
ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್(Governor Thawarchand Gehlot) ಅವರಿಂದ ಆಗಿರುವ ದೊಡ್ಡ ತಪ್ಪಿನ ಪೂರ್ಣ ವಿವರ ಪ್ರತಿಧನಿಗೆ (To Pratidhvani) ಲಭ್ಯವಾಗಿದೆ.ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ವಿಚಾರಣೆ ನಡೆಸಿದ ಲೋಕಾಯುಕ್ತದ ಎಸ್‌ಐಟಿಯು (SITU of Lokayukta)ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದು, ಸ್ವತಃ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಲು 10 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದೆ.

ಆದರೂ, ಇದುವರೆಗೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.ದಿನಾಂಕ 10/9/2014ರ ಕ್ರೈಮ್ ನಂ. 16/14 ಈ ಕೇಸಿನಲ್ಲಿ ಲೋಕಾಯುಕ್ತದ ಅಡಿಯಲ್ಲಿ ಗಣಿ ಅಕ್ರಮಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಕಳಿಸಲಾಗಿದೆ. 21/11/2023ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್ ಅವರೇ ಖುದ್ದಾಗಿ ಪತ್ರವನ್ನು ಕಳಿಸಿದ್ದಾರೆ. ಅವರು ಕಳಿಸಿದ ದಿನದಂದು ಇದೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್(Governor Thawarchand Gehlot) ಅವರೇ ಕರ್ನಾಟಕದ ರಾಜ್ಯಪಾಲರಾಗಿದ್ದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಗೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ(A bogus company named Shree Sai Venkateswara Minerals, H.D. Kumaraswamy) 6.10.2007ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ(Acres of land are illegally mined) ಗುತ್ತಿಗೆಗೆ ನೀಡಿದ ಆರೋಪ ಕುಮಾರಸ್ವಾಮಿಯವರ ಮೇಲಿತ್ತು. ಸದರಿ ಗುತ್ತಿಗೆ ನೀಡುವಾಗ ಮಿನರಲ್ಸ್ ಕನ್ಸಿಷನ್ ನಿಯಮಗಳ, ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು(Kumaraswamy in violation of Rule 59 (2).) ಮಂಜೂರು ಮಾಡಿದ್ದರು ಎಂದು ಹೇಳಲಾಗಿತ್ತು.
ಈ ಅಕ್ರಮದ ಕುರಿತಾಗಿ ಎಫ್‌ಐಆರ್ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆಯನ್ನು ಮಾಡಿದ ನಂತರ ಎಚ್.ಡಿ. ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್ ಹಾಕಲಾಗಿದೆ.
ಆ ನಂತರವೇ ಎಡಿಜಿಪಿಯವರು ರಾಜ್ಯಪಾಲರ ಕದ ತಟ್ಟಿದ್ದಾರೆ.ಎಚ್‌ಡಿಕೆ( HDK)ವಿರುದ್ಧ ತನಿಖೆಯನ್ನು ಕೈಗೆತ್ತಿಕೊಳ್ಳುವಾಗ ಅಗತ್ಯವಿರದಿದ್ದ ರಾಜ್ಯಪಾಲರ of the Governor ಅನುಮತಿ ಈಗ ಸಿದ್ದರಾಮಯ್ಯನವರSiddaramaiah’ ವಿಚಾರದಲ್ಲಿ ಏಕೆ ಬೇಕು?2018ಕ್ಕೆ ಮುಂಚೆ ತನಿಖೆ ಶುರು ಮಾಡಲು ಎಫ್.ಐ.ಆರ್ ದಾಖಲು ಮಾಡಬೇಕೆಂದರೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಬೇಕಿರಲಿಲ್ಲ. ನರೇಂದ್ರ ಮೋದಿಯವರು ಭ್ರಷ್ಟಾಚಾರ ತಡೆ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ತಂದು ಸರ್ಕಾರೀ ಅಧಿಕಾರಿಗಳು ಮತ್ತು ಅಧಿಕಾರಸ್ಥರ ಮೇಲೆ ಎಫ್ ಐ ಆರ್ ಹಾಕಲೂ ಸಹ ಅನುಮತಿ ಕೇಳುವಂತೆ ಮಾಡಿದ್ದಾರೆ.
ಅದೇನೇ ಇದ್ದರೂ, ಕುಮಾರಸ್ವಾಮಿಯವರ ಮೇಲೆ ತನಿಖೆ ಮುಗಿದು ಚಾರ್ಜ್‌ಶೀಟ್ ಸಹ ಆಗಿಬಿಟ್ಟಿದೆ. ಅವರು ತಪ್ಪಿತಸ್ಥರೆಂದೇ ಲೋಕಾಯುಕ್ತ ಎಸ್‌ಐಟಿಗೆ ಮನವರಿಕೆಯೂ ಆಗಿದೆ. ಆದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಸಿದ್ದರಾಮಯ್ಯನವರ ಮೇಲೆ ಮುಡಾ ಹಗರಣದ ಆರೋಪ ಹೊರಿಸಿ, ಯಾವ ತನಿಖಾ ಏಜೆನ್ಸಿ ಅನುಮತಿ ಕೇಳಿರದಿದ್ದರೂ ನಿಮ್ಮ ಮೇಲೆ ತನಿಖೆ ಏಕೆ ಮಾಡಬಾರದು ಎಂದು ನೋಟೀಸ್ ನೀಡಿರುವ ಇದೇ ರಾಜ್ಯಪಾಲರು ಕಳೆದ 10 ತಿಂಗಳಿಂದ ಇನ್ನೊಂದು ಮನವಿಯನ್ನು ಕೈಗೇ ತೆಗೆದುಕೊಂಡಿಲ್ಲ.
ಸಿದ್ದರಾಮಯ್ಯನವರ ವಿಚಾರದಲ್ಲಿ ದೂರುದಾರರೊಬ್ಬರ ದೂರನ್ನಷ್ಟೇ ಆಧರಿಸಿ ಕೇವಲ ಒಂದು ದಿನದಲ್ಲಿ ರಾಜ್ಯಪಾಲರು ಶೋಕಾಸ್ ನೋಟೀಸ್ ನೀಡಿದ್ದರು. ರಾಜ್ಯಪಾಲರ ಈ ಪಕ್ಷಪಾತದ ನಡೆ ಈಗ ಒಂದು ದೊಡ್ಡ ವಿವಾದವಾಗುವ ಸಾಧ್ಯತೆಯಿದೆ.











