ಮಖಾನ ಅಂದ್ರೆ ಹೆಚ್ಚು ಜನರಿಗೆ ತಿಳಿದಿರುವ ಒಂದು ಪದಾರ್ಥ ಅಂತಾನೆ ಹೇಳಬಹುದು, ಮಖಾನವನ್ನು ಬಳಸಿ ಸಾಕಷ್ಟು ಔಷಧಿಗಳನ್ನ ಕೂಡ ತಯಾರು ಮಾಡುತ್ತಾರೆ.ಇದರಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಇದನ್ನ ತಾವರೆ ಹೂವಿನ ಬೀಜ ಅಂತಾನೂ ಕರೆಯುತ್ತಾರೆ. ಇನ್ನು ಮಖಾನದ ರುಚಿ ಸೇಮ್ ಪಾಪ್ಕಾರ್ನ್ ರೀತಿ ಇರುತ್ತದೆ. ತಾವರೆ ಹೂವಿನ ಬೀಜವನ್ನು ಹುರಿದಾಗ ಬಿಳಿಯ ಸ್ಪೋಂಜ್ ರೀತಿಯ ಆಗುತ್ತದೆ. ಇದನ್ನು ಪ್ರತಿದಿನ ಒಂದು ಹಿಡಿಯಷ್ಟು ಮಖಾನ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಪ್ರೋಟೀನ್ ಅಂಶ
ಮಖಾನದಲ್ಲಿ ಪ್ರೋಟೀನ್ ಅಂಶ ಹೆಚ್ಚಿದೆ. ಡಯಟ್ ಮಾಡುವವರು, ಅದು ಕೂಡ ತೂಕ ಇಳಿಸುವವರು ಮಖಾನವನ್ನ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾರಣ ಒಂದು ಹಿಡಿಯಷ್ಟು ಮಖಾನವನ್ನ ಸೇವಿಸುವುದರಿಂದ ಇಡೀ ದಿನ ಹಸಿವಾಗುವುದಿಲ್ಲ ಜೊತೆಗೆ ತುಂಬಾನೇ ಆಕ್ಟಿವ್ ಆಗಿರೋದು ಕೂಡ ಸಹಾಯಕಾರಿ.
ತ್ವಚೆಗೆ ಒಳ್ಳೆಯದು
ಮಖಾನದಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹಾಗೂ ಆಂಟಿ ಏಜಿಂಗ್ ಗುಣಲಕ್ಷಣಗಳು ಹೆಚ್ಚಿದೆ. ಹಾಗಾಗಿ ಪ್ರತಿದಿನ ಒಂದು ಹಿಡಿಯಷ್ಟು ಮಖಾನ ಸೇವಿಸುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ, ಕಲೆಗಳು ನಿವಾರಣೆ ಆಗುತ್ತದೆ. ಮುಖ್ಯವಾಗಿ ರಿಂಕಲ್ಸ್, ಫೈನ್ ಲೈನ್ಸ್ ಹಾಗೂ ತ್ವಚೆ ಸುಕ್ಕು ಕಟ್ಟುವುದಿಲ್ಲ.
ಹೃದಯದ ಆರೋಗ್ಯ
ಮಖಾನವನ್ನ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲೂ ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮಖಾನವನ್ನು ಸೇವಿಸುವುದರಿಂದ ಬೇಗನೆ ಕಾಯಿಲೆ ನಿವಾರಣೆ ಆಗುತ್ತದೆ. ಹಾಗೂ ಮಧುಮೇಹ ಸಮಸ್ಯೆ ಇರುವವರೆಗೂ ಕೂಡ ಉತ್ತಮ. ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಅನ್ನ ತಡೆಗಟ್ಟಿ ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಒದಗಿಸುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ಮಖಾನದಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಕೆಲವೊಬ್ಬರಿಗೆ ಕಾನ್ಸ್ಟಿಪೇಶನ್ ಸಮಸ್ಯೆ ಕೂಡ ಹೆಚ್ಚುರುತ್ತದೆ,ಇಂತವರು ಮಖಾನ ತಿನ್ನುವುದು ಉತ್ತಮ..