ಬೀಜಿಂಗ್: ಭಾರತವೂ ಸೇರಿದಂತೆ ವಿಶ್ವ ರಾಷ್ಟ್ರಗಳ ಮೇಲೆಲ್ಲಾ ಬೇಹುಗಾರಿಕೆ ನಡೆಸಿ, ಸದಾ ಕುತಂತ್ರ ರೂಪಿಸಲು ಯೋಜಿಸುವ ಚೀನಾ, ಈಗ ತಾನೇ ಸಂಕಷ್ಟಕ್ಕೆ ಸಿಲುಕಿದೆ. ತನ್ನ ವಿರುದ್ಧ ಬೇಹುಗಾರಿಕೆಗೆ ಸುಂದರ ತರುಣ, ತರಣಿಯರನ್ನು ವಿದೇಶಗಳು ಬಳಸಿಕೊಂಡು “ ರೊಮ್ಯಾನ್ಸ್ ಟ್ರ್ಯಾಪ್” ತಂತ್ರ ರೂಪಿಸಿವೆ ಎಂದು ಆರೋಪಿಸಿದೆ.
ಚೀನಾ ರಾಜ್ಯ ರಕ್ಷಣಾ ಸಚಿವಾಲಯವು Beijing’s Ministry of State Security (MSS) ಈ ಸಂಬಂಧಿಸಿದಂತೆ ಸುಂದರ-ಸುಂದರಿಯರ ಬಲೆಗೆ ಬೀಳದಿರಿ ಎಂದು ತನ್ನ ಪ್ರಜೆಗಳಿಗೂ ಎಚ್ಚರಿಸಿದೆ.
ಕಳೆದ ವರ್ಷ ಚೀನಾದಲ್ಲಿ ವೀ ಚಾಟ್ ಎಂಬ ಅಪ್ಲಿಕೇಶನ್ನ ಬಳಕೆ ಆರಂಭವಾದಾಗಿನಿಂದ ಅಲ್ಲಿನ ಪ್ರಜೆಗಳನ್ನು ರೊಮ್ಯಾನ್ಸ್ ಟ್ರ್ಯಾಪ್ನಲ್ಲಿ ಸಿಲುಕಿಸಲು ಬೇಹುಗಾರರು ಸತತ ಪ್ರಯತ್ನಗಳನ್ನ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಎಂಎಸ್ಎಸ್ ಹೇಳಿಕೊಂಡಿದೆ. ಆದರೆ, ಯಾವ ದೇಶಗಳು ಈ ರೊಮ್ಯಾನ್ಸ್ ಟ್ರ್ಯಾಪ್ ಬೇಹು ಜಾಲದಲ್ಲಿ ಭಾಗಿಯಾಗಿವೆ ಎಂಬುದನ್ನು ಚೀನಾ ಬಹಿರಂಗ ಪಡಿಸಿಲ್ಲ.
ಏನಿದು ರೊಮ್ಯಾನ್ಸ್ ಟ್ರ್ಯಾಪ್?
ಸೂಕ್ಷ್ಮ ವೈಜ್ಞಾನಿಕ ದತ್ತಾಂಶಗಳ ಮಾಹಿತಿ ಸೇರಿದಂತೆ ದೇಶದ ಭದ್ರತೆಗೆ ಅಗತ್ಯವಿರುವ ಮಾಹಿತಿ ಜ್ಞಾನ ಹೊಂದಿರುವ ವಿದ್ಯಾರ್ಥಿಗಳನ್ನೇ ವಿದೇಶಿ ಗುಪ್ತಚರರು ಗುರಿಯಾಗಿಸುತ್ತಿದ್ದಾರೆ . ಉದ್ಯೋಗದ ಜಾಹೀರಾತು ನೀಡಿ, ಉತ್ತಮ ಸಂಬಳದ ಆಮಿಷಗಳನ್ನು ತೋರಿ ಸೆಳೆಯುವ ಪ್ರಯತ್ನದ ಜತೆಗೆ ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಚೀನಾದ ಪ್ರಜೆಗಳೊಂದಿಗೆ ವಿದೇಶಿ ಬೇಗುಗಾರರು ಸಂಪರ್ಕ ಸಾಧಿಸಿ, ತಮ್ಮ ಕಾರ್ಯಸಾಧನೆಗೆ ಮುಂದಾಗಿದ್ದಾರೆ ಯುವಜನರನ್ನು ಸ್ನೇಹ, ಪ್ರೀತಿ ಎನ್ನುವ ಜಾಲದಲ್ಲಿ ಸಿಲುಕಿಸಿ ಅವರಿಂದ ತಮಗೆ ಬೇಕಾದ ಮಾಹಿತಿಯನ್ನು ಸಲೀಸಾಗಿ ಪಡೆಯುವುದನ್ನೇ ಚೀನಾ “ರೊಮ್ಯಾನ್ಸ್ ಟ್ರ್ಯಾಪ್” ಎಂದು ಕರೆದಿದೆ.
ಲಿಂಗ ಬದಲಾವಣೆ, ವೇಷ ಮರಿಸಿ ಕುತಂತ್ರ: ವಿದೇಶಿ ಗುಪ್ತಚರರುತಮ್ಮಗುರುತು, ವೇಷ ಮಾತ್ರವಲ್ಲದೇ ಲಿಂಗ ಬದಲಾವಣೆಯನ್ನೂ ಮಾಡಿಕೊಂಡು ಚೀನಾದ ಪ್ರಜೆಗಳನ್ನು ಖೆಡ್ಡಕ್ಕೆ ಕೆಡುವಲು ಸಂಚು ರೂಪಿಸಿದ್ದಾರೆ ಎಂದು ಚೀನಾ ದೂರಿದೆ. ಪದವೀಧರರು, ವಿಶ್ವ ವಿದ್ಯಾಲಯಗಳಲ್ಲಿನ ವಿದ್ವಾಂಸರು, ಸಂಶೋಧಕರು ಹೀಗೆ ವಿವಿಧ ಉನ್ನತ ಹುದ್ದೆಗಳಲ್ಲೇ ಗುಪ್ರಚರರು ವೇಷ ಮರಿಸಿಕೊಂಡಿದ್ದಾರೆ. ಜತೆಗೆ ಲಿಂಗ ಬದಲಾವಣೆ, ಪ್ಲಾಸ್ಟಿಕ್ ಸರ್ಜರಿಗಳ ಮೂಲಕ ಸುಂದರ ತರುಣ-ತರುಣಿಯರಂತೆ ವೇಷಮರಿಸಿಕೊಂಡಿದ್ದಾರೆ. ಕುರಿಗಳ ವೇಷದಲ್ಲಿ ತೋಳಗಳು ದೇಶ ಹೊಕ್ಕಿವೆ ಎಂದು ಚೀನಾ ಕಿಡಿ ಕಾರಿದೆ.