ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗ್ತಾ ಇದೆ ಜೊತೆಗೆ ಮನೆಯವರ ನಡುವೆ ಮನಸ್ತಾಪಗಳು ಕೂಡ ಜಾಸ್ತಿ ಇದೆ.
ಬಿಗ್ ಬಾಸ್ ನ ಹೊಸ ಪ್ರೋಮೋ ಒಂದು ಹೊರಬಿದ್ದಿದ್ದು ಈ ಪ್ರೊಮೋ ದಲ್ಲಿ ನಾಲ್ಕು ತಂಡದ ಸದಸ್ಯರಿಗೆ ಅವರವರ ತಂಡದ ಬಣ್ಣದ ನೀರು ತುಂಬಿದ ೪ ಸಿಂಟೆಕ್ಸ್ಗಳನ್ನ ಇಟ್ಟಿರುತ್ತಾರೆ. ಹಾಗೂ ಸಿಂಟೆಕ್ಸ್ ಗಳಿಗೆ ಹೋಲ್ ಕೂಡ ಮಾಡಿರುತ್ತಾರೆ. ಪ್ರತಿ ತಂಡದ ಇಬ್ಬರು ಸದಸ್ಯರು ಅವರ ತಂಡಕ್ಕೆ ನೀಡಿದ ಸಿಂಟೆಕ್ಸ್ಗಳ ನೀರನ್ನು ಉಳಿಸಬೇಕು, ಹೋಲಿನಲ್ಲಿ ನೀರು ಹೋಗಿ ಸಿಂಟೆಕ್ಸ್ ಖಾಲಿಯಾಗದಂತೆ ನೋಡಿಕೊಳ್ಳಬೇಕು.

ಹಾಗೂ ಪ್ರತಿ ತಂಡದ ಒಬ್ಬ ಸದಸ್ಯರು ಕೂಡ ಇನ್ನೊಬ್ಬ ತಂಡದ ನೀರನ್ನ ಕಾಲಿ ಮಾಡಲು ಪ್ರಯತ್ನ ಮಾಡಬೇಕು. ಈ ಆಟವಾಡುವಾಗ ಕೆಲವರು ಕೈಗೆ ಗಾಯ ಮಾಡಿಕೊಳ್ಳುತ್ತಾರೆ. ಹಾಗೂ ಒಬ್ಬರು ಇನ್ನೊಬ್ಬರನ್ನು ಎಳೆಯಲು ಬಂದಾಗ ಕಾಲಿನಲ್ಲಿ ಒಡೆಯುವ ಮೂಲಕ ತಮ್ಮ ಸಿಂಟೆಕ್ಸ್ ಅನ್ನ ರಕ್ಷಿಸಿಕೊಳ್ಳುತ್ತಿರುತ್ತಾರೆ.

ಈ ಟಾಸ್ಕ್ ಆಡುತ್ತಿರುವಾಗ ಅನುಷಾ ಗೋಲ್ಡ್ ಸುರೇಶ್ ನನ್ನು ಎಳೆಯಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಸುರೇಶ್ ಕಾಲಿನಿಂದ ಅನುಷಾ ಅವರನ್ನು ಒದೆಯುತ್ತಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜೋರಾಗಿ ಜಗಳವಾಗುತ್ತದೆ.
ಸದ್ಯ ಇವತ್ತಿನ ಪ್ರೋಮೋದಲ್ಲಿ ಇದೊಂದು ವಿಭಿನ್ನ ಟಾಸ್ಕ್ ಆಗಿದ್ದು ಯಾರ ಟ್ಯಾಂಕ್ ಬೇಗ ಖಾಲಿಯಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.





