ಕಳೆದ 6 ತಿಂಗಳಿಂದ ಶೆಡ್ ನಲ್ಲಿ ನಿಂತಿರುವ ದ್ವಿಚಕ್ರವಾಹನದ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic police) ಫೈನ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಗಾಡಿ ಕಳೆದ 6 ತಿಂಗಳಿಂದ ನಿಂತಲ್ಲೇ ನಿಂತಿರುವ ಗಾಡಿ ಟ್ರಾಫಿಕ್ ರೂಲ್ಸ್ (Traffic rules ) ಬ್ರೇಕ್ ಮಾಡಿದೆ ಎಂಬ ನೊಟೀಸ್ ಬಂದಿದೆ.
ಈ ನೋಟಿಸ್ ನೋಡಿ ವಾಹನ ಮಾಲೀಕ ಅಕ್ಷರಶಃ ಶಾಕ್ ಆಗಿದ್ದಾರೆ. ಇನ್ನು ಅಚ್ಚರಿ ಅಂದ್ರೆ, ಈ ವಾಹನದ ಮಾಲೀಕ ಈ ದೇಶದಲ್ಲೇ ಇಲ್ಲ. ಸದ್ಯ ಫಿಲಿಪೈನ್ಸ್ ನ (Philippines ) ಮನಿಲಾದಲ್ಲಿ ಇವರು ವಾಸವಾಗಿದ್ದಾರೆ .ಹೀಗಾಗಿ ತನ್ನ ದ್ವಿಚಕ್ರ ವಾಹನವನ್ನ ಸೇಲ್ ಮಾಡಲು ಮುಂದಾಗಿದ್ದು, ತುಮಕೂರು ಮೂಲದ ವ್ಯಕ್ತಿ ವಾಹನ ಖರೀದಿಸಲು ಗಾಡಿ ಬಗ್ಗೆ ಚೆಕ್ ಮಾಡಿದ್ದಾರೆ.

ಈ ವೇಳೆ ವಾಹನದ ಮೇಲೆ 3 ಕೇಸ್ ಇದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್, ಫೈನ್ ಪೆಂಡಿಂಗ್ (Fine pending) ಇರೋದು ಗೊತ್ತಾಗಿದೆ.ಈ ವ್ಯಕ್ತಿ ಕೂಡಲೇ ಈ ವಿಚಾರವನ್ನ ವಾಟ್ಸಾಪ್ (Whatsapp) ಮೂಲಕ ಗಾಡಿ ಮಾಲೀಕನಿಗೆ ತಿಳಿಸಿದ್ದಾನೆ.
ಈ ವೇಳೆ ಮಾಲೀಕ ಗಾಬರಿಯಾಗಿದ್ದು, ನಾನು ಪಿಲಿಪೈನ್ಸ್ ನ ಮನಿಲಾದಲ್ಲಿದ್ರು ಹೇಗೆ ಫೈನ್ ಬರುತ್ತೆ ಅಂತ ಕಂಗಾಲಾಗಿದ್ದಾರೆ.ಆ ಬಳಿಕ ವಿದೇಶದಿಂದ ಮನೆಗೆ ಬಂದಾಗ ನೊಟೀಸ್ ಬಂದಿದ್ದು ತಿಳಿದಿದೆ.
ಈ ಕುರಿತು ತಕ್ಷಣವೇ ಸಂಚಾರಿ ಪೊಲೀಸರ ಆ್ಯಪ್‌ನಲ್ಲಿ ಹೋಗಿ ಚೆಕ್ ಮಾಡಿದ್ದು, ಈ ವೇಳೆ ವಾಹನದ ನಂಬರ್ ನಕಲಿಯಾಗಿರೋದು ಗೊತ್ತಾಗಿದೆ.ಸದ್ಯ ಮಾಲೀಕ ಫೋಟೋಗಳ ಸಮೇತ ಯಲಹಂಕ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.











