• Home
  • About Us
  • ಕರ್ನಾಟಕ
Thursday, October 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕಾವೇರಿ ಆರತಿ ಮೂಲಕ ಗಂಗೆಗೆ ನಮಿಸಿ, ಜಲಸಂರಕ್ಷಣೆಗೆ ಪಣತೊಟ್ಟ ಬೆಂಗಳೂರು

ಪ್ರತಿಧ್ವನಿ by ಪ್ರತಿಧ್ವನಿ
March 22, 2025
in ಕರ್ನಾಟಕ, ರಾಜಕೀಯ, ವಿಶೇಷ
0
ಕಾವೇರಿ ಆರತಿ ಮೂಲಕ ಗಂಗೆಗೆ ನಮಿಸಿ, ಜಲಸಂರಕ್ಷಣೆಗೆ ಪಣತೊಟ್ಟ ಬೆಂಗಳೂರು
Share on WhatsAppShare on FacebookShare on Telegram

ಬೆಂಗಳೂರಿಗರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ADVERTISEMENT

ತೇಲುವ ವೇದಿಕೆ ಮೇಲೆ ತಾಯಿ ಗಂಗಮ್ಮ ದೇವಿಗೆ ನಮನ, ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಹಾಕಿ ಕಾವೇರಿ ಆರತಿ, ವರ್ಣರಂಜಿತ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಮಂತ್ರ ಘೋಷಗಳ ಭಕ್ತಿ ಭಾವದ ಜತೆಗೆ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಪ್ರತಿಜ್ಞಾ ಸ್ವೀಕಾರ… ಇವಿಷ್ಟೂ ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ನಡೆದ ಕಾವೇರಿ ಆರತಿ ಕಾರ್ಯಕ್ರಮದ ಚಿತ್ರಣ.

ರಾಜ್ಯ ಬೇಸಿಗೆ ಎದುರಿಸುತ್ತಿರುವ ಹೊತ್ತಿನಲ್ಲಿ, ಮಾ.22ರಂದು ವಿಶ್ವ ಜಲ ದಿನದ ಅಂಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲ ಮಂಡಳಿ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಕಾವೇರಿ ಆರತಿ ಹಾಗೂ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಜಲಸಂರಕ್ಷಣೆಯ ಪ್ರತಿಜ್ಞಾವಿಧಿಯಲ್ಲಿ ಸಾವಿರಾರು ಜನರು ಭಾಗವಹಿಸಿ ಹೊಸ ದಾಖಲೆ ಬರೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ವಿಶ್ವ ಜಲ ದಿನ ಅಂಗವಾಗಿ ಇಂದಿನಿಂದ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಅಭಿಯಾನಕ್ಕೆ ನಿಮ್ಮನ್ನು ಆಹ್ವಾನಿಸಿದ್ದೇನೆ. ಇಂದು ಪವಿತ್ರವಾದ ಕಾವೇರಿ ಆರತಿ ಮೂಲಕ ಚಾಲನೆ ನೀಡಲಾಗುತ್ತಿದೆ. ನೀವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮಗೆ ಸರ್ಕಾರದ ಪರವಾಗಿ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಇಂದು ಬೆಳಗ್ಗೆ ತಲಕಾವೇರಿಗೆ ಹೋಗಿ ಕಾವೇರಿ ಪೂಜೆ ಮಾಡಿ, ಪವಿತ್ರ ಕಾವೇರಿ ಜಲವನ್ನು ತಂದು ಮಲ್ಲೇಶ್ವರದಲ್ಲಿರುವ ಸ್ಯಾಂಕಿ ಕೆರೆಗೆ ಅರ್ಪಿಸಿ ಪವಿತ್ರವಾದ ಕಾರ್ಯಕ್ರಮ ನಡೆಸಲಾಗಿದೆ.” ಎಂದು ತಿಳಿಸಿದರು.

