ಪ್ರಜ್ವಲ್ ರೇವಣ್ಣ (Prajwal revanna) ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನ ಕಿಟ್ರ್ಯಾಪ್ (Kidnap) ಮಾಡಿದ್ದ ಆರೋಪದಲ್ಲಿ ಪರಪ್ಪನ ಅಗ್ರಹಾರ (Parappana agrahara) ಜೈಲು ಪಾಲಾಗಿದ್ದ ಹೆಚ್ ಡಿ ರೇವಣ್ಣಗೆ (HD revanna) ಸೋಮವಾರ ಸಂಜೆ ಜಾಮಿನು ಮಂಜೂರಾಗಿದ್ದು, ಮಂಗಳವಾರ (Tuesday) ಮಧ್ಯಾನ ರೇವಣ್ಣ ಜೈಲಿನಿಂದ ಹೊರಬಂದಿದ್ದಾರೆ. ಈ ಬಗ್ಗೆ ಪ್ರತಿತಿಸಿದ ಕುಮಾರಸ್ವಾಮಿ (Kumaraswamy) ಡಿಕೆಶಿ (Dk shivakumar) ವಿರುದ್ಧ ಹರಿಹಾಯ್ದಿದ್ದಾರೆ.

ರೇವಣ್ಣರಿಗೆ ಜಾಮಿನು ಸಿಕ್ಕಿದೆ ಎಂದು ನಾನೇನು ಬಹಳ ಖುಷಿಯಲ್ಲಿ ಇಲ್ಲ. ನಾನು ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ, ದುಯಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಬೇಡಿ. ಈಗ ಪ್ರಮುಖವಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರಬರಬೇಕಿದೆ. ಸೋ ದೊಡ್ಡ ತಿಮಿಂಗಿಲವನ್ನ ಹಿಡಿದರೆ ಎಲ್ಲವೂ ಹೊರಬರಲಿದೆ ಎಂದು ಹೆಚ್‌ಡಿಕೆ (HDK) ಹೇಳಿದರು.

ಗಣಿಕ ರವಿ (Ganiga ravi) ಹೇಳಿಕೆ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ ಕುಮಾರಸ್ವಾಮಿ, ಈ ಸಣ್ಣ ತಿಮಿಂಗಿಲಗಳಿಗೆ ನನ್ನ ವಿರುದ್ಧ ಮಾತನಾಡಲು ಹೇಳಿರುವುದೇ ಆ ದೊಡ್ಡ ತಿಮಿಂಗಿಲ. ಹೀಗಾಗಿ ದೊಡ್ಡ ತಿಮಿಂಗಿಲವನ್ನೇ ಹಿಡಿದರೆ ಎಲ್ಲವೂ ಬಯಲಾಗಲಿದೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.





