• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೀದರ್: ಗೊ.ರು.ಚ.ಗೆ ‘ಬಸವಭಾನು’ ಪ್ರಶಸ್ತಿ

ಪ್ರತಿಧ್ವನಿ by ಪ್ರತಿಧ್ವನಿ
July 7, 2024
in Top Story, ಕರ್ನಾಟಕ, ಜೀವನದ ಶೈಲಿ, ವಿಶೇಷ
0
ಬೀದರ್: ಗೊ.ರು.ಚ.ಗೆ ‘ಬಸವಭಾನು’ ಪ್ರಶಸ್ತಿ
Share on WhatsAppShare on FacebookShare on Telegram

ADVERTISEMENT

ಬಸವಕಲ್ಯಾಣ: `ಹಾರಕೂಡ ಚನ್ನವೀರ ಶಿವಾಚಾರ್ಯರು ಸ್ವಯಂ ಸಾಹಿತಿ ಆಗಿದ್ದು ಬೇರೆಯವರ 100 ಕ್ಕೂ ಅಧಿಕ ಗ್ರಂಥಗಳನ್ನು ಸಹ ಪ್ರಕಟಿಸಿದ್ದಾರೆ. ಧರ್ಮ, ಸಮಾಜ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಕಾರಣ ಇಲ್ಲಿ ನೀಡಿದ ಪ್ರಶಸ್ತಿಗೆ ಎಲ್ಲಿಲ್ಲದ ಪಾವಿತ್ರ್ಯತೆ ಇದೆ’ ಎಂದು ಅನುಭವ ಮಂಟಪ ರೂಪುರೇಷೆ ಸಿದ್ಧತಾ ಸಮಿತಿ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಹೇಳಿದ್ದಾರೆ.

ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೂ. 1 ಲಕ್ಷ ನಗದು ಒಳಗೊಂಡಿರುವ ಬಸವಭಾನು ಪ್ರಶಸ್ತಿ ಪಡೆದು ಅವರು ಮಾತನಾಡಿದರು.

`ಜೀವನ ಕ್ಷಣಿಕ ಆಗಿರುವುದರಿಂದ ಉತ್ತಮ ಕೆಲಸ ಈಗಲೇ ಮಾಡಬೇಕೆಂಬ ಭಾವನೆ ಎಲ್ಲರದ್ದಾಗಬೇಕು. ಹಿರಿತನವೆಂದು ನನ್ನನ್ನು ಗೌರವಿಸಿದ್ದಾರೆ. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಸಾಧಕರು, ಜ್ಞಾನಿಗಳು ಹಿರಿಯರಾಗಿದ್ದಾರೆ. ನಾನು ಎಂದೂ ಸಣ್ಣನವರನ್ನು ಸಣ್ಣವರೆಂದು ಹೇಳಿಲ್ಲ. ಏಕೆಂದರೆ ಅವರು ಎಂದಾದರೂ ದೊಡ್ಡವರು ಆಗಿಯೇ ಆಗುತ್ತಾರೆ’ ಎಂದರು.

ನಾನು ವಯಸ್ಸಾದರೂ ಬಸವಕಲ್ಯಾಣದಲ್ಲಿನ ಅನುಭವ ಮಂಟಪ ಪೂರ್ಣಗೊಳ್ಳುವವರೆಗೆ ನಿನ್ನೊಡನೆ ಬರುವುದಿಲ್ಲ ಎಂದು ಕಾಲನಿಗೆ ಹೇಳಿದ್ದೇನೆ. ಆದರೆ ಮಂಟಪದ ಕೆಲಸ ಹೇಗಾಗಲಿದೆಯೆಂದರೆ ಅಲ್ಲಿ ಶರಣ ಸಂಸ್ಕೃತಿ ಅವತರಿಸುವ ಜೊತೆಗೆ ವಚನ ವಿಶ್ವವಿದ್ಯಾಲಯವೂ ಇರಲಿದೆ. ಒಂದುವೇಳೆ ಕಾಲನು ಅಲ್ಲಿ ಬಂದು ಕುಳಿತುಕೊಂಡರೆ ನಾನು ಇಲ್ಲಿಯೇ ಇರುತ್ತೇನೆ ಎನ್ನುತ್ತಾನೋ ಏನೋ’ ಎಂದು ಹಾಸ್ಯ ಚಟಾಕಿ ಸಹ ಹಾರಿಸಿದರು.

ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ಪತ್ರ ಓದಿ ಗೋ.ರು.ಚನ್ನಬಸಪ್ಪ ಅವರಿಗೆ ಪ್ರದಾನ ಮಾಡಿದರು. ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಮುಖಂಡರಾದ ಮೇಘರಾಜ್ ನಾಗರಾಳೆ, ಬಿ.ಕೆ.ಹಿರೇಮಠ, ಸಿದ್ರಾಮ ಗುದಗೆ, ಮಲ್ಲಿನಾಥ ಹಿರೇಮಠ, ಸೂರ್ಯಕಾಂತ ಸಂಗೋಳಗೆ, ರಾಜಕುಮಾರ ದೇಗಾಂವ, ಅಪ್ಪಣ್ಣ ಜನವಾಡಾ, ನವಲಿಂಗಕುಮಾರ ಪಾಟೀಲ ಉಪಸ್ಥಿತರಿದ್ದರು.

Tags: BidarBidar District
Previous Post

ನಕಲಿ ಎನ್‌ ಕೌಂಟರ್‌ ; ಜೆಕೆ ಪೋಲೀಸ್‌ ಅಧಿಕಾರಿಗೆ ವರ್ಷ ನಂತರ ಜಾಮೀನು

Next Post

ಜೆಡಿಎಸ್‌-ಬಿಜೆಪಿ ಮೈತ್ರಿ ವಿರುದ್ಧ ಕಾಂಗ್ರೆಸ್‌‌.. ಎಲ್ಲರಿಗೂ ಇವರ ಸಡ್ಡು..

Related Posts

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಅವರನ್ನು ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ
Top Story

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಅವರನ್ನು ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

by ಪ್ರತಿಧ್ವನಿ
April 20, 2026
0

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಾ. ಚೆಲ್ಲ ಕುಮಾರ್ ಡಿ.ಎಂ.ಕೆ. ನೇತೃತ್ವದ ಮೈತ್ರಿಕೂಟದಲ್ಲಿ ಕೃಷ್ಣಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ...

Read moreDetails
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
Next Post
ಜೆಡಿಎಸ್‌-ಬಿಜೆಪಿ ಮೈತ್ರಿ ವಿರುದ್ಧ ಕಾಂಗ್ರೆಸ್‌‌.. ಎಲ್ಲರಿಗೂ ಇವರ ಸಡ್ಡು..

ಜೆಡಿಎಸ್‌-ಬಿಜೆಪಿ ಮೈತ್ರಿ ವಿರುದ್ಧ ಕಾಂಗ್ರೆಸ್‌‌.. ಎಲ್ಲರಿಗೂ ಇವರ ಸಡ್ಡು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada