ಚಾಮರಾಜಪೇಟೆ ಇದ್ಗಾ ಮೈದಾನದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಿವಾದಗಳು ಕೋರ್ಟಿನ ಮೂಲಕ ಕಂದಾಯ ಇಲಾಖೆಯದ್ದು ಎಂದು ಡಿಕ್ಲೆರ್ ಮಾಡಲಾಗಿದೆ. ಒಂದು ಬಾರಿ ಸರಕಾರದ್ದ ಅಂತ ಕ್ಲಿಯರ್ ಆದ ಮೇಲೆ ಅಲ್ಲಿಯ ಶಾಸಕ ವಿರೋಧ ಏಕೆ? ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹ್ಮದ್ ಗಣೇಶ ಉತ್ಸವಕ್ಕೆ ಅವಕಾಶ ಕೊಡ್ತಿಲ್ಲ ಅಂತ ಹೇಳುತ್ತಿದ್ದಾರೆ. ಇದು ಕೋಮು ಪ್ರಚೋದನೆಯಾಗುತ್ತದೆ ಸರಕಾರಕ್ಕೆ ಗೊತ್ತಿದ್ರು ಕೂಡಾ ಅವರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಅವರ ಮೇಲೆ ಕೋಮು ಪ್ರಚೋದನೆ ಯಾವುದೆ ಕೇಸ್ ಮಾಡಿಲ್ಲ. ವಿಶ್ವಭಾರತಿ ಸಂಸ್ಥೆಯ ಮುಖ್ಯಸ್ಥ ಬಾಸ್ಕರ್ ಅವರು ಕೋಮು ಪ್ರಚೋದನೆ ಕೇಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದ ಅವರು, ಸರಕಾರ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಈ ಕಾರಣದಿಂದ ಬಿಜೆಪಿ ಸರಕಾರದ ಮೇಲೆ ಜನರು ಸಿಟ್ಟಾಗಿದ್ದಾರೆ. ಜಮೀರ್ ಅಹ್ಮದ್, ಅಬ್ದುಲ್ ರಜಾಕ್ ಮೇಲೆ ಕೇಸ್ ಮಾಡಬೇಕು. ಆದರೆ ಬಿಜೆಪಿ ನಿರ್ಲಜ್ಯ, ನೀಚ ಕೆಲಸ ಮಾಡುತ್ತಿದೆ. ಹಿಂದೂಗಳ ಮೇಲೆ ಮಾತ್ರ ಕೇಸ್ ದಾಖಲು ಮಾಡೋದು ಎಷ್ಟು ಸರಿ? ಅವರಿಬ್ಬರ ಮೇಲೆ ಯಾಕೆ ಕೇಸ್ ಮಾಡ್ತಿಲ್ಲ? ಇಂತಹ ಘಟನೆಗಳಿಂದಲೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಿಡಿಸಿದ್ದಾರೆ.

ಸರಕಾರದ ಆಸ್ತಿ ಆದ ಮೆಲೆ ಸರಕಾರ ನಿರ್ಧಾರ ತಗೋಬೇಕು. ಆ ಇದ್ಗಾ ಮೈದಾನದಲ್ಲಿ ರಾಷ್ಟ್ರದ್ವಜ ಹಾರಬೇಕು, ಒಂದೆ ಮಾತರಂ ಹಾಡಬೇಕು ಎಂದರು. ಬಾಸ್ಕರ ಅವರ ಮೇಲೆ ಇರುವ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ರೆ ಜಮೀರ್ ಮತ್ತು ಅಬ್ದುಲ್ ರಜಾಕ್ ಅವರ ಮೆಲೂ ಕೇಸ್ ಹಾಕಬೇಕು ಎಂದರು.