ದೇಶಾದ್ಯಾಂತ ಎಲ್ಲೆಡೆ ಜಾತಿಯಾಧಾರಿತ ಜನಗಣತಿಯ ಕುರಿತು ರ್ಚೆಯಾಗುತ್ತಿದ್ದು, ಈ ಕುರಿತು ಅನೇಕ ನಾಯಕರು ಸಂಸತ್ತಿನಲ್ಲೂ ದ್ವನಿ ಎತ್ತಿದ್ದಾರೆ. ಆದರೀಗ ಈ ಕುರಿತು BSP ಮುಖ್ಯಸ್ಥೆ ಮಾಯಾವತಿ ಕೂಡ ಜಾತಿಯಾಧಾರಿತ ಜನಗಣತಿಯನ್ನು ನಿರಾಕರಿಸುತ್ತಿರುವ ಒಕ್ಕೂಟ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಬಿಜೆಪಿ ತನ್ನ ಚುನಾವಣಾ ಹಿತಾಸಕ್ತಿಗಾಗಿ ಮಾತ್ರ ಸಮುದಾಯವನ್ನು ಬಳಸುವುದನ್ನು ಒಪ್ಪಿಕೊಂಡಂತಿದೆ ಎಂದು ಕಿಡಿಕಾರಿದ್ದಾರೆ.
ಹಿಂದುಳಿದ ವರ್ಗಗಳ ಜಾತಿ ಗಣತಿಯು “ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಾಗಿದೆ” ಅಂತಹ ಮಾಹಿತಿಯನ್ನು ಜನಗಣತಿಯ ವ್ಯಾಪ್ತಿಯಿಂದ ಹೊರಗಿಡುವುದು “ಪ್ರಜ್ಞಾಪೂರ್ವಕ ನೀತಿ ನಿರ್ಧಾರ” ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿದ ನಂತರ ಮಾಯಾವತಿಯವರ ಈ ಪ್ರತಿಕ್ರಿಯೆ ಬಂದಿದೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, “ಗೌರವಾನ್ವಿತ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ನಡೆಸಲು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ನಿರಾಕರಿಸುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಒಬಿಸಿ ರಾಜಕಾರಣದಲ್ಲಿ ಬಿಜೆಪಿಯ ಚುನಾವಣಾ ಹಿತಾಸಕ್ತಿಗಳು ಮತ್ತು ಅವರ ಮಾತುಗಳು ಮತ್ತು ಕಾರ್ಯಗಳಲ್ಲಿನ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ ಆದ್ದರಿಂದ ಜಾಗರೂಕತೆಯಿಂದಿರಿ” ಎಂದು ಹೇಳಿದ್ದಾರೆ.
ಮುಂದುವರೆದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಎಸ್ಸಿ/ಎಸ್ಟಿಗಳಂತೆ, ಒಬಿಸಿಗಳ ಜಾತಿ ಗಣತಿಯನ್ನು ನಡೆಸುವ ಬೇಡಿಕೆಯು ದೇಶದಲ್ಲಿ ವೇಗವನ್ನು ಪಡೆದುಕೊಂಡಿದೆ. ಆದರೆ ಕೇಂದ್ರದ ನಿರಾಕರಣೆಯು ಸಮುದಾಯವನ್ನು ಘಾಸಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ಯುಪಿ ಚುನಾವಣೆಗೆ ಬಿಜೆಪಿ ‘ಕೋಮುವಾದಿ ರಾಜಕೀಯ’ ಮಾಡುತ್ತಿದೆ: ಮಾಯಾವತಿ
ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಮುಂಚಿತವಾಗಿ ಬಿಜೆಪಿ “ಕೋಮುವಾದಿ ರಾಜಕೀಯ” ಮಾಡುತ್ತಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಗುರುವಾರ ಆರೋಪಿಸಿದ್ದಾರೆ.
“ಮುಂಬರುವ ಯುಪಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ತನ್ನ ಹಳೆಯ ಚಾಳಿಗೆ (ಅಜೆಂಡಾಗೆ) ಮರಳಿದೆ, ಅಭಿವೃದ್ಧಿಯ ಮಾತುಗಳೆಲ್ಲ ಟೊಳ್ಳು ಎಂದು ಸಾಬೀತಾಗಿದೆ” ಎಂದು ಮಾಯಾವತಿ ಟ್ವೀಟ್ ಮಡುವ ಮೂಲಕ ಯುಪಿಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
“ಈಗ ಪಕ್ಷವು ಧಾರ್ಮಿಕ ಭಾವನೆಗಳು ಮತ್ತು ಹಿಂದೂ-ಮುಸ್ಲಿಂ ವಿಭಜನೆ ಇತ್ಯಾದಿಗಳೊಂದಿಗೆ ಆಟವಾಡಲು ಸಿದ್ದವಾಗಿದೆ, ಆದರೆ ಜನರು ಮತ್ತೊಮ್ಮೆ ಮೋಸ ಹೋಗುವುದಿಲ್ಲವೆಂಬುದು ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ರಿಸರ್ವ್ ಬ್ಯಾಂಕ್ (Reserve Bank) ಅಂಕಿಅಂಶಗಳ ಪ್ರಕಾರ, ಯುಪಿಯಲ್ಲಿ ತಲಾ ಆದಾಯ ನಿಶ್ಚಲವಾಗಿದೆ ಮತ್ತು ಜನರು “ಬಡವರಾಗಿ ಮತ್ತು ಹಿಂದುಳಿದವರಾ”ಗಿಯೇ ಉಳಿದಿರುವುದನ್ನು ತೋರಿಸುತ್ತಿದೆ, ಆದರೆ ಬಿಜೆಪಿ ಅಭಿವೃದ್ಧಿಯನ್ನು ಮಾಡಿದೆ ಎಂದು ಕ್ಲೈಮ್ ಮಾಡಿಕೊಳ್ಳುತ್ತಿರುವುದು ಸುಳ್ಳೆಂದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.