• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಬಿಜೆಪಿ ದೇಶವನ್ನು ಹಾಳು ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಪ್ರತಿಧ್ವನಿ by ಪ್ರತಿಧ್ವನಿ
August 30, 2023
in ಇದೀಗ, ಕರ್ನಾಟಕ, ರಾಜಕೀಯ
0
ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

Share on WhatsAppShare on FacebookShare on Telegram

ಬಿಜೆಪಿ ದೇಶ ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ADVERTISEMENT

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಆಗಸ್ಟ್ 30) ನಡೆದ ಗೃಹಲಕ್ಷ್ಮಿ ಕಾರ್ಯಕ್ರಮದ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂಹತ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲರೂ ಇತ್ತ ನೋಡುತ್ತಿದ್ದಾರೆ. ಎಲ್ಲರಿಗೂ ನಮ್ಮರಾಜ್ಯ ಮಾದರಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಕಾರ್ಯಕ್ರಮಗಳನ್ನು ಯಾರೂ ಕೊಡಲಾಗುವುದಿಲ್ಲ, ದೇಶ ದಿವಾಳಿಯಾಗುತ್ತದೆ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹೇಳುತ್ತಿದ್ದರು. ಈಗ ಇಲ್ಲಿ ನಡೆದಿರುವುದನ್ನು ನೋಡಿದರೆ ಅವರೂ ಹೃದಯ ಪೂರ್ವಕವಾಗಿ ಒಪ್ಪಬೇಕು ಎನಿಸಬಹುದು. ಆದರೆ ಅವರು ಹಾಗೆ ಮಾಡುವುದಿಲ್ಲ.

ನಾವೇ ಮಾಡಿದ್ದೇ ಸರಿ ಎಂಬ ಮನೋಭಾವ ಅವರದ್ದು. ಬೇರೆಯವರು ಮಾಡಿದ್ದನ್ನು ಒಪ್ಪುವುದಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ರಸ್ತೆ, ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣಗಳನ್ನು ಮಾಡಿದವರು ನಾವು. ಇವರು ಕೇವಲ ಸುಣ್ಣ ಬಣ್ಣ ಹಚ್ಚಿ ಉದ್ಘಾಟನೆ ಮಾಡುವುದನ್ನಷ್ಟೆ ಮಾಡುತ್ತಾರೆ. ಚತ್ತೀಸಗಡದಲ್ಲಿ ಅವರು ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ನೆಹರೂ, ಪಟೇಲ್ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಾಡಿರುವ ಕಾರ್ಯಗಳ ಪಟ್ಟಿ ನಮ್ಮಬಳಿ ಇದೆ. ಅವರು ಕೇವಲ ಹೇಳುವವರಷ್ಟೆ. ನಾವು ಸಾಧಿಸಿ ತೋರುವವರು ಎಂದು ಖರ್ಗೆ ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ಶೇ 18ರಷ್ಟು ಇತ್ತು. 2013-14ರಲ್ಲಿ ಶೇ 74ಕ್ಕೆ ಏರಿತು. ಇದು ಕೆಲಸವಲ್ಲವೇ? ಸರಾಸರಿ ಆಯುಷ್ಯ ಆಗ 32 ವರ್ಷ ಇತ್ತು. ಈಗ 71 ಆಗಿದೆ. ಮಹಿಳಾ ಸಾಕ್ಷರತೆ ಶೇ 7ರಿಂದ ಶೇ 65ಕ್ಕೆ ಏರಿದೆ. ಪರಿಶಿಷ್ಟ ಜಾತಿ, ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣದ ಪ್ರಮಾಣ ಹೆಚ್ಚು ಮಾಡಿದವರು ನಾವು. ನರೇಗಾ ಪ್ರಗತಿಪರ ವಿಚಾರವಲ್ಲವೇ? ಆಹಾರ ಭದ್ರತಾ ಕಾಯ್ದೆ ಮಾಡಿದವರು ನಾವು ಎಂದು ಪಟ್ಟಿ ನೀಡಿದರು.

ಬಿಜೆಪಿಯವರು ಕಾಂಗ್ರೆಸ್ಗೆ ಬೈಯುವ ಕೆಲಸವನ್ನು ಮಾತ್ರವೇ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Tags: Gruha Lakshmi SchemeMallikarjun Khargeಕಾಂಗ್ರೆಸ್‌ಗೃಹಲಕ್ಷ್ಮಿ ಯೋಜನೆಮಲ್ಲಿಕಾರ್ಜುನ ಖರ್ಗೆ
Previous Post

ಮಂಗಳೂರು | ಅರಣ್ಯ ಇಲಾಖೆಯ ಮರಗಳನ್ನ ಮಾರಾಟ ಮಾಡಿದ್ದ ಪಿಡಿಓ ; ಕಿಸಾನ್‌ ಸಂಘ ಪ್ರತಿಭಟನೆ

Next Post

ಆದಿತ್ಯ-ಎಲ್‌1 ನೌಕೆಯ ಉಡ್ಡಯನಕ್ಕೆ ಭರದ ಸಿದ್ಧತೆ, ತಪಾಸಣೆ ಪೂರ್ಣ: ಇಸ್ರೊ

Related Posts

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ
ಕರ್ನಾಟಕ

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

by ಪ್ರತಿಧ್ವನಿ
August 25, 2026
0

  "ತಾಜ್ ಮಹಲ್", "ಚಾರ್ ಮಿನಾರ್", "ಮೈಲಾರಿ" ಮುಂತಾದ ಚಿತ್ರಗಳ ನಿರ್ದೇಶಕರಾಗಿ ಕನ್ನಡಿಗರ ಮನ ಗೆದ್ದಿರುವ ಅರ್ ಚಂದ್ರು, "ಕಬ್ಜ" ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಭಾರತದಾದ್ಯಂತ...

Read moreDetails
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

August 25, 2026
‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

August 25, 2026
ರಾಜ್ಯದಲ್ಲಿ ಇನ್ನೆರೆಡು ದಿನಗಳಲ್ಲಿ ಮೋಡ ಬಿತ್ತನೆಗೆ ಚಾಲನೆ: ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಇನ್ನೆರೆಡು ದಿನಗಳಲ್ಲಿ ಮೋಡ ಬಿತ್ತನೆಗೆ ಚಾಲನೆ: ಇಲ್ಲಿದೆ ಸಂಪೂರ್ಣ ಮಾಹಿತಿ

August 25, 2026
ಪೊಲೀಸ್‌ ಸಭೆಗಳಲ್ಲಿ ಆಸನ ತಾರತಮ್ಯ: ಜನರ ಪರ ಮೋಹನ್ ಕುಮಾರ್ ದಾನಪ್ಪ ಆಗ್ರಹ

ಪೊಲೀಸ್‌ ಸಭೆಗಳಲ್ಲಿ ಆಸನ ತಾರತಮ್ಯ: ಜನರ ಪರ ಮೋಹನ್ ಕುಮಾರ್ ದಾನಪ್ಪ ಆಗ್ರಹ

August 25, 2026
Next Post
ಆದಿತ್ಯ-ಎಲ್‌1

ಆದಿತ್ಯ-ಎಲ್‌1 ನೌಕೆಯ ಉಡ್ಡಯನಕ್ಕೆ ಭರದ ಸಿದ್ಧತೆ, ತಪಾಸಣೆ ಪೂರ್ಣ: ಇಸ್ರೊ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada