ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಜೆಎಂಎಂ, ಬಿಎಸ್‌ಪಿ, ಮತ್ತು ಲೋಕ ಜನಶಕ್ತಿ ಪಾರ್ಟಿಯಂತಹ ಪಕ್ಷಗಳು ಅಂಚಿನಲ್ಲಿರುವ ಸಮುದಾಯಗಳನ್ನು ಸಜ್ಜುಗೊಳಿಸುವಲ್ಲಿ ಪ್ರಭಾವಶಾಲಿ ಪಾತ್ರ ವಹಿಸಿವೆ. ಈ ಪಕ್ಷಗಳು ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳು, ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳು ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು ಮತ್ತು ಪರ್ಯಾಯ ಆಡಳಿತ ವರ್ಗವಾಗಿ ಹೊರಹೊಮ್ಮಬೇಕು ಎಂಬ ಆಶಯವನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಿಂದ ಬಲಪಂಥೀಯ ರಾಜಕಾರಣವನ್ನು ತಡೆಯಲು ವಿಫಲವಾಗಿವೆ.
ಕುತೂಹಲಕಾರಿ ಸಂಗತಿ ಎಂದರೆ ಬಲಪಂಥೀಯ ರಾಜಕೀಯ ಮಾಡುವ ಬಿಜೆಪಿ ಸಾಮಾಜಿಕವಾಗಿ ಕೆಳ ಸ್ಥರದವರ ಹಿತಾಸಕ್ತಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರತಿನಿಧಿಸುವುದಾಗಿ ಹೇಳಿಕೊಂಡಿದೆ. ಈ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗೊಂದಲಗೊಳಿಸಿದೆ. ದಲಿತರು ಮತ್ತು ಆದಿವಾಸಿಗಳ ಸಾಂಸ್ಕೃತಿಕ ಸಂಕೇತಗಳನ್ನು ಆಧರಿಸಿ ಹೊಸ ರಾಜಕೀಯ ಕಾರ್ಯಸೂಚಿಯನ್ನು ರೂಪಿಸುತ್ತಿದೆ. ಭಾವನಾತ್ಮಕ ಕೋಮು ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಕೆಳ ಸ್ಥರದವರನ್ನು ಎತ್ತಿಕಟ್ಟುವ ರಾಜಕಾರಣ ಮಾಡುತ್ತಿದೆ.
ಮೀಸಲು ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯ ಶಾಸಕರು ಬಿಜೆಪಿಯಿಂದ ಗೆದ್ದಿದ್ದಾರೆ. ಪಕ್ಷವು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪರಿಣಾಮಕಾರಿ ದಲಿತ-ಆದಿವಾಸಿ ನಾಯಕತ್ವವನ್ನು ನೀಡಿದೆ ಎಂದು ಬಿಜೆಪಿ ಹೈಲೈಟ್ ಮಾಡುತ್ತದೆ. ಇದೇ ಆಧಾರದ ಮೇಲೆ ಈಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಿದೆ. ಇದು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ತನ್ನೆಡೆಗೆ ಆಕರ್ಷಿಸಲು ಬಿಜೆಪಿಯ ಪ್ರಭಾವಶಾಲಿ ರಾಜಕೀಯ ಕ್ರಮವಾಗಿದೆ. ಬಿಜೆಪಿಯು ಇತ್ತೀಚಿಗೆ ‘ದಲಿತರು ಮತ್ತು ಆದಿವಾಸಿಗಳು ಮೋದಿ ಆಡಳಿತದಲ್ಲಿ ಅಪಾರ ಲಾಭ ಪಡೆಯುತ್ತಿದ್ದಾರೆ. ಅವರ ಸಾಮಾಜಿಕ ಮತ್ತು ವರ್ಗದ ಸ್ಥಿತಿಗತಿಗಳು ಸುಧಾರಿಸುತ್ತಿವೆ’ ಎಂದು ಬಿಂಬಿಸಲಾಗುತ್ತಿದೆ. ಪರಿಣಾಮವಾಗಿ ದಲಿತರು ಮತ್ತು ಆದಿವಾಸಿ ಸಮುದಾಯಗಳ ಕೆಲವು ವಿಭಾಗಗಳು ಹಿಂದುತ್ವ ರಾಜಕೀಯವನ್ನು ಮೈಗೂಡಿಸಿಕೊಂಡಿವೆ.
ಉದಯೋನ್ಮುಖ ದಲಿತ-ಆದಿವಾಸಿ ನಾಯಕತ್ವವು ಬಂಡವಾಳಶಾಹಿ ಅಭಿವೃದ್ಧಿ ಮತ್ತು ಹಿಂದೂ ಐಕ್ಯತೆಯ ಹೊಸ ಭರವಸೆಯಿಂದ ಉತ್ಕೃಷ್ಟವಾಗಿದೆ. ಮುಂದೆ, ದಲಿತ-ಆದಿವಾಸಿ ನಾಯಕರನ್ನು ಪ್ರಮುಖ ರಾಜಕೀಯ ಸ್ಥಾನಗಳಲ್ಲಿ ಕಾಣಬಹುದು ಎಂಬ ನಂಬಿಕೆಯನ್ನು ನಿರ್ಮಿಸಲು ಬಿಜೆಪಿ ಯಶಸ್ವಿಯಾಗಿದೆ. ನಿರ್ದಿಷ್ಟವಾಗಿ, ದ್ರೌಪದಿ ಮುರ್ಮು ಅವರ ಉಮೇದುವಾರಿಕೆಯು ಅಂತಹ ನಂಬಿಕೆಯನ್ನು ದೃಢವಾಗಿ ದೃಢೀಕರಿಸುತ್ತದೆ ಮತ್ತು ಮಧ್ಯಮ ದಲಿತ-ಆದಿವಾಸಿ ವಿಭಾಗಗಳ ಮೇಲೆ ಹಿಂದುತ್ವದ ಪ್ರಾಬಲ್ಯವನ್ನು ಬಲಪಂಥೀಯ ಪಕ್ಷವು ಬಲಪಡಿಸಲು ಸಹಾಯ ಮಾಡುತ್ತದೆ.

ಇನ್ನೊಂದು ಬದಿಯಲ್ಲಿ ನಿಷ್ಕ್ರಿಯ, ಮಧ್ಯಮ ಮತ್ತು ಮಹತ್ವಾಕಾಂಕ್ಷೆಯ ದಲಿತ-ಆದಿವಾಸಿ ವರ್ಗಗಳು ಹಿಂದುತ್ವ ರಾಜಕಾರಣದ ಬ್ಯಾರಕ್‌ಗಳಿಗೆ ಬದಲಾಗುತ್ತಿವೆ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಮತ್ತು ಸ್ವತಂತ್ರ ದಲಿತ-ಆದಿವಾಸಿ ನಾಯಕತ್ವದ ಅನುಪಸ್ಥಿತಿಯ ಬಗ್ಗೆ ಪ್ರಾಮಾಣಿಕ ಚರ್ಚೆಗಳು ದಿಕ್ಕು ತಪ್ಪುತ್ತಿದೆ. ಕೆಲವು ದಲಿತ-ಆದಿವಾಸಿ ನಾಯಕರು ತಮ್ಮ ಸಮುದಾಯದವರ ಮೇಲೆ ದೌರ್ಜನ್ಯ ಮತ್ತು ಹಿಂಸಾಚಾರವಾದರೂ ಮೌನವಾಗಿರುವುದು ಕಾಣುತ್ತಿದೆ. ನಿಷ್ಕ್ರಿಯ ಮತ್ತು ಸಂಯೋಜಕ ದಲಿತ-ಆದಿವಾಸಿ ರಾಜಕೀಯ ಗಣ್ಯರು ಬಿಜೆಪಿಯ ‘ಸಬಾಲ್ಟರ್ನ್ ಹಿಂದುತ್ವ’ವನ್ನು ಒಪ್ಪಿಕೊಂಡುಬಿಟ್ಟಿದ್ದಾರೆ.
ಸ್ವಾತಂತ್ರ್ಯದ ನಂತರದ ಇತಿಹಾಸದಲ್ಲಿ ದಲಿತ-ಆದಿವಾಸಿ ಸಮುದಾಯಗಳು ಬಾಹ್ಯ, ಶಕ್ತಿಹೀನ ಮತ್ತು ಮುಖ್ಯವಾಹಿನಿಯ ರಾಜಕೀಯ ಚರ್ಚೆಗಳಲ್ಲಿ ಅದೃಶ್ಯವಾಗಿ ಉಳಿದಿವೆ ಎಂಬುದನ್ನು ಗುರುತಿಸಬಹುದು. ಸಾಮಾಜಿಕ ದೌರ್ಜನ್ಯಗಳು, ಪೊಲೀಸ್ ದೌರ್ಜನ್ಯಗಳು, ಕಾರ್ಮಿಕ ಮತ್ತು ಭೂಮಿಯ ಕಾರ್ಪೊರೇಟ್ ಶೋಷಣೆ ಮತ್ತು ಸಾಮಾಜಿಕ ನ್ಯಾಯ ಮತ್ತು ಘನತೆಗಾಗಿ ಅವರ ಬೇಡಿಕೆಗಳ ಬಹಿರಂಗವಾದ ಗಡೀಪಾರು ಪ್ರಕರಣಗಳು ಕೊನೆಯಾಗಿಲ್ಲ. ದಲಿತರು ಮತ್ತು ಆದಿವಾಸಿಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಮೇಲಿನ ಪಕ್ಷಿನೋಟವು ಅವರಲ್ಲಿ ಹೆಚ್ಚಿನವರು ಅನಿಶ್ಚಿತವಾಗಿದ್ದಾರೆ ಮತ್ತು ದರಿದ್ರ ಸಾಮಾಜಿಕ ಪರಿಸ್ಥಿತಿಗಳಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ನ್ಯಾಯಾಂಗ, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು ಮತ್ತು ಉನ್ನತ ಅಧಿಕಾರಶಾಹಿಯಂತಹ ಮುಖ್ಯವಾಹಿನಿಯ ಅಧಿಕಾರದ ಸಂಸ್ಥೆಗಳಲ್ಲಿ ಅವರ ಭಾಗವಹಿಸುವಿಕೆ ಕನಿಷ್ಠವಾಗಿದೆ.
1970ರ ದಶಕದ ಮಧ್ಯಭಾಗದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಜೆಎಂಎಂ, ಬಿಎಸ್‌ಪಿ, ಮತ್ತು ಲೋಕ ಜನಶಕ್ತಿ ಪಾರ್ಟಿಯಂತಹ ಪಕ್ಷಗಳ ರಾಜಕೀಯ ಹೋರಾಟದ ಬಳಿಕವೇ ದಲಿತರು ಮತ್ತು ಆದಿವಾಸಿಗಳು ರಾಜಕೀಯದಲ್ಲಿ ಗುರುತಿಸಲ್ಪಟ್ಟಿದ್ದು. ಆದರೆ ದಲಿತ-ಆದಿವಾಸಿ ಸಮೂಹಕ್ಕೆ ಈಗ ದ್ರೌಪದಿ ಮುರ್ಮು ಅವರನ್ನು ಹೊಸ ರಾಷ್ಟ್ರಪತಿಯಾಗಿ ಸ್ವಾಗತಿಸುವುದು ಭಾವನಾತ್ಮಕ ಸಾಂತ್ವನದಂತಿದೆ. ವಿಪರ್ಯಾಸವೆಂದರೆ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರ ಉಮೇದುವಾರಿಕೆಯನ್ನು ಪ್ರಸ್ತುತಪಡಿಸುವುದು ಬಿಜೆಪಿಯ ‘ಸಬಾಲ್ಟರ್ನ್ ಹಿಂದುತ್ವ’ ಇಮೇಜ್ ಅನ್ನು ಇನ್ನಷ್ಟು ಸುಧಾರಿಸಲು ಪರಿಣಾಮಕಾರಿ ತಂತ್ರವಾಗಿದೆ. ಇದು ಜಾರ್ಖಂಡ್, ಗುಜರಾತ್, ಮಧ್ಯಪ್ರದೇಶ, ಒರಿಸ್ಸಾ ಮತ್ತು ಛತ್ತೀಸ್‌ಗಢದ ಬಡ ಆದಿವಾಸಿಗಳ ಮೇಲೆ ತೀವ್ರವಾಗಿ ಪರಿಣಾಮಬೀರಲಿದೆ.