ಬಿಜೆಪಿ ಯುವ ನಾಯಕಿ, ನಟಿ ಹಾಗೂ ಬಿಗ್ ಬಾಸ್-14 ಸ್ಪರ್ಧಿ ಪೂನಮ್ ಪೊಗತ್ ಹೃದಯಾಘಾತದಿಂದ ಗೋವಾದಲ್ಲಿ ನಿಧನರಾಗಿದ್ದಾರೆ.
ಆಗಸ್ಟ್ 22ರಂದು ತಮ್ಮ ಸಿಬ್ಬಂದಿ ಜೊತೆ ಗೋವಾಗೆ ತೆರಳಿದ್ದ ನಟಿ 24ರವರೆಗೆ ತಂಗಬೇಕಿತ್ತು. ಆದರೆ ಆಗಸ್ಟ್ 23ರಂದು ದಿಢೀರ್ ಹೃದಯಾಘಾತದಿಂದ ಅಸುನೀಗಿದ್ದಾರೆ.
ಆಗಸ್ಟ್ 22ರಂದು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಪೂನಮ್ ಪೊಗತ್, ಮಾರನೇ ದಿನ ಬೆಳಿಗ್ಗೆ ಕೊಠಡಿಗೆ ಮರಳಿದ್ದರು. ಕೆಲವೇ ಹೊತ್ತಿನಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋನಾಲಿ ಪೊಗತ್ 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅದಂಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.