ಬಿಗ್ ಬಾಸ್ ನ ಈ ವಾರದ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು ಎರಡು ತಂಡಗಳಾಗಿ ವಿಂಗಡಣೆಯಾಗಿದೆ.ಹಾಗೂ ಒಂದು ತಂಡದ ಕ್ಯಾಪ್ಟನ್ ತ್ರಿವಿಕ್ರಮ್ ಹಾಗೂ ಮತ್ತೊಂದು ತಂಡದ ನಾಯಕ ರಜತ್.ಬಿಗ್ ಬಾಸ್ ಈ ಎರಡು ತಂಡಗಳಿಗೂ ಟಾಸ್ಕ್ ನೀಡುತ್ತಾರೆ.ಗೆದ್ದ ತಂಡ ಸೋತ ತಂಡದವರನ್ನು ನಾಮಿನೇಟ್ ಮಾಡ್ಬೇಕು ಎಂಬ ರೂಲ್ಸ್ ಇರುತ್ತದೆ.

ಕರುನಾಡ ಕಿಲಾಡಿಗಳು ತಂಡ ಟಾಸ್ಕ್ ಗೆದ್ದಿದೆ , ಹಾಗೂ ರಜತ್ ತಂಡದಿಂದ ನಾಯಕ ರಜತ್ ಅವರನ್ನೆ ನಾಮಿನೇಟ್ ಮಾಡುತ್ತಾರೆ. ನಾಮಿನೇಟ್ ಮಾಡುವಾಗ ತ್ರಿವಿಕ್ರಮ್ ಅವರು ರಜತ್ಗೆ ನೀವು ಇಂಡಿವಿಜುಯಲ್ ಆಗಿ ಆಡಿ ಎಂದು ಬೇರೆಯವರನ್ನ ಪ್ರವೋಕ್ ಮಾಡುತ್ತೀರಾ, ಹಾಗೂ ನೀವೆ ಸುಪೀರಿಯರ್ ಎಂದು ಅಂದುಕೊಂಡಿದ್ದೀರಾ. ಹಾಗಾಗಿ ನಿಮ್ಮನ್ನ ನಾಮಿನೇಟ್ ಮಾಡ್ತೀನಿ ಎಂಬ ಕಾರಣಗಳನ್ನು ನೀಡುತ್ತಾರೆ. ಈ ಕಾರಣ ಕೇಳಿದಂತ ರಜತ್ ಕೋಪಗೊಂಡು ತ್ರಿ ವಿಕ್ರಮ್ ಮೇಲೆ ರೇಗಾಡುತ್ತಾರೆ.

ಇನ್ನು ಬಿಗ್ ಬಾಸ್ ನ ಮತ್ತೊಂದು ಪ್ರೊಮೊ ಹೊರಬಿದಿದ್ದು, ಎರಡು ತಂಡಗಳಿಗೂ ಬಿಗ್ ಬಾಸ್ ಟಾಸ್ಕ್ ಅನ್ನ ನೀಡಿರುತ್ತಾರೆ. ಈ ಟಾಸ್ಕ್ ಆಡುವಾಗ ಉಸ್ತುವಾರಿಯಾದಂತಹ ಚೈತ್ರ ಅವರು ಪೌಸ್ ಅನ್ನು ಕೊಡುತ್ತಾರೆ.ಇದಕ್ಕೆ ಪದೇಪದೇ ಪಾಸ್ ಕೊಡ್ತೀರಾ ಹಾಗಾಗಿ ಟಾಸ್ಕ್ ಧನರಾಜ್ ಆಡೋದೇ ಬೇಡ ಎಂದು ಆಡೋದನ್ನ ಅಲ್ಲೇ ಸ್ಟಾಪ್ ಮಾಡ್ತಾರೆ.

ಇದಾದ ಬಳಿಕ ಇದೇ ವಿಚಾರವಾಗಿ ರಜತ್ ಹಾಗೂ ಮಂಜು ನಡುವೆ ಜಗಳ ಜೋರಾಗಿಯೇ ನಡೆಯುತ್ತದೆ. ನಿನ್ನೆ ಗೌತಮಿ ವಿಚಾರಕ್ಕೂ ಕೂಡ ರಜತ್ ಅವರು ಜಗಳವಾಡಿದಾಗ ಗೌತಮಿಗೆ ಸಪೋರ್ಟ್ ಮಾಡುವಂತೆ ಮಂಜು ಅವರು ಮಾತನಾಡಿದರು.
ಒಟಿನಲ್ಲಿ ಈ ವಾರ ರಜತ್ ಎಲ್ಲರ ಜೊತೆ ಜಗಳವಾಡಿದ್ದು ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.