Cauvery Aarti: ದೇವಿ ಮೂರ್ತಿ ಹೊತ್ತು ಮೆರವಣಿಗೆ ಮೂಲಕ ಕಾವೇರಿ ತೀರ್ಥ ತಂದ ತಂಡ..!  #cauveryaarti #Kaveriaarti

“ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನೀರಿನಿಂದಲೇ ನಾಗರೀಕತೆ, ನೀರಿನಿಂದಲೇ ಧರ್ಮ, ನೀರಿಲ್ಲದೆ ಪರಮಾತ್ಮನಿಲ್ಲ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಕ್ತಿ ದೇವತೆಗಳಾದ ಗಂಗಮ್ಮ, ಮಾರಮ್ಮ, ಕಾಡುಮಲ್ಲೇಶ್ವರ, ಲಕ್ಷ್ಮಿ ನರಸಿಂಹಸ್ವಾಮಿ, ದಕ್ಷಿಣಮುಖಿ ನಂದಿತೀರ್ಥ ದೇವಾಲಯಗಳಿವೆ. ಸ್ಥಳೀಯ ನಾಗರೀಕರು ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಪ್ರಕೃತಿಯ ಜಲ ಮಾತೆಗೆ ನಮಿಸಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಿರುತ್ತೇನೆ” ಎಂದರು.

ದಸರಾ ವೇಳೆಗೆ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ

“ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ ಪ್ರಾರಂಭ ಮಾಡಿದ್ದೇವೆ. ಕೆಆರ್ ಎಸ್ ಜಲಾಶಯದ ಬಳಿಯೂ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುವ ಯೋಜನೆ ಇದೆ” ಎಂದು ಹೇಳಿದರು.

“ಬರಗಾಲ ಬಂದಾಗ, ಬಾವಿ ಬತ್ತಿದಾಗ ನಮಗೆ ನೀರಿನ ಮೌಲ್ಯ ಅರಿವಾಗುತ್ತದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಕಾವೇರಿ 5ನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ಆಮೂಲಕ 110 ಹಳ್ಳಿಗಳಿಗೆ ನೀರು ಒದಗಿಸಲಾಗಿದೆ. ಈ ವರ್ಷ ಎಷ್ಟೇ ಕಷ್ಟ ಬಂದರೂ ನೀರಿನ ಸಮಸ್ಯೆ ಎದುರಾಗಬಾರದು ಎಂದು ನಾವು ಸಂಕಲ್ಪ ಮಾಡಿದ್ದೇವೆ. ನೀರನ್ನು ಸಮರ್ಪಕವಾಗಿ ಬಳಸಿ, ನೀರಿನ ಸಂರಕ್ಷಣೆಗೆ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು” ಎಂದು ಕರೆ ನೀಡಿದರು.

“ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಗಂಗೆಗೆ ಆರತಿ ಮಾಡುವ ಕಾರ್ಯಕ್ರಮಕ್ಕೆ ನೀವೆಲ್ಲರೂ ಬಂದಿದ್ದೀರಿ. ನಾವು ನೀವು ಸೇರಿ ಈ ಜಲವನ್ನು ಸಂರಕ್ಷಣೆ ಮಾಡೋಣ” ಎಂದು ತಿಳಿಸಿದರು.

ಪ್ರತಿಜ್ಞಾವಿಧಿ:

“ದೈನಂದಿನ ಚಟುವಟಿಕೆಗಳಿಗಾಗಿ ಮಿತವಾಗಿ ನೀರನ್ನು ಬಳಸಿ, ನೀರನ್ನು ಉಳಿಸುತ್ತೇನೆ. ಮಳೆನೀರು ಕೊಯ್ಲು ವಿಧಾನ ಅನುಸರಿಸುವ ಮೂಲಕ ಅಂತರ್ಜಲ ಮರುಪೂರ್ಣಕ್ಕೆ ಸಹಕರಿಸುತ್ತೇನೆ. ಜಲ ಮೂಲಗಳನ್ನು ರಕ್ಷಿಸುವುದಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ಅವುಗಳ ಸಂರಕ್ಷಣೆಯನ್ನು ಮಾಡುತ್ತೇನೆ. ನಾನು, ನನ್ನ ಕುಟುಂಬ, ಸಮುದಾಯದಲ್ಲಿ ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸುಸ್ಥಿರ ಭವಿಷ್ಯದ ನಿರ್ಮಾಣಕ್ಕಾಗಿ ನನ್ನ ಜೀವನದಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಲ್ಳುವ ಪ್ರತಿಜ್ಞೆ ಮಾಡುತ್ತೇನೆ, ಜೈ ಹಿಂದ್, ಜೈ ಕಾವೇರಿ, ಜೈ ಕರ್ನಾಟಕ” ಎಂದು ಶಿವಕುಮಾರ್ ಅವರು ಸಾರ್ವಜನಿಕರಿಗೆ ವಿಶ್ವಜಲ ಪ್ರತಿಜ್ಞಾ ವಿಧಿ ಬೋಧಿಸಿದರು.

