• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ, ಟೀಕಾಕಾರರಿಗೆ ಕ್ಯಾಮೆರಾಗಳೇ ಉತ್ತರಿಸುತ್ತವೆ:ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
September 5, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಸಕಲೇಶಪುರ (ದೊಡ್ಡನಗರ):”ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ನಂಬಿದ್ದೇನೆ. ಈ ಯೋಜನೆ ಬಗ್ಗೆ ಟೀಕೆ ಮಾಡಿದವರಿಗೆ ಮಾಧ್ಯಮಗಳ ಕ್ಯಾಮೆರಾಗಳೇ ಉತ್ತರ ನೀಡುತ್ತವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಸಕಲೇಶಪುರದ ದೊಡ್ಡನಗರದ ಡಿ.ಸಿ- 3 ಪಂಪ್ ಹೌಸ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ADVERTISEMENT

ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಈ ಘಳಿಗೆಯಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಆಲಮಟ್ಟಿ ಯೋಜನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ಮಾಡಿದ್ದರು.2006ರಲ್ಲಿ ಅಬ್ದುಲ್ ಕಲಾಂ ಅವರು ಯೋಜನೆ ಉದ್ಘಾಟನೆ ಮಾಡಿದ್ದರು.

ಆಲಮಟ್ಟಿ ಯೋಜನೆ ಜಾರಿ ನಂತರ ಎತ್ತಿನಹೊಳೆ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾಗಿದೆ. 2014 ಮಾರ್ಚ್ 5ರಂದು ಸಿಎಂ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.ಈಗ ಅವರ ನೇತೃತ್ವದಲ್ಲಿ ಈ ಯೋಜನೆ ಉದ್ಘಾಟನೆಯಾಗುತ್ತಿದೆ. 10 ವರ್ಷಗಳು ಕಳೆದಿದ್ದು, ಬೇಕಾದಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಎಲ್ಲವನ್ನೂ ಮೆಟ್ಟಿನಿಂತು ಯೋಜನೆ ಜಾರಿಯಾಗುತ್ತಿದೆ.ಈ ಯೋಜನೆಗೆ ಬೇರೆ ಸರ್ಕಾರಗಳು ಪ್ರಯತ್ನಿಸಿವೆ. ನಾನು ಯಾರನ್ನೂ ದೂಷಿಸುವುದಿಲ್ಲ” ಎಂದು ತಿಳಿಸಿದರು.

“ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಈ ಯೋಜನೆಯನ್ನು ಪೂರ್ಣಗೊಳಿಸಲೇಬೇಕು ಎಂದು ತೀರ್ಮಾನ ಮಾಡಿ ಆದ್ಯತೆ ಮೇರೆಗೆ ಕೆಲಸ ಮಾಡಲಾಗಿದೆ.ಪರಿಣಾಮ ಪಶ್ಚಿಮ ಘಟ್ಟಗಳಿಂದ ಬಯಲುಸೀಮೆಯ ಪ್ರದೇಶಕ್ಕೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ.ಈಗ 123 ಕಿ.ಮೀ ದೂರದ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಸೇರುತ್ತಿದೆ. ಈ ಯೋಜನೆಯ ಕಾಲುವೆ ಹಾದು ಹೋಗುವ ಮಧ್ಯ ಭಾಗಗಳಲ್ಲಿ ಅರಣ್ಯ ಪ್ರದೇಶದಲ್ಲಿ ಒಂದಷ್ಟು ಕೆಲಸ ಬಾಕಿ ಇವೆ. ಕೆಲವೇ ತಿಂಗಳುಗಳಲ್ಲಿ ಆ ಕೆಲಸಗಳು ಪೂರ್ಣಗೊಳ್ಳಲಿದ್ದು, ನಂತರ ತುಮಕೂರಿಗೆ ಈ ನೀರನ್ನು ತೆಗೆದುಕೊಂಡು ಹೋಗಲಾಗುವುದು” ಎಂದು ವಿವರಿಸಿದರು.

“ಮಾರ್ಗ ಮಧ್ಯೆ ನೀರನ್ನು ಪೋಲು ಮಾಡಬಾರದು ಎಂದು ಹೊಸ ಕಾನೂನು ತರಲಾಗಿದೆ. ಈ ಯೋಜನೆಗೆ ಒಟ್ಟು ₹23 ಸಾವಿರ ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.ಈ ಯೋಜನೆಯಲ್ಲಿ 8 ವಿಯರ್ ಗಳ ಮೂಲಕ ನೀರನ್ನು ಎತ್ತಿ ಹರಿಸಲಾಗುವುದು. ಶುಕ್ರವಾರ 1,500 ಕ್ಯೂಸೆಕ್ ನೀರನ್ನು ಹರಿಸಲಾಗುವುದು. ಆಮೂಲಕ ಗೌರಿ ಹಬ್ಬದ ದಿನ ಗಂಗೆಗೂ ಪೂಜೆ ಮಾಡಲಾಗುವುದು.ಇಬ್ಬರೂ ದೇವತೆಗಳನ್ನು ಒಟ್ಟಾಗಿ ಪೂಜಿಸುತ್ತಿದ್ದೇವೆ” ಎಂದು ತಿಳಿಸಿದರು.

“ಈ ಯೋಜನೆ ಕುರಿತಾಗಿ ಅನೇಕ ನಾಯಕರು ಸದನ ಹಾಗೂ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲಾ ಪಕ್ಷದ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ರಾಜ್ಯದ 224 ಕ್ಷೇತ್ರದವರಿಗೂ ಆಹ್ವಾನ ನೀಡಲು ಆಗುವುದಿಲ್ಲ. ಆದರೆ ಫಲಾನುಭವಿ ಜಿಲ್ಲೆಗಳ ನಾಯಕರಿಗೆ ಆಹ್ವಾನ ನೀಡಿದ್ದೇವೆ.ಯಾರನ್ನಾದರೂ ಆಹ್ವಾನಿಸದೇ ತಪ್ಪಾಗಿದ್ದರೆ ಮುಂದೆ ಸರಿಪಡಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಶುಭ ಗಳಿಗೆಯಲ್ಲಿ ಒಳ್ಳೆಯ ಮಾತುಗಳನ್ನು ಮಾತನಾಡೋಣ:

ಈ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು ಎಂದು ಕೇಳಿದಾಗ, “ಬಿಜೆಪಿಯವರ ಟೀಕೆಗೆ ನಾನು ಈಗ ಉತ್ತರ ನೀಡುವುದಿಲ್ಲ. ನಿಮ್ಮ ಕ್ಯಾಮೆರಾಗಳೇ ಅವರಿಗೆ ಉತ್ತರ ನೀಡುತ್ತವೆ. ಅವರಿಗೆ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ವಿಘ್ನಗಳ ನಿವಾರಕ ವಿನಾಯಕನನ್ನು ಪ್ರಾರ್ಥಿಸುತ್ತೇನೆ. ಈ ಶುಭ ಸಂದರ್ಭದಲ್ಲಿ ಒಳ್ಳೆಯ ವಿಚಾರಗಳನ್ನಷ್ಟೇ ಮಾತನಾಡೋಣ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ವಚನದಂತೆ ನಮ್ಮ ಮಾತುಗಳು ಉತ್ತಮವಾಗಿರಲಿ. ಶುಭ ಸಂದರ್ಭದಲ್ಲಿ ಅಶುಭದ ಮಾತುಗಳು ಬೇಡ” ಎಂದು ತಿಳಿಸಿದರು.

24 ಟಿಎಂಸಿ ನೀರನ್ನು ಎತ್ತಲು ಸಾಧ್ಯವೇ ಎಂದು ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಈಗ ಬೇರೆಯವರ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಟೀಕೆ ಮಾಡುವವರು ಅಧಿಕಾರದಲ್ಲಿ ಇದ್ದಾಗ ಯಾವುದನ್ನೂ ಮಾತನಾಡಲಿಲ್ಲ. ಈ ವರ್ಷ ಈಗಾಗಲೇ 15 ಟಿಎಂಸಿ ನೀರನ್ನು ಎತ್ತಲಾಗಿದೆ. ಡಿಸೆಂಬರ್ ವೇಳೆಗೆ ತುಮಕೂರು ಗಡಿವರೆಗೂ 5 ಟಿಎಂಸಿ ನೀರನ್ನು ಹರಿಸಲು ಗುರಿ ಹೊಂದಿದ್ದೇವೆ. ನಮ್ಮ ಇಲಾಖೆಯಲ್ಲಿ ಅತ್ಯುತ್ತಮ ಅಧಿಕಾರಿಗಳು ಇದ್ದಾರೆ” ಎಂದು ತಿಳಿಸಿದರು.

ನನ್ನ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಇದು ಒಂದು:ನಿಮ್ಮ ರಾಜಕೀಯ ಜೀವನದಲ್ಲಿ ಈ ಘಳಿಗೆ ಎಷ್ಟು ಮುಖ್ಯ ಎಂದು ಕೇಳಿದಾಗ, “ನನ್ನ ರಾಜಕೀಯ ಜೀವನದ ಒಂದು ಮೈಲಿಗಲ್ಲು. ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಇದು ಒಂದು. ನನಗೆ ಇಂತಹ ಅವಕಾಶ ಕೊಟ್ಟ ಕನ್ನಡನಾಡಿನ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Tags: ambitious Ettinhola projectCM Siddaramaiah‌Congress Partyprovide water supply.
Previous Post

ಈ ರೆಮಿಡಿಯನ್ನ ಬಳಸುವುದರಿಂದ ಸಿಲ್ಕಿ ಅಂಡ್ ಸ್ಟ್ರೈಟ್ ಹೇರ್ ನಿಮ್ಮದಾಗುತ್ತದೆ.!

Next Post

ಮಂಡ್ಯದಲ್ಲಿ 2 ದಿನ ಜಲಪಾತೋತ್ಸವಕ್ಕೆ ಸಕಲ ತಯಾರಿ.. ಲಾಂಛನ ರಿಲೀಸ್

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
Next Post
ಮಂಡ್ಯದಲ್ಲಿ 2 ದಿನ ಜಲಪಾತೋತ್ಸವಕ್ಕೆ ಸಕಲ ತಯಾರಿ.. ಲಾಂಛನ ರಿಲೀಸ್

ಮಂಡ್ಯದಲ್ಲಿ 2 ದಿನ ಜಲಪಾತೋತ್ಸವಕ್ಕೆ ಸಕಲ ತಯಾರಿ.. ಲಾಂಛನ ರಿಲೀಸ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada