ಫೇಶಿಯಲ್ ಆದ ನಂತರ ಮುಖಕ್ಕೆ ಸ್ಟೀಮನ್ನು ಕೊಟ್ಟು ಮುಖದಲ್ಲಿರುವಂಥ ಬ್ಲಾಕೆಟ್ಸ್ ನ ರಿಮೂವ್ ಮಾಡ್ತಾರೆ. ಇದನ್ನ ಇದನ್ನ ಸಲೂನ್ ಗೆ ಹೋಗಿ ಮಾಡಿಸಬೇಕು ಅಂತ ಇಲ್ಲ ಮನೆಯಲ್ಲಿ ಕೂಡ ನೀವು ಸ್ಟೀಮ್ ಅನ್ನ ತೆಗೆದುಕೊಳ್ಳಬಹುದು.. ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ ಅದರ ಹಬೆಯನ್ನು ತೆಗೆದುಕೊಳ್ಳಬಹುದು. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸ್ಟೀಮ್ ತೆಗೆದುಕೊಳ್ಳುವಂತದ್ದು ಉತ್ತಮ. ಹಾಗೂ ಅತಿಯಾಗಿಯೂ ಕೂಡ ಸ್ಟೀಮ್ ತೆಗೆದುಕೊಳ್ಳುವಂತದ್ದು ಉತ್ತಮವಲ್ಲ, ಐದರಿಂದ 10 ನಿಮಿಷಗಳಷ್ಟೆ ಸ್ಟೀಮ್ ತೆಗೆದುಕೊಳ್ಳಬೇಕು. ಸ್ಟೀಮ್ ತೆಗೆದುಕೊಳ್ಳುವುದರಿಂದ ತ್ವಚೆಗೆ ಏನೆಲ್ಲಾ ಲಾಭಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಓಪನ್ ಪೋರ್ಸ್
ಸ್ಟೀಮ್ ಇಂದಾಗಿ ತ್ವಚೆಯಲ್ಲಿ ಪೋರ್ಸ್ ಗಳು ಓಪನ್ ಆಗುತ್ತದೆ..ಇದರಿಂದ ಡೀಪ್ ಕ್ಲೆನ್ಸ್ ಮಾಡಬಹುದು..ಹಾಗೂ ತ್ವಚೆಯಲ್ಲಿ ಇರುವಂತ ಆಯಿಲ್ ನ ತೆಗೆದು ಹಾಕಬಹುದು..ಮುಖ್ಯವಾಗಿ ಡರ್ಟ್ ರಿಮೂವ್ ಮಾಡಬಹುದು.

ಮೊಡವೆಗಳು
ವಾರಕ್ಕೆ ಎರಡು ಬಾರಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಮುಖದಲ್ಲಿರುವ ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಹಾಗೂ ವೈಟ್ ಹೆಡ್ಸ್ ತೆಗೆದುಹಾಕಬಹುದು ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಕಲೆರಹಿತ ತ್ವಚೆ
ಸ್ಟೀಮ್ ನಿಂದಾಗಿ ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್ ಅನ್ನ ತೆಗೆದು ಹಾಕಬಹುದು, ಇದರಿಂದ ತ್ವಚೆಯ ಹೊಳಪು ಹೆಚ್ಚಾಗುವುದರ ಜೊತೆಗೆ ಸ್ಕಿನ್ನ ಸಾಫ್ಟ್ ಮಾಡುತ್ತದೆ.

ಹೈಡ್ರೇಟ್ ಮಾಡುತ್ತದೆ
ಸ್ಕಿನ್ ಹೈಡ್ರೇಟ್ ಮಾಡಲು ನಾನಾ ರೀತಿಯ ಪ್ರಯತ್ನವನ್ನು ಮಾಡ್ತೀವಿ ಆದರೆ ಸ್ಟೀಮ್ ತೆಗೆದುಕೊಳ್ಳುವುದರಿಂದ ನ್ಯಾಚುರಲ್ಲಾಗಿ ಸ್ಕಿನ್ ಹೈಡ್ರೇಟ್ ಆಗುತ್ತದೆ.