Tags: bengalurubengaluru eventsbengaluru water supply and sewerage boardcauvery aarthicauvery aarticauvery pujacauvery tributeCauvery watergangaganga aarti stylehow to become a nursing officerhow to join indian army as nursehow to prepare for mns interviewhow to prepare for mns interview?mahatma gandhi 150 anniversaryriver cauveryshruti sharma unacademysoundarya telugu movies full lengthzomato delevery boy on ktm
Previous Post

ಹೈಕೋರ್ಟ್​ ಜಡ್ಜ್​ ಮನೆಯಲ್ಲಿ 15 ಕೋಟಿ.. ಸಿಕ್ಕಿದ್ಹೇಗೆ..? ಮುಂದೇನು..?

Next Post

ಹನಿಟ್ರ್ಯಾಪ್‌ 40 ಜನ ಅಲ್ಲ.. 400 ಜನರು ಸಿಲುಕಿದ್ದಾರೆ..

Related Posts

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್
Top Story

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

by ಪ್ರತಿಧ್ವನಿ
October 30, 2025
0

* ವಿಮಾನದಲ್ಲಿನ ತುರ್ತು ನಿರ್ಗಮನ ದ್ವಾರ ಯಾವಾಗ ತೆರೆಯಬೇಕು ಎಂಬುದರ ಅರಿವಿಲ್ಲದ ಸಂಸದ ತೇಜಸ್ವಿ ಸೂರ್ಯ ಈಗ ‘ಬೆಂಗಳೂರು ಸಂಚಾರದಟ್ಟಣೆ ನಿವಾರಣೆ’ ಕುರಿತು ಉಪನ್ಯಾಸ ನೀಡುತ್ತಿದ್ದಾನೆ. ಎಂತಹ...

Read moreDetails

CM Siddaramaiah: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ..

October 29, 2025

Priyank Kharge: ಬೆಂಗಳೂರು ಟೆಕ್ ಶೃಂಗಸಭೆ 2025: ವಿಸಿಗಳೊಂದಿಗೆ ಸಚಿವ ಖರ್ಗೆ ಸಭೆ..!!

October 29, 2025

ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

October 29, 2025

ಡಾ. ಪುನೀತ್ ರಾಜಕುಮಾರ್ 4 ನೇ ಪುಣ್ಯತಿಥಿಯನ್ನು ಆಚರಿಸಿದ‌ ಚಿಕ್ಕೋಡಿ ಜನತೆ..

October 29, 2025
Next Post
ಹನಿಟ್ರ್ಯಾಪ್‌ 40 ಜನ ಅಲ್ಲ.. 400 ಜನರು ಸಿಲುಕಿದ್ದಾರೆ..

ಹನಿಟ್ರ್ಯಾಪ್‌ 40 ಜನ ಅಲ್ಲ.. 400 ಜನರು ಸಿಲುಕಿದ್ದಾರೆ..

Recent News

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್
Top Story

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

by ಪ್ರತಿಧ್ವನಿ
October 30, 2025
Top Story

CM Siddaramaiah: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ..

by ಪ್ರತಿಧ್ವನಿ
October 29, 2025
Top Story

Priyank Kharge: ಬೆಂಗಳೂರು ಟೆಕ್ ಶೃಂಗಸಭೆ 2025: ವಿಸಿಗಳೊಂದಿಗೆ ಸಚಿವ ಖರ್ಗೆ ಸಭೆ..!!

by ಪ್ರತಿಧ್ವನಿ
October 29, 2025
Serial

ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

by ಪ್ರತಿಧ್ವನಿ
October 29, 2025
Top Story

ಡಾ. ಪುನೀತ್ ರಾಜಕುಮಾರ್ 4 ನೇ ಪುಣ್ಯತಿಥಿಯನ್ನು ಆಚರಿಸಿದ‌ ಚಿಕ್ಕೋಡಿ ಜನತೆ..

by ಪ್ರತಿಧ್ವನಿ
October 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

October 30, 2025
ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada