂದಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಲಾಕ್‌ಡೌನ್‌ನಲ್ಲಿ ಬೇರೆ ರಾಜ್ಯ ಅಥವಾ ಬೇರೆ ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ನೆರವಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋನುಸೂದ್ ಹೆಸರು ಪ್ರಖ್ಯಾತಿಗೊಂಡಿತ್ತು. ಇತ್ತೀಚೆಗೆ ದೆಹಲಿ ಸರ್ಕಾರದ ‘ದೇಶ್ ಕೆ ಮಂಟರ್ಸ್’ ನ ಬ್ರಾಂಡ್ ಅಂಬಾಸಿಡರ್ ಆಗಿ ಅವರು ನೇಮಕಗೊಂಡಿದ್ದರು.

ರಾಜಕೀಯ ಸೇರಲು ಯಾವತ್ತೂ ಒಲವು ತೋರದ ಸೋನು ಸೂದ್ ಕಳೆದ ಹಲವು ದಿನಗಳಿಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಹಲವರಿಗೆ ಸೋನು ಸೂದ್ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆಯೇ ಎಂಬ ಅನುಮಾನ ಕಾಡಿತ್ತು. ಮುಂದಿನ ವರ್ಷದ ಪಂಜಾಬ್ ಚುನಾವಣೆಯಲ್ಲಿ ಸೋನುಸೂದ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡಿದ್ದವು.

ಈ ದಾಳಿ ರಾಜಕೀಯ ಪ್ರೇರಿತವೇ:

ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಯಾವುದೇ ವ್ಯಕ್ತಿ ಯಾರನ್ನಾದರೂ ಭೇಟಿಯಾಗಬಹುದು, ಆದಾಯ ತೆರಿಗೆ ಇಲಾಖೆ ಸ್ವತಂತ್ರ ವಿಭಾಗವಾಗಿದ್ದು, ತನ್ನದೇ ಆದ ಪ್ರೋಟೋಕಾಲ್‌ಗಳ ಪ್ರಕಾರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಹೇಳಿದ್ದಾರೆ.

ಶಿವಸೇನಾ ಮುಖಂಡ ಆನಂದ್ ದುಬೆ ಮಾತನಾಡಿ, ”ಆದಾಯ ತೆರಿಗೆ ಇಲಾಖೆ ದಾಳಿಯಿಂದ ಆಘಾತವಾಗಿದೆ, ಅವರು ಸಾವಿರಾರು ಮಂದಿಗೆ ಸಹಾಯ ಮಾಡಿದ್ದು, ಹೀಗೆ ಐಟಿ ಅಧಿಕಾರಿಗಳು ದಸಾಳಿ ನಡೆಸಲಿ ಎಂದೇ?, ಅವರು ಕಾನೂನು ಬಾಹಿರವಾಗಿ ಏನಾದರೂ ಮಾಡಿರಬಹುದು ಎಂದು ನನಗೆ ಅನಿಸುತ್ತಿಲ್ಲ” ಎಂದರು.

Tags: BJPit raidmahrastraShivasenesonu soodಬಿಜೆಪಿ
Previous Post

BJP, RSSನವರು ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸುವ ‘ನಕಲಿ ಹಿಂದುಗಳು’ : ರಾಹುಲ್ ಗಾಂಧಿ

Next Post

ಕೊರೋನಾ ಬಗ್ಗೆ WHO ಕಳವಳ : ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತ –ICMR ಆಧ್ಯಯನ !

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post
ಕೋವಿಡ್-19 ಲಸಿಕೆ ರಕ್ಷಣೆ ಆರು ತಿಂಗಳಲ್ಲಿ ಕಡಿಮೆಯಾಗುತ್ತದೆ: ಯುಕೆ ಸಂಶೋಧನೆ

ಕೊರೋನಾ ಬಗ್ಗೆ WHO ಕಳವಳ : ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತ –ICMR ಆಧ್ಯಯನ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada