ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ (BY vijayendra) ತಾಕತ್ತು, ದಮ್ಮು ಇದ್ರೆ ನಮ್ಮ ಕಾಂಗ್ರೆಸ್ (Congress) ಸರ್ಕಾರ ಉರುಳಿಸೋಕೆ ಆಗುತ್ತಾ ಕೇಳಿ ಅಂತ, ಬಿ ವೈ ವಿ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ (Gopalakrishna) ಬಹಿರಂಗ ಸವಾಲ್ ಹಾಕಿದ್ದಾರೆ.

ರಾಜ್ಯದಲ್ಲಿ ಸಂಕ್ರಾಂತಿ ನಂತರ ಸರ್ಕಾರ ಪತನವಾಗುತ್ತೆ ಎಂಬ ವಿಜಯೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ,ಅವರ ಅಪ್ಪನ ಅಧಿಕಾರ ಹಾಗೂ ಹಣದ ಬಲದಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ ಅಷ್ಟೇ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಯಾವುದೇ ಸರ್ಕಾರ ಬೀಳಲ್ಲ. ಆ ರೀತಿ ಯಾವುದೇ ಕೆಲಸ ಮಾಡಲು ಆಗಲ್ಲ. ಅವರದೇ ಪಕ್ಷದವರು ವಿಜಯೇಂದ್ರರ ರಾಜೀನಾಮೆ ಕೇಳುತ್ತಿದ್ದಾರೆ.ಅವನ ಬುಡಕ್ಕೆ ಬೆಂಕಿ ಬಿದ್ದಿದೆ. ಮೊದಲು ಅದನ್ನು ಉಳಿಸಿಕೊಳ್ಳಲಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಡಿಮಿಡಿಗೊಂಡಿದ್ದಾರೆ.








