ಗರ್ಭಿಣಿಯರು ಫೋಲಿಕ್ ಆಸಿಡ್ ಟ್ಯಾಬ್ಲೆಟ್ ಅನ್ನ ತೆಗೆದುಕೊಳ್ಳುವಂತದ್ದು ತುಂಬಾನೇ ಮುಖ್ಯ. ಅದರಲ್ಲೂ ಕೆಲವರು ಗರ್ಭಧಾರಣೆಗೂ ಮುನ್ನ ಅಂದ್ರೆ ಪ್ಲಾನಿಂಗ್ ಇರುವ ಸಂದರ್ಭದಲ್ಲಿಯು ಫೋಲಿಕ್ ಆಸಿಡ್ ಟ್ಯಾಬ್ಲೆಟ್. ಇನ್ನು ಗರ್ಭಧಾರಣೆಯ ನಂತರ ವೈದ್ಯರ ಸಲಹೆ ಮೇರೆಗೆ ಪೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳುವಂತದ್ದು ಉತ್ತಮ. ಮಾತ್ರೆಗಳು ಮಾತ್ರವಲ್ಲದೆ ಪೋಲಿಕ್ ಅಂಶ ಇರುವಂತಹ ಹಣ್ಣುಗಳನ್ನು ಕೂಡ ಸೇವಿಸಬೇಕು. ಈ ಫೋಲಿಕ್ ಆಸಿಡ್ ಇಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದರ ಮಾಹಿತಿ ಹೀಗಿದೆ.

ಬರ್ತ್ ಡಿಫೆಕ್ಟ್ಸ್ ತಡೆಯುತ್ತದೆ
ಫೋಲಿಕ್ ಆಸಿಡ್ ಸ್ಪೈನಾ ಬೈಫಿಡಾ ಮತ್ತು ಅನೆನ್ಸ್‌ಫಾಲಿಯಂತಹ ನರದ ಟ್ಯೂಬ್ ನ ಡಿಫೆಕ್ಟ್ಸ್ ತಡೆಯಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಮೆದುಳು ಮತ್ತು ಬೆನ್ನುಹುರಿಯನ್ನು ರೂಪಿಸುವ ನರದ ಟ್ಯೂಬ್ ಸರಿಯಾಗಿ ಮುಚ್ಚಲು ವಿಫಲವಾದಾಗ ಎನ್‌ಟಿಡಿಗಳು ಸಂಭವಿಸುತ್ತವೆ.

ಭ್ರೂಣದ ಬೆಳವಣಿಗೆಗೆ ಉತ್ತಮ
ಭ್ರೂಣದ ಮೆದುಳು, ಬೆನ್ನುಮೂಳೆ ಮತ್ತು ಇತರ ಪ್ರಮುಖ ಅಂಗಗಳ ಬೆಳವಣಿಗೆಯನ್ನು ಉತ್ತಮ . ಹಾಗೂ ಭ್ರೂಣಕ್ಕೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಫೋಲಿಕ್ ಆಮ್ಲ ಅತ್ಯಗತ್ಯ.

ಗರ್ಭಪಾತದ ಅಪಾಯ ಕಡಿಮೆ
ಇತ್ತೀಚಿನ ದಿನಗಳಲ್ಲಿ ಮಿಸ್ ಕ್ಯಾರೇಜ್ ಅನ್ನುವಂತದ್ದು ತುಂಬಾನೇ ಹೆಚ್ಚಾಗಿದೆ. ಈ ಗರ್ಭಪಾತದ ಅಪಾಯವನ್ನ ತಡೆಯಲು ಫೋಲಿಕ್ ಆಸಿಡ್ ತುಂಬಾನೇ ಸಹಕಾರಿ.

ತಾಯಿಯ ಆರೋಗ್ಯವನ್ನು ಕಾಪಾಡುತ್ತದೆ
ಫೋಲಿಕ್ ಆಮ್ಲವು ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೂ ಗರ್ಭಿಣಿಯರಿಗೆ ಆಗುವಂತ ಸುಸ್ತು, ವಾಕರಿಕೆ, ವಾಂತಿ ತಲೆ ಸುತ್ತಿನಂತ ಸಮಸ್ಯೆಗಳನ್ನ ತಡೆಯುತ್ತದೆ.