• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರು: ಎಚ್‌ಡಿಕೆ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಮನವಿಯನ್ನು 10 ತಿಂಗಳಿಂದ ಬಚ್ಚಿಟ್ಟಿದ್ದ ರಾಜ್ಯಪಾಲ

ಪ್ರತಿಧ್ವನಿ by ಪ್ರತಿಧ್ವನಿ
August 9, 2024
in Top Story, ಇತರೆ / Others, ಕರ್ನಾಟಕ
0
ಬೆಂಗಳೂರು: ಎಚ್‌ಡಿಕೆ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಮನವಿಯನ್ನು 10 ತಿಂಗಳಿಂದ ಬಚ್ಚಿಟ್ಟಿದ್ದ ರಾಜ್ಯಪಾಲ
Share on WhatsAppShare on FacebookShare on Telegram

ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌(Governor Thawarchand Gehlot) ಅವರಿಂದ ಆಗಿರುವ ದೊಡ್ಡ ತಪ್ಪಿನ ಪೂರ್ಣ ವಿವರ ಪ್ರತಿಧನಿಗೆ (To Pratidhvani) ಲಭ್ಯವಾಗಿದೆ.ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ವಿಚಾರಣೆ ನಡೆಸಿದ ಲೋಕಾಯುಕ್ತದ ಎಸ್‌ಐಟಿಯು (SITU of Lokayukta)ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದು, ಸ್ವತಃ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಲು 10 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದೆ.

ADVERTISEMENT

ಆದರೂ, ಇದುವರೆಗೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.ದಿನಾಂಕ 10/9/2014ರ ಕ್ರೈಮ್‌ ನಂ. 16/14 ಈ ಕೇಸಿನಲ್ಲಿ ಲೋಕಾಯುಕ್ತದ ಅಡಿಯಲ್ಲಿ ಗಣಿ ಅಕ್ರಮಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಕಳಿಸಲಾಗಿದೆ. 21/11/2023ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್‌ ಅವರೇ ಖುದ್ದಾಗಿ ಪತ್ರವನ್ನು ಕಳಿಸಿದ್ದಾರೆ. ಅವರು ಕಳಿಸಿದ ದಿನದಂದು ಇದೇ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌(Governor Thawarchand Gehlot) ಅವರೇ ಕರ್ನಾಟಕದ ರಾಜ್ಯಪಾಲರಾಗಿದ್ದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಬೋಗಸ್‌ ಸಂಸ್ಥೆಗೆ ಎಚ್‌.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ(A bogus company named Shree Sai Venkateswara Minerals, H.D. Kumaraswamy) 6.10.2007ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ(Acres of land are illegally mined) ಗುತ್ತಿಗೆಗೆ ನೀಡಿದ ಆರೋಪ ಕುಮಾರಸ್ವಾಮಿಯವರ ಮೇಲಿತ್ತು. ಸದರಿ ಗುತ್ತಿಗೆ ನೀಡುವಾಗ ಮಿನರಲ್ಸ್‌ ಕನ್ಸಿಷನ್‌ ನಿಯಮಗಳ, ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು(Kumaraswamy in violation of Rule 59 (2).) ಮಂಜೂರು ಮಾಡಿದ್ದರು ಎಂದು ಹೇಳಲಾಗಿತ್ತು.

ಈ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆಯನ್ನು ಮಾಡಿದ ನಂತರ ಎಚ್‌.ಡಿ. ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್‌ ಹಾಕಲಾಗಿದೆ.

ಆ ನಂತರವೇ ಎಡಿಜಿಪಿಯವರು ರಾಜ್ಯಪಾಲರ ಕದ ತಟ್ಟಿದ್ದಾರೆ.ಎಚ್‌ಡಿಕೆ( HDK)ವಿರುದ್ಧ ತನಿಖೆಯನ್ನು ಕೈಗೆತ್ತಿಕೊಳ್ಳುವಾಗ ಅಗತ್ಯವಿರದಿದ್ದ ರಾಜ್ಯಪಾಲರ of the Governor ಅನುಮತಿ ಈಗ ಸಿದ್ದರಾಮಯ್ಯನವರSiddaramaiah’ ವಿಚಾರದಲ್ಲಿ ಏಕೆ ಬೇಕು?2018ಕ್ಕೆ ಮುಂಚೆ ತನಿಖೆ ಶುರು ಮಾಡಲು ಎಫ್‌.ಐ.ಆರ್‌ ದಾಖಲು ಮಾಡಬೇಕೆಂದರೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಬೇಕಿರಲಿಲ್ಲ. ನರೇಂದ್ರ ಮೋದಿಯವರು ಭ್ರಷ್ಟಾಚಾರ ತಡೆ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ತಂದು ಸರ್ಕಾರೀ ಅಧಿಕಾರಿಗಳು ಮತ್ತು ಅಧಿಕಾರಸ್ಥರ ಮೇಲೆ ಎಫ್‌ ಐ ಆರ್‌ ಹಾಕಲೂ ಸಹ ಅನುಮತಿ ಕೇಳುವಂತೆ ಮಾಡಿದ್ದಾರೆ.

ಅದೇನೇ ಇದ್ದರೂ, ಕುಮಾರಸ್ವಾಮಿಯವರ ಮೇಲೆ ತನಿಖೆ ಮುಗಿದು ಚಾರ್ಜ್‌ಶೀಟ್‌ ಸಹ ಆಗಿಬಿಟ್ಟಿದೆ. ಅವರು ತಪ್ಪಿತಸ್ಥರೆಂದೇ ಲೋಕಾಯುಕ್ತ ಎಸ್‌ಐಟಿಗೆ ಮನವರಿಕೆಯೂ ಆಗಿದೆ. ಆದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಸಿದ್ದರಾಮಯ್ಯನವರ ಮೇಲೆ ಮುಡಾ ಹಗರಣದ ಆರೋಪ ಹೊರಿಸಿ, ಯಾವ ತನಿಖಾ ಏಜೆನ್ಸಿ ಅನುಮತಿ ಕೇಳಿರದಿದ್ದರೂ ನಿಮ್ಮ ಮೇಲೆ ತನಿಖೆ ಏಕೆ ಮಾಡಬಾರದು ಎಂದು ನೋಟೀಸ್‌ ನೀಡಿರುವ ಇದೇ ರಾಜ್ಯಪಾಲರು ಕಳೆದ 10 ತಿಂಗಳಿಂದ ಇನ್ನೊಂದು ಮನವಿಯನ್ನು ಕೈಗೇ ತೆಗೆದುಕೊಂಡಿಲ್ಲ.

ಸಿದ್ದರಾಮಯ್ಯನವರ ವಿಚಾರದಲ್ಲಿ ದೂರುದಾರರೊಬ್ಬರ ದೂರನ್ನಷ್ಟೇ ಆಧರಿಸಿ ಕೇವಲ ಒಂದು ದಿನದಲ್ಲಿ ರಾಜ್ಯಪಾಲರು ಶೋಕಾಸ್‌ ನೋಟೀಸ್‌ ನೀಡಿದ್ದರು. ರಾಜ್ಯಪಾಲರ ಈ ಪಕ್ಷಪಾತದ ನಡೆ ಈಗ ಒಂದು ದೊಡ್ಡ ವಿವಾದವಾಗುವ ಸಾಧ್ಯತೆಯಿದೆ.

Tags: BJPFormer CM HD KumaraswamyIllegal MiningJDSPM Narendra ModiProsecution AppealProsecution SIT Appealthawar chand gehlot
Previous Post

ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

Next Post

ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರ ! ಪಾಕ್ ಪಾಲಾದ ಚಿನ್ನದ ಪದಕ !

Related Posts

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು
Top Story

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

by ಪ್ರತಿಧ್ವನಿ
August 30, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿದೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000...

Read moreDetails
ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

August 29, 2026
ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

August 29, 2026
*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

August 29, 2026
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
Next Post
ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರ ! ಪಾಕ್ ಪಾಲಾದ ಚಿನ್ನದ ಪದಕ !

ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರ ! ಪಾಕ್ ಪಾಲಾದ ಚಿನ್ನದ ಪದಕ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada