ಬಿಗ್ ಬಾಸ್ ನಲ್ಲಿ ವೀಕ್ ಎಂಡ್ ಬಂತು ಅಂದ್ರೆ ಅಂದ್ರೆ ಸ್ಪರ್ಧಿಗಳಿಗೆ ಒಂದು ರೀತಿ ಖುಷಿ ಹಾಗೂ ಭಯ ಎರಡು ಕೂಡ ಇರುತ್ತದೆ.ಅದರಲ್ಲು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಇಡಿ ವಾರ ಯಾರು ತಪ್ಪು ಮಾಡ್ತಾರೆ ಅವರಿಗೆ ಕ್ಲಾಸ್ ತಗೊಳೋದು ಪಕ್ಕಾ..
ಇನ್ನು ಈ ವಾರ ಬಿಗ್ ಬಾಸ್ ಸಾಮ್ರಾಜ್ಯ ಟಾಸ್ಕ್ ನಲ್ಲಿ ಮಹಾರಾಜ ಮಂಜು ಹಾಗು ಯುವರಾಣಿ ಮೋಕ್ಷಿತಾ ಅವ್ರ ಪ್ರಜೆಗಳು ಪರ್ಫಾಮೆನ್ಸ್ ಕೆಲವು ಹೇಳುವಷ್ಟು ಇರಲಿಲ್ಲ..ಹಾಗೂ ಟಾಸ್ಕ್ ಅನ್ನುವದಕ್ಕಿಂತ ಎಲ್ಲವನ್ನೂ ಪರ್ಸನಲ್ ಆಗಿ ತೆಗೆದುಕೊಂಡು ಜಗಳವನ್ನು ಆಡಿದ್ದಾರೆ.
ಇನ್ನು ಈ ವರ ಪಂಚಾಯ್ತಿಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ಮಾಡಬೇಕು ಎಂದು ಪೋಸ್ಟ್ ಹಾಕಿದಾಗ ಸಾಕಷ್ಟು ಜನ ಮಂಜು , ಮಂಜು ಗೌತಮಿಯನ್ನು ನಾಮಿನೇಷನ್ ಇಂದ ಸೇವ್ ಮಾಡಿದ ವಿಚಾರ ಹಾಗೂ ಮೋಕ್ಷಿತ ವಿಷಯದಲ್ಲಿ ಎಲ್ಲವನ್ನು ಕೂಡ ಪರ್ಸನಲ್ ಆಗಿ ತೆಗೆದುಕೊಂಡು ಆಟ ಆಡಿದ ವಿಚಾರ. ಮಂಜು ಮಹಾರಾಜ ಅವತಾರದಲ್ಲಿದ್ದಾಗ ಹನುಮಂತನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂಬುದರ ಬಗ್ಗೆ , ಪ್ರಶ್ನೆ ಮಾಡಬೇಕು ಎಂಬ ಸಾಕಷ್ಟು ಕಾಮೆಂಟ್ಗಳು ಬಂದಿವೆ.
ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬೇಕು ಎಂಬುದರ ಬಗ್ಗೆ ಈಗಾಗಲೇ ಪ್ರೇಕ್ಷಕರು ಚರ್ಚೆ ಮಾಡ್ತಾ ಇದ್ದು ಹೆಚ್ಚು ಜನ ಮೋಕ್ಷಿತ ಅವರ ಹೆಸರನ್ನ ಆಯ್ಕೆ ಮಾಡಿದ್ದಾರೆ.ಒಟ್ಟಿನಲ್ಲಿ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಯಾರಿಗೆಲ್ಲ ಗ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕು.