• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿಯವ್ರು ಒಳ ಸಂಚಿನಿಂದ ವೋಟ್‌ ಡಕಾಯಿತಿ ಮಾಡಿದ್ದಾರೆ : ಸಿದ್ದರಾಮಯ್ಯ ಆಕ್ರೋಶ..!

ಬಿಜೆಪಿಯವ್ರಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು. ನಿಷ್ಪಕ್ಷಪಾತವಾದ ಚುನಾವಣೆಯಲ್ಲಿ ನಂಬಿಕೆ ಇಲ್ಲದವರು. ಎಂತಹ ಅಪರಾಧ ಎಸಗಲು ಹಿಂಜರಿಯುವುದಿಲ್ಲ : ಸಿಎಂ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
May 5, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಬಿಜೆಪಿಯವ್ರು ಒಳ ಸಂಚಿನಿಂದ ವೋಟ್‌ ಡಕಾಯಿತಿ ಮಾಡಿದ್ದಾರೆ : ಸಿದ್ದರಾಮಯ್ಯ ಆಕ್ರೋಶ..!
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ವೋಟ್ ಚೋರಿಯಷ್ಟೇ ಅಲ್ಲಾ, ಇದು ವೋಟ್ ಡಕಾಯಿತಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ADVERTISEMENT

ನಗರದ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೃಂಗೇರಿಯಲ್ಲಿ ಅಂಚೆ ಮತ ಪತ್ರವನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಆದರೂ ಸಹ ಕೋರ್ಟ್ ಆದೇಶದಂತೆ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಆಯಿತು. 2023ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ರಾಜೇಗೌಡ ಗೆದ್ದಿದ್ದರು ಎಂದು ಹೇಳಿದ್ದಾರೆ.

Rizwan Arshad : ಮುಸ್ಲಿಂ ಸಮುದಾಯದ ನೋವನ್ನು ಕೆಲವ್ರು ರಾಜಕೀಯಕ್ಕೆ ಬಳಸಿಕೊಂಡ್ರು.. #pratidhvani

ರಾಜೇಗೌಡಗೆ 59,171 ಮತಗಳು ಬಂದಿದ್ದವು. ಬಿಜೆಪಿಯ ಜೀವರಾಜ್​ಗೆ 58,970 ಮತಗಳು ಪಡೆದಿದ್ದರು. ರಾಜೇಗೌಡರಿಗೆ ಇವಿಎಂನಿಂದ ಬಂದ‌ ಮತಗಳು 58,602. ಪೋಸ್ಟಲ್​ನಿಂದ ಬಂದಿದ್ದು 569. ಜೀವರಾಜ್​ಗೆ ಇವಿಎಂನಿಂದ 58,278 ಮತಗಳು ಬಂದಿದ್ದವು. ಅವರಿಗೆ ಪೋಸ್ಟಲ್​ನಿಂದ ಬಂದ‌ ಮತ 692. ಒಟ್ಟಾರೆಯಾಗಿ 201 ಮತಗಳಿಂದ ರಾಜೇಗೌಡ ಅವರು ಗೆದ್ದಿದ್ದರು. ಇವೆಲ್ಲವೂ ಸಿಂಧು ಮತಗಳೆಂದು ರಿಟರ್ನಿಂಗ್ ಅಧಿಕಾರಿಗಳು, ಚುನಾವಣಾ ಏಜೆಂಟ್​ಗಳು ಸಹಿ ಹಾಕಿ ಘೋಷಿಸಿದ್ದರು ಎಂದು ತಿಳಿಸಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜೇಗೌಡ ಕಳೆದ ಚುನಾವಣೆಯಲ್ಲಿ 201 ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಅವರ ಎದುರಾಳಿ ಬಿಜೆಪಿಯ ಜೀವರಾಜ್ ಅವರಿಗೆ 58970 ಮತಗಳು ಬಂದಿದ್ದವು. ಇವಿಎಂನಲ್ಲಿ ರಾಜೇಗೌಡರಿಗೆ 58602ಮತಗಳು ಬಂದಿದ್ದವು. ಅಂಚೆಯಲ್ಲಿ 569 ಮತಗಳು ಬಂದಿದ್ದವು. ಜೀವರಾಜ್ ಅವರಿಗೆ ಇವಿಎಂನಲ್ಲಿ 58278ಮತಗಳು ಬಂದಿದ್ದವು. ಅಂಚೆಯಲ್ಲಿ 692 ಮತಗಳನ್ನು ಪಡೆದಿದ್ದರು. ಇವೆಲ್ಲವೂ ಅರ್ಹ ಮತಗಳೆಂದು ಚುನಾವಣಾಧಿಕಾರಿಗಳು, ಏಜೆಂಟ್ಗಳು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಾಹುಲ್ ಸಲಹೆ ಕೈಬಿಟ್ಟದ್ದೇ ಕಾಂಗ್ರೆಸ್‌ಗೆ ಹಿನ್ನಡೆ? ತಮಿಳುನಾಡು ಫಲಿತಾಂಶದ ಸುತ್ತ ಹೊಸ ಚರ್ಚೆ

ಫಲಿತಾಂಶ ಘೋಷಣೆ ಆದ ಬಳಿಕ ಜೀವರಾಜ್ ಅಕ್ರಮ ಆಗಿದೆ ಎಂದು ರಾಜ್ಯ ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ದಾವೆ ಹೂಡಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ, 6-03-26ರಲ್ಲಿ ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ಮರು ಎಣಿಕೆಯಲ್ಲಿ ರಾಜೇಗೌಡರಿಗೆ 314 ಮತಗಳು ಮಾತ್ರ ಅರ್ಹ ಎಂದು ಆಗುತ್ತದೆ. 255 ಮತಗಳು ಅನರ್ಹ ಎಂದು ಆಗುತ್ತದೆ. ಜೀವರಾಜ್ ಅವರಿಗೆ ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ ವೋಟ್ ಚೋರಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿಯಾಗಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಬಳಿಕ ಎಣಿಕೆ ಮಾಡಿದ ಎಲ್ಲಾ ದಾಖಲಾತಿಗಳನ್ನು ಟ್ರಂಕ್ನಲ್ಲಿಡಲಾಗುತ್ತದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲೂ ಆವರ ಸರ್ಕಾರ ಇತ್ತು. ಅವರು ಹೇಳುವ ಪ್ರಕಾರ ಡಬಲ್ ಇಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು ಎಂದು ಕಿಡಿಕಾರಿದ್ದಾರೆ.

ಗಂಭೀರ ಸ್ವರೂಪದ ಕ್ರಿಮಿನಲ್ ಸಂಚಿನ ಮಾಹಿತಿ ಇದೆ..

ರಾಜೇಗೌಡರಿಗೆ ಮೂರನೇ ಸುತ್ತಿನಲ್ಲಿ ಲಭಿಸಿದ್ದ ಎಲ್ಲಾ 170 ಅಂಚೆ ಮತಗಳು ಈಗ ಅನರ್ಹವಾಗಿವೆ. ಅವು ಹಿಂದೆ ಮತ ಎಣಿಕೆ ಮಾಡಿದಾಗ ಅರ್ಹವಾಗಿ ಪರಿಗಣಿಸಲಾಗಿತ್ತು. ನಮ್ಮ ಪಕ್ಷದಿಂದ ಸುಧೀರ್ ಕುಮಾರ್ ಮರೋಳಿ ಅವರು ಏಜೆಂಟ್ ಆಗಿದ್ದರು. ಎಲ್ಲಾ ಏಜೆಂಟರು 2023ರಲ್ಲಿ ಸಹಿ ಹಾಕಿದ ದಾಖಲೆಯಿದೆ. ಮತಗಳು ಅನರ್ಹವಾಗಿದ್ದರೆ ಆಗಲೇ ಎಲ್ಲರೂ ಆಕ್ಷೇಪ ಎತ್ತಬಹುದಾಗಿತ್ತು. ಆಗ ಯಾರೂ ಆಕ್ಷೇಪ ಎತ್ತಲಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಮರು ಎಣಿಕೆ ಸಂದರ್ಭದಲ್ಲಿ ಚುನಾವಣಾ ವೀಕ್ಷಕರು ಸಹ ಬಂದಿದ್ದರು. ಗಂಭೀರ ಸ್ವರೂಪದ ಕ್ರಿಮಿನಲ್ ಸಂಚು ನಡೆದಿರುವುದಾಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಅಂಚೆ ಮತಪತ್ರಗಳನ್ನು ಫೊರೆನ್ಸಿಕ್ ಪರಿಶೀಲನೆಗೆ ಸಲ್ಲಿಸಬೇಕಿತ್ತು. ಚುನಾವಣಾ ಫಲಿತಾಂಶ ಘೋಷಣೆಯನ್ನು ನ್ಯಾಯಾಲಯಕ್ಕೆ ಬಿಡಬೇಕಾಗಿತ್ತು. ಅದನ್ನು ಬಿಟ್ಟು ಚುನಾವಣಾಧಿಕಾರಿಗಳೇ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.

CM Siddaramaiah :  ಏಯ್‌.. ಯಾರಯ್ಯಾ ನೀನು ಮಧ್ಯದಲ್ಲೇ ಮಾತಾಡ್ತೀಯಾ..? #siddaramaiah #karnataka

ಚುನಾವಣಾ ವೀಕ್ಷಕರು ಅನುಮತಿ ಪಡೆದ ಬಳಿಕವೇ ಫಲಿತಾಂಶ ಘೋಷಿಸಬೇಕು. ಆದರೆ ಚುನಾವಣಾಧಿಕಾರಿಗಳು ಚುನಾವಣಾ ವೀಕ್ಷಕರ ಅನುಮತಿಯಿಲ್ಲದೇ ಆತುರಾತುರವಾಗಿ ಫಲಿತಾಂಶ ಘೋಷಿಸಿದ್ದಾರೆ. ತಪ್ಪು ಮಾಡಿದ ಯಾರೇ ಆಗಿದ್ದರೂ, ಅಂತಹ ಅಧಿಕಾರಿಗೆ ಶಿಕ್ಷೆಯಾಗಬೇಕು. ಈ ಹಿಂದೆ ಬಿಜೆಪಿಯವರು ಚಿಲುಮೆ ಎಂಬ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನೇ ತಿದ್ದುಪಡಿ ಮಾಡಲು ಪ್ರಯತ್ನಿಸಿದ್ದರು ಎಂದು ಪ್ರತಿಧ್ವನಿಯ ಚಿಲುಮೆ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಆಳಂದದಲ್ಲಿ ನೈಜ ಮತದಾರರನ್ನೇ ಬಿಟ್ಟು ಬಿಟ್ಟಿದ್ದರು. ಬಿಜೆಪಿಯವರಿಗೆ ಮೊದಲಿನಿಂದಲೂ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು. ನಿಷ್ಪಕ್ಷಪಾತವಾದ ಚುನಾವಣೆಯಲ್ಲಿ ನಂಬಿಕೆ ಇಲ್ಲದವರು. ಅವರು ಇಂತಹ ಅಪರಾಧ ಎಸಗಲು ಹಿಂಜರಿಯುವುದಿಲ್ಲ. ಕೇಂದ್ರದ ಇಬ್ಬರು ಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಮರ್ಥನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜೇಗೌಡ ನೀಡಿದ ದೂರಿನ ಮೇಲೆ ಎಫ್ಐಆರ್ ಆಗಿದೆ. ಇದು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ. ಇದು ಮುಂದಿನ2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು. ಈ ಹಿಂದೆ ನಡೆದ ಮೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಜಯ ಗಳಿಸಿದೆ. ಇದರರ್ಥ ನಮ್ಮ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ನಮ್ಮ ಕಾರ್ಯಕ್ರಮಗಳು ಮತದಾರರನ್ನು ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ, ಅಭಿಮಾನ ಇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷನ ನುಡಿದಂತೆ ನಡೆಯುವ ಪಕ್ಷ. ಕೊಟ್ಟ ಮಾತಿನಂತೆ ನಡೆಯುವ ಪಕ್ಷ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿದ್ದಾವೆ. ಎಸ್‌ಡಿಪಿಐಗೆ ಮತ ಬಿದ್ದಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುವುದನ್ನು ಪರಿಶೀಲನೆ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: Bagalakote By Pollsbjp karnatakaby vijayaendraCM Siddaramaiahcongress karnatakaD N jeevaraj BJPDavanagere By PollDK ShivakuamrEVM VotesMamata BanerjeePostal VotesPratidhvaniR ashokaShringeri RecountingT D RajegowdaTMCWest Bengal elections
Previous Post

ಬಾಗಲಕೋಟೆ, ದಾವಣಗೆರೆ ಬೈ ಎಲೆಕ್ಷನ್‌ : ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿಂದೆ ಸಂತೋಷ್ ಲಾಡ್ ಮ್ಯಾಜಿಕ್..!

Next Post

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

Related Posts

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌
Top Story

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

by ಪ್ರತಿಧ್ವನಿ
May 13, 2026
0

ಚೆನೈ : ನೂತನವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ಜೋಸೆಫ್‌ ವಿಜಯ್‌ ತಮ್ಮ ಮಿತ್ರಪಕ್ಷಗಳ ಮನವಿಗೆ ಸ್ಪಂದಿಸಿ, ತಮ್ಮ ಓಎಸ್‌ಡಿಯಾಗಿದ್ದ ಜ್ಯೋತಿಷ್ಯಿಯ ನೇಮಕವನ್ನು ವಾಪಸ್‌ ಪಡೆದಿದ್ದಾರೆ. ವಿಜಯ್‌ ಪ್ರಮಾಣ ವಚನ...

Read moreDetails
Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

May 13, 2026
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
Next Post
ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada