ರಾಜ್ಯ ಬಿಜೆಪಿಯಲ್ಲಿನ (Bjp) ಭಿನ್ನಮತಕ್ಕೆ ಅಂತಿಮವಾಗಿ ಬ್ರೇಕ್ ಹಾಕಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ (Bjp high command) ಮಾರ್ಚ್ 20 ರಂದು ಬಿಜೆಪಿ ಅಧ್ಯಕ್ಷ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಹ ಬಿಜೆಪಿಗೆ ಅಧ್ಯಕ್ಷರ ನೇಮಕವಾಗಬೇಕಿದೆ. ಇತ್ತ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಅಧ್ಯಕ್ಷರ ನೇಮಕವಾಗದಬೇಕಾದ ಕಾರಣ, ರಾಜ್ಯ ಘಟಕದಲ್ಲಿ ಅಧ್ಯಕ್ಷ ಮರು ನೇಮಕ ಅಥವಾ ಬದಲಾವಣೆ ಕೂಗು ಎದ್ದಿದೆ. ಹೀಗಾಗಿ ಬಿ.ವೈ. ವಿಜಯೇಂದ್ರರ (BY Vijayendra) ವಿರೋಧಿ ಬಣ, ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ.

ಈ ಮಧ್ಯೆ ಹೈಕಮಾಂಡ್ ನಾಯಕರು ಶಿವರಾಜ್ ಸಿಂಗ್ ಚೌಕ್ಲಣ್ಗೆ (Shivaraj singh Chauhan) ಅಧ್ಯಕ್ಷರನ್ನ ಆಯ್ಕೆ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಾಗಿ ಮಾರ್ಚ್ 20 ರಂದು ಶಿವರಾಜ್ ಸಿಂಗ್ ಚೌಕ್ಲಣ್ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. ಮಾರ್ಚ್ 20ರಂದೇ ನೂತನ ಅಧ್ಯಕ್ಷರ ಆಯ್ಕೆಯಾಗುವ ನಿರೀಕ್ಷೆಯಿದೆ.