ಇತ್ತೀಚಿಗೆ ಬಂದಿರುವ ಉಪಕರಣದಲ್ಲಿ ಕರ್ಲಿ ಹೇರ್ ನಾ ಸ್ಟ್ರೇಟ್ ಮಾಡಿಕೊಳ್ಳ ಬಹುದು ಅಥವಾ ಸ್ಟ್ರೇಟ್ ಹೇರನ್ನ ಕರ್ಲಿ ಮಾಡಿಕೊಳ್ಳಬಹುದು. ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗೆ ತಮಗೆ ಯಾವ ತರ ಕೂದಲಿದ್ದರೂ ಕೂಡ ಇನ್ನೊಬ್ಬರ ಕೂದಲನ್ನು ನೋಡಿದರೆ ನಮಗೂ ಕೂದಲು ಹೀಗಿರಬೇಕಿತ್ತು ಅಂತ ಆಸೆ ಪಡೋರು ಹೆಚ್ಚು ಜನ ಇದ್ದಾರೆ. ಸ್ಟ್ರೈಟ್ ಹೇರ್ ಇದ್ದವರಿಗೆ ಕರ್ಲಿ ಹೇರ್ ಇಷ್ಟವಾಗುತ್ತೆ ಹಾಗೂ ಕರ್ಲಿ ಹೇರ್ ಇದ್ದವರಿಗೆ ಸ್ಟ್ರೈಟ್ ಹೇರ್ ಇಷ್ಟ ಆಗುತ್ತೆ.
ಆದರೆ ಉಪಕರಣನ ಬಳಸುವುದರಿಂದ ಕೂದಲಿಗೆ ತುಂಬಾನೇ ಹಾನಿಯಾಗುತ್ತದೆ ,ಹೇರ್ ಫಾಲ್, ಡ್ಯಾಮೇಜ್ ಹೀಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ನಿಮ್ಮ ಕೂದಲಿನ ಆರೋಗ್ಯಕ್ಕೆ ಈ ಉಪಕರಣಗಳು ಒಳಿತಲ್ಲ. ಹಾಗಿದ್ರೆ ಈ ಸಿಂಪಲ್ ಹ್ಯಾಕ್ ಮೂಲಕ ನಿಮ್ಮ ಕರ್ಲ್ ಹೇರ್ ನ ಹೇಗೆ ಸ್ಟ್ರೈಟ್ ಮಾಡಿಕೊಳ್ಳಬಹುದು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಈ ಕೆಳಗಿನಂತಿದೆ.
ತೆಂಗಿನಹಾಲು
ತೆಂಗಿನಕಾಯಿ ತಿರುಳನ್ನು ತೆಗೆದು ಚೆನ್ನಾಗಿ ರುಬ್ಬಿ ನಂತರ ಒಂದು ಬಿಳಿ ಬಟ್ಟೆಯ ಸಹಾಯದಿಂದ ಅದರ ಹಾಲನ್ನು ತೆಗೆದು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ನಿಮ್ಮ ಕರ್ಲಿ ಹೇರ್ ಸ್ಟ್ರೈಟ್ ಹೇರ್ ಆಗುತ್ತದೆ. ಇದೊಂದು ನ್ಯಾಚುರಲ್ ಹೋಂ ರೆಮಿಡಿಯಾಗಿದ್ದು ಯಾವುದೇ ರೀತಿಯ ಕೆಮಿಕಲ್ಸ್ ಇಲ್ಲದೆ ನಿಮ್ಮ ಕೂದಲು ಸ್ಟ್ರೈಟ್ ಆಗುತ್ತದೆ.
ಬಾಳೆಹಣ್ಣು ಮತ್ತು ಜೇನುತುಪ್ಪ
ಒಂದು ಬಾಳೆಹಣ್ಣಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ರುಬ್ಬಿ.ನಂತರ ಆ ಮಿಶ್ರಣವನ್ನು ತಲೆ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲು ಸ್ಟ್ರೈಟ್ ಆಗುತ್ತದೆ ಜೊತೆಗೆ ಸಿಲ್ಕಿ ಹೇರ್ ನಿಮ್ಮದಾಗುತ್ತದೆ.
ಮೊಟ್ಟೆಯ ಬಿಳಿಯ ಭಾಗ
ಮೊಟ್ಟೆಯ ಬಿಳಿಯ ಭಾಗವನ್ನ ತೆಗೆದು, ಅದಕ್ಕೆ ಎರಡು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ಪೇಸ್ಟ್ನ ಕೂದಲಿಗೆ ಹಚ್ಚಿ , ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಉತ್ತಮವಾಗಿರುತ್ತದೆ, ಡ್ಯಾಂಡ್ರಫ್ ಕಡಿಮೆಯಾಗುತ್ತೆ, ಕೂದಲು ಸ್ಟ್ರೈಟ್ ಆಗುತ್ತದೆ .
ಅಕ್ಕಿಯ ನೀರು
ಒಂದು ಬೌಲಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಅಕ್ಕಿಯನ್ನ ಹಾಕಿ ಅದಕ್ಕೆ ಎರಡರಿಂದ ನಾಲ್ಕು ಟೇಬಲ್ ಸ್ಪೂನ್ ಅಷ್ಟು ನೀರನ್ನ ಬೆರೆಸಿ 2 ಗಂಟೆಗಳ ಕಾಲ ಹಾಗೆ ನೆನೆಸಲು ಬಿಡಿ ನಂತರ ಆ ನೀರನ್ನ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಸ್ಟ್ರೈಟ್ ಆಗುತ್ತದೆ. ಅಕ್ಕಿಯ ನೀರು ಕೂದಲ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೋಗ್ಯವನ್ನು ಕಾಪಾಡಲು ಬೆಸ್ಟ್ ರೆಮಿಡಿ.
ಒಟ್ಟಾರೆಯಾಗಿ ಈ ರೆಮಿಡಿಗಳನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಬಳಸುವುದರಿಂದ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಹಾಗೂ ಸ್ಟ್ರೈಟ್ ಅಂಡ್ ಸಿಲ್ಕಿ ಹೇರ್ ಆಗುತ್ತದೆ, ಕೆಮಿಕಲ್ಸ್ ರಹಿತ ರೆಮಿಡಿ.