ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್-ಕೇಸರಿ ಸಮರದ ಕಿಡಿ ಇದೀಗ ಇಡೀ ರಾಜ್ಯಕ್ಕೆ ಹಬ್ಬಿದ್ದು ಬೆಂಕಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿದೆ. ಹೌದು, ಕಳೆದ ಹಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಜಾಬ್ ಹಾಗೂ ಕೇಸರಿ ಸಮರ ನಡೆಯುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಮಕ್ಕಳ್ಯಾರೂ ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿಲ್ಲ ಆದರೆ ಅಮಾಯಕ ಮಕ್ಕ ಳಿಗೆ ಕೇಸರಿ ಶಾಲು ಹಾಕಿಸಿಕೊಂಡು ಗದ್ದಲ ಎಬ್ಬಿ ಸುವುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚನ್ನಪಟ್ಟ ಣದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಈ ಸಂಘರ್ಷ ನಡೆದಿಲ್ಲ . ಸರ್ಕಾರಿ ಶಾಲೆಗಳಲ್ಲೇ ಈ ವಿವಾದ ಬುಗಿಲೆದ್ದಿದೆ. ಬಿಜೆಪಿ–ಕಾಂಗ್ರೆಸ್ ನಾಯಕರ ಮಕ್ಕಳ್ಯಾರೂ ಈ ಶಾಲೆಗಳಲ್ಲಿ ಓದುತ್ತಿಲ್ಲ . ಅವರೆಲ್ಲ ಕಂಡವರ ಮಕ್ಕ ಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿದ್ದಾರೆ. ಸರ್ಕಾರಿ ಶಾಲೆಗೆ ಕಳುಹಿಸಿದ ತಮ್ಮ ಮಕ್ಕ ಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಪಕ್ಷ–ಸಂಘಟನೆಗಳು ತಮ್ಮ ತೆವಲಿಗೆ ಈ ಮಕ್ಕ ಳನ್ನು ಉಪಯೋಗಪಡಿಸಿಕೊಳ್ಳು ತ್ತಿವೆ. ಬೀದಿಗೆ ಇಳಿದು ಪ್ರತಿಭಟನೆಮಾಡುತ್ತಿರುವವರ ವಿಡಿಯೊಗಳು ಈಗಾಗಲೇ ದಾಖಲಾಗಿವೆ. ಈಗಾಗಲೇ 10–12 ಮಕ್ಕ ಳ ಮೇಲೆ ಎಫ್ಐಆರ್ ಸಹ ದಾಖಲಾಗಿರುವುದು ಆತಂಕದ ವಿಚಾರ. ಈ ವಿಡಿಯೊಗಳನ್ನು ಇಟ್ಟು ಕೊಂಡುಮುಂದೆ ಇಂತಹ ಸಾವಿರಾರು ಮಕ್ಕ ಳನ್ನು ಕೋರ್ಟು–ಕಚೇರಿ ಎಂದು ಅಲೆಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಹೈಕೋರ್ಟ್ ನ್ಯಾ ಯಪೀಠವು ಆದಷ್ಟು ಶೀಘ್ರ ಪರಿಸ್ಥಿ ತಿಯನ್ನು ತಿಳಿಗೊಳಿಸಿ, ಈ ವಿವಾದಕ್ಕೆ ನ್ಯಾಯಯುತ ತೀರ್ಮಾನ ನೀಡಬೇಕು ಎಂದು ಮನವಿ ಮಾಡಿದರು.
ಪ್ರಿಯಾಂಕಾ ಗಾಂಧಿ ತಾಯಿ ಹೇಳಿ ಕೇಳಿ ಇಟಲಿಯವರು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಸಿದ ಕುಮಾರಸ್ವಾಮಿ ಅವರು, ಅವರವರ ಭಾವನೆಗೆ ಹೇಳಿದ್ದಾರೆ. ಜನಪ್ರತಿನಿಧಿಯಾಗಿ ಮಾತನಾಡಿದ್ದು ತಪ್ಪು. ಆದರೆ ಅವರು ಈಗ ಕ್ಷಮೆ ಕೋರಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ವೈಫಲ್ಯತೆ ಕಾಣುತ್ತಿದೆ. ಗೃಹ ಸಚಿವರು ಮತ್ತು ಸರ್ಕಾರದ ವೈಫಲ್ಯ ಈ ಪ್ರಕರಣದಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ.