• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿದ್ಯುತ್ ನಿಗಮದ ಅವೈಜ್ಞಾನಿಕ ಭಡ್ತಿಗೆ ಹೈಕೋರ್ಟ್ ತಡೆ

ಪ್ರತಿಧ್ವನಿ by ಪ್ರತಿಧ್ವನಿ
March 10, 2025
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಶಿವಮೊಗ್ಗ: ಕರ್ನಾಟಕ ವಿದ್ಯುತ್ ನಿಗಮದ ( Electricity Corporation )ಅವೈಜ್ಞಾನಿಕ ಭಡ್ತಿಗೆ ಹೈಕೋರ್ಟ್ ( High Court ) ತಡೆ ನೀಡಿದೆ. 16ನೇ ಕೇಡರ್‌ನಲ್ಲಿದ್ದ ಅಧಿಕಾರಿ ಒಂದೆರಡು ವರ್ಷದಲ್ಲಿ 7ನೇ ಕೇಡರ್‌ಗೆ ಭಡ್ತಿ ಪಡೆಯುತ್ತಿದ್ದರು. ಇದು ಯಾವ ರೀತಿಯ ಭಡ್ತಿ ಎಂಬುದೇ ಯಕ್ಷಪ್ರಶ್ನೆಯಾಗಿತ್ತು. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ನಿಗಮದ ಎಂಜಿನಿಯರ್ಗಳಿಗೆ ಕೊನೆಗೂ ಜಯ ಸಿಕ್ಕಿದೆ.

ADVERTISEMENT

ರಾಜ್ಯ ಸರ್ಕಾರ 1986ಕ್ಕೆ ಮೊದಲಿದ್ದ ಭಡ್ತಿ ಯೋಜನೆಯನ್ನು ವಿವಾದಗಳಿಂದಾಗಿ ಕೈಬಿಟ್ಟಿತ್ತು. ಆದರೆ, ಯಾವುದೇ ಇಲಾಖೆ, ನಿಗಮದಲ್ಲಿ ಇಲ್ಲದ ಭಡ್ತಿ ಯೋಜನೆ ಮಾತ್ರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ದಲ್ಲಿ ಇನ್ನೂ ಚಾಲ್ತಿಯಲ್ಲಿತ್ತು. ಇದರಿಂದ ಪ್ರಾಮಾಣಿಕವಾಗಿ ಸಹಾಯಕ ಎಂಜಿನಿಯರ್‌ಗಳು ಅನ್ಯಾಯಕ್ಕೆ ಒಳಗಾಗಿದ್ದರು. ಡಿಪ್ಲೊಮಾ ಪದವಿ ಮೇಲೆ ಜೂನಿಯರ್ ಎಂಜಿನಿಯರ್ ಆಗಿ ಬಂದವರು ಒಂದೆರಡು ವರ್ಷದಲ್ಲಿ ಎಇ (ಸಹಾಯಕ ಎಂಜಿನಿಯರ್) ಆಗಿ ಭಡ್ತಿ ಪಡೆದು ಸೇವಾ ಹಿರಿತನವನ್ನು ಕೂಡ ನಡೆಯುತ್ತಿದ್ದರು. ಆದರೆ ಬಿಇ ಮುಗಿಸಿ ಬಂದವರಿಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಹೋಗಿದ್ದ ಉದ್ಯೋಗಿಗಳು 2012ರಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ 2024ರ ಡಿ. 4ರಂದು ತೀರ್ಪು ನೀಡಿದೆ.

BharathShetty: ನಟಿಯನ್ನು ಬಚಾವ್‌ ಮಾಡಲು ಮೂವರು ಸಚಿವರು ಇದ್ದಾರೆ..! #ranyarao #congress #bjp #pratidhvani

ತಕರಾರು ಏನು?: ಡಿಪ್ಲೊಮಾ ಮಾಡಿದವರು ಜಿ ಇ (ಜೂನಿಯರ್ ಎಂಜಿನಿಯರ್) ಹುದ್ದೆಗೆ ಅರ್ಜಿ ಹಾಕಬಹುದು. ಬಿಇ ಮಾಡಿದವರು ಎಇ (ಸಹಾಯಕ ಎಂಜಿನಿಯರ್) ಹುದ್ದೆಗೆ ಅರ್ಜಿ ಹಾಕಬಹುದು. ಜಿಇಗೆ ನೇಮಕ ಆದವರು ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಆಮೇಲೆ ಅವರು ಎಇಯಾಗಿ ಭಡ್ತಿ ಹೊಂದಲು ಇಲಾಖೆ ವತಿಯಿಂದ ನಡೆಯುವ ಪರೀಕ್ಷೆ ಬರೆಯಬೇಕು ಅಥವಾ ಡಿಪಿಆರ್ ನಿಯಮ ಪ್ರಕಾರ ಭಡ್ತಿ ಪಡೆಯಬಹುದು ಎಂದು ನಿಯಮ. ಆದರೆ ನಿಗಮದಲ್ಲಿ ಜೆಇ ಆಗಿ ಸೇವೆಗೆ ಸೇರಿ ಒಂದೇ ವರ್ಷಕ್ಕೆ ಹಲವರಿಗೆ ಎಇಯಾಗಿ ಭಡ್ತಿ ನೀಡಲಾಗುತ್ತಿತ್ತು. ಇದರಿಂದಾಗಿ 16ನೇ ಕೇಡರ್‌ನಲ್ಲಿದ್ದವರು ಒಂದೇ ವರ್ಷದಲ್ಲಿ 7ನೇ ಕೇಡರ್‌ಗೆ ಬರುತ್ತಿದ್ದರು.
1987ರ ಹಿಂದೆ ಜೆಇ ಆಗಿ ಬಂದವರು ನಿಗಮದ ಎನ್‌ಸಿ ಪಡೆದು ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದರು. ಆ ರೀತಿ ಕಳುಹಿಸಿದವರನ್ನು ಎಇ ಎಂದು ಪರಿಗಣಿಸ ಲಾಗುತ್ತಿತ್ತು. ಒಬ್ಬ ವ್ಯಕ್ತಿ 10 ವರ್ಷ ಸೇವೆ ಸಲ್ಲಿಸಿದ್ದರೆ 3ನೇ ಒಂದು ಭಾಗದಷ್ಟು ಸೇವಾ ಹಿರಿತನದೊಂದಿಗೆ ಬಡ್ತಿ ನೀಡಲಾಗುತ್ತಿತ್ತು. ಸರಕಾರ ಈ ವ್ಯವಸ್ಥೆಯನ್ನು 1987ರಲ್ಲಿ ಕೈಬಿಟ್ಟಿತ್ತು. ಆದರೆ 1994ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಈ ವ್ಯವಸ್ಥೆ ರದ್ದು ಮಾಡಲಾಗುವುದು ಎನ್ನಲಾಗಿದ್ದರೂ ಈವರೆಗೆ ಮಾಡಿರಲಿಲ್ಲ.

Budget Session :ಸಿಎಂ ಮುಂದೆನೆ ಯತ್ನಾಳ್‌ಗೆ ಕ್ಷಮೆ ಕೇಳಿದ ಜಮೀರ್..!‌ #pratidhvani #zameerahmed #yatnal

ಡಿಪ್ಲೊಮಾ ಮಾಡಿಕೊಂಡು ಬಂದವರು ನಿಗಮದ ಎನ್‌ಸಿ ಪಡೆಯದೆ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ) ಅಡಿ ನೋಂದಾಯಿತ ರೆಗ್ಯುಲರ್ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಇ ಪದವಿ ಪಡೆದಿದ್ದರು. ಎಂಜಿನಿಯರಿಂಗ್ ಪದವಿ ಕಲಿಸಲು ಯೋಜನಾ ಪ್ರದೇಶದ ಹತ್ತಿರದಲ್ಲಿ ಯಾವುದೇ ಸಂಜೆ ಕಾಲೇಜುಗಳಿಲ್ಲ. ಆರ್‌ಟಿಪಿಎಸ್ ಸೇವೆಯಲ್ಲಿದ್ದವರು 180 ಕಿ.ಮೀ. ದೂರದಲ್ಲಿರುವ ಹೈದರಾಬಾದ್ ಕಾಲೇಜಿನಲ್ಲಿ, ವಾರಾಹಿಯಲ್ಲಿದ್ದವರು ತುಮಕೂರಿನಲ್ಲಿ, ಶಿವಮೊಗ್ಗದಲ್ಲಿರುವವರು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಆದರೆ ವಿಟಿಯು ನಿಯಮದ ಪ್ರಕಾರ, ಸೇವೆಯಲ್ಲಿದುಕೊಂಡೇ ಪೂರ್ಣಾವ ಧಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬರುವುದೇ ಇಲ್ಲ. ಉದ್ಯೋಗ ಮಾಡುತ್ತ ಎಂಜಿನಿಯರಿಂಗ್ ಪದವಿ ಮುಗಿಸಲೂ ಬರುವುದಿಲ್ಲ. ಅಷ್ಟೇ ಅಲ್ಲದೆ ಸಂಬಂಧ ಇಲ್ಲದ ಕೋರ್ಸ್‌ಗಳನ್ನು (ಆಟೋಮೊಬೈಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್) ಸಹ ಮಾಡಿ ಭಡ್ತಿ ಪಡೆದಿದ್ದರು. ಈ 3 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಅನ್ಯಾಯಕ್ಕೊಳಗಾದ ಕೆಪಿಸಿಎಲ್ ಎಂಜಿನಿಯರ್ಗಗಳು ಕೋರ್ಟ್
ಮೊರೆ ಹೋಗಿದ್ದರು. ಕೋರ್ಟ್ ಕೊನೆಗೂ ನ್ಯಾಯ ದೊರಕಿಸುವ ಕೆಲಸ ಮಾಡಿದೆ.

Tags: CadreElectricity CorporationengineerGovernmenthigh courtKarnatakakarnataka governament
Previous Post

ಜೆಡಿಎಸ್ ಉಳಿವಿಗೆ ದೇವೇಗೌಡರ ಮಾಸ್ಟರ್ ಪ್ಲಾನ್..! ರಾಜ್ಯಾದ್ಯಂತ 4 ಬೃಹತ್ ಸಮಾವೇಶಕ್ಕೆ HDD ಸೂಚನೆ !

Next Post

ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ಕೊಡಿ.. ಕೇಂದ್ರ ಸಚಿವರಿಗೆ ಪತ್ರ

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post

ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ಕೊಡಿ.. ಕೇಂದ್ರ ಸಚಿವರಿಗೆ ಪತ್ರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada