• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಳ್ಳಾರಿ ಎಂಎಲ್‌ಸಿ ಚುನಾವಣೆ: ಗಣಿ ಮಾಫಿಯಾದ ಗಿಣಿ ಕಾಂಗ್ರೆಸ್‌ನ ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವೆ ಮ್ಯಾಚ್ ಫಿಕ್ಸಿಂಗ್ !

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
September 30, 2021
in ಕರ್ನಾಟಕ, ರಾಜಕೀಯ
0
ಬಳ್ಳಾರಿ ಎಂಎಲ್‌ಸಿ ಚುನಾವಣೆ: ಗಣಿ ಮಾಫಿಯಾದ ಗಿಣಿ ಕಾಂಗ್ರೆಸ್‌ನ ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವೆ ಮ್ಯಾಚ್ ಫಿಕ್ಸಿಂಗ್ !
Share on WhatsAppShare on FacebookShare on Telegram

ಬಳ್ಳಾರಿಯ ರಾಜಕಾರಣ ನಿಂತಿರುವುದೇ ಗಣಿ ದಂಧೆಯ ಮೇಲೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಗಣಿ ಮಾಫಿಯಾದ ಕುಳಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಒಂದಿಷ್ಟು ಆಂತರಿಕ ಒಪ್ಪಂದಗಳನ್ನು ಮಾಡಿಕೊಂಡು ಪರಸ್ಪರ ನೆರವಾಗುತ್ತಾರೆ.

ADVERTISEMENT

ಈಗ ಬಳ್ಳಾರಿ ವಿಧಾನ ಪರಿಷತ್‍ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ಘೋಷಣೆ ಆಗಲಿದೆ. ಕಾಂಗ್ರೆಸ್‍ನ ಕೆ.ಸಿ ಕೊಂಡಯ್ಯ ಸದ್ಯಕ್ಕೆ ಇಲ್ಲಿ ಎಂಎಲ್‍ಸಿ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಆಯ್ಕೆಯಾದ ಎಂಎಲ್‍ಸಿಗಳ ಅವಧಿ ಮುಗಿಯುತ್ತಿದ್ದು ಸದ್ಯದಲ್ಲೇ ಚುನಾವಣೆ ಘೋಷಣೆ ಆಗಬಹುದು.

ಕಳೆದೆ ಸಲ ರೆಡ್ಡಿ-ರಾಮುಲುಗಳ  ತೆರೆಮರೆಯ ಬೆಂಬಲದಿಂದ ಕಾಂಗ್ರೆಸ್‍ನ ಕೊಂಡಯ್ಯ ಸುಲಭ ಜಯ ಸಾಧಿಸಿದ್ದರು. ಈ ಸಲವೂ ಅದೇ ಪರಿಸ್ಥಿತಿ ಇದೆ. ಏಕೆಂದರೆ ಬಳ್ಳಾರಿ ಜಿಲ್ಲೆಯ ಪ್ರಗತಿಪರರು ಹೇಳುವಂತೆ ಕೊಂಡಯ್ಯ ಗಣಿ ಮಾಫಿಯಾದ ಗಿಣಿ. ಈಗಾಗಲೇ ಕೊಂಡಯ್ಯ ಮೊದಲ ಸುತ್ತಿನಲ್ಲಿ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸುವ ಕಾರ್ಯಕ್ರಮ ಮುಗಿಸಿದ್ದಾರಂತೆ. ಕೆಲವು ಕಡೆ ಬಿಜೆಪಿ ಕಾರ್ಯಕರ್ತರನ್ನೂ ಇದಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾತೂ ಇವೆ.

ಕೊಂಡಯ್ಯ ಎರಡು ಸಲ ಎಂ.ಪಿ ಆಗಿದ್ದರು. ನಂತರ ಸೋನಿಯಾ ಗಾಂಧಿಯವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಇದರ ಫಲವಾಗಿ ