ವಿಜಯೇಂದ್ರ ಮೇಲೇ ದೋಷರೋಪ ಪಟ್ಟಿ ಕೊಟ್ಟು, ಪಕ್ಷದ ಚೌಕಟ್ಟಿನೊಳಗಿನ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಯತ್ನಾಳ್ ಉತ್ತರ ನೀಡಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಕ್ಷದ ನಿಯಮವನ್ನು ಮೀರಿ ನಾನು ಎಂದಿಗೂ ನಡೆಯಲ್ಲ, ಪಕ್ಷವನ್ನು ಬಲಿ ಕೊಡುವ ಕೆಲಸ ಮಾಡಿಲ್ಲ, ಹಿಂದುತ್ವ, ಭ್ರಷ್ಟಾಚಾರ ವಿರುದ್ಧ ನನ್ನ ಹೋರಾಟದ ಮೂಲಕ ಪಕ್ಷಕ್ಕೆ ಬಲ ಕೊಟ್ಟಿದ್ದೇನೆ ಎಂದು ಹೇಳಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ದೆಹಲಿಗೆ ತುರ್ತು ಪ್ರಯಾಣ ಮಾಡಿದ್ದಾರೆ. ಇಂದು ವಕ್ಫ್ ವಿರುದ್ಧದ ಅಧ್ಯಯನ ಪ್ರವಾಸ ನಿಗಡಿಯಾಗಿತ್ತು. ಆದರೂ ಹೈಕಮಾಂಡ್ ಬುಲಾವ್ ಕೊಟ್ಟ ಹಿನ್ನೆಲೆಯಲ್ಲಿ ಬೆಳಗ್ಗಿನ ವಿಮಾನದಲ್ಲೇ ದೆಹಲಿಗೆ ಪ್ರಯಾಣಿಸಿದ್ದಾರೆ ಆರ್ ಅಶೋಕ್. ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಬಳಿಕ ಬಿಜೆಪಿಯಲ್ಲಿ ಕ್ಷಿಪ್ರ ಚಟುವಟಿಕೆಗಳು ಶುರುವಾಗಿವೆ.
ದೆಹಲಿಯಲ್ಲಿಂದು ಒಂದು ಕಡೆ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಭೇಟಿ ಮಾಡ್ತಿರೋ ಬೆನ್ನಲ್ಲೇ ಆರ್ ಅಶೋಕ್ಗೆ ಬುಲಾವ್ ಕೊಟ್ಟಿದ್ದು, ಯತ್ನಾಳ್ ಪರವಾಗಿ ಒಂದು ಬಣ ಬ್ಯಾಟಿಂಗ್ ಮಾಡ್ತಿದೆ ಎನ್ನಲಾಗಿದೆ. ಇನ್ನು ನಿನ್ನೆ ಬೆಂಗಳೂರಿನಲ್ಲಿ ತರುಣ್ ಚುಗ್ ಕೋರ್ ಕಮಿಟಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ನಿನ್ನೆ ರಾತ್ರಿ ದೆಹಲಿಯ ಜೋಷಿ ನಿವಾಸದಲ್ಲಿ ರಾತ್ರಿ ಡಿನ್ನರ್ ಸಭೆ ನಡೆದಿತ್ತು. ಇದರ ಬೆನ್ನಲ್ಲೇ ಆರ್ ಅಶೋಕ್ಗೆ ದೆಹಲಿಗೆ ಬರುವಂತೆ ಕರೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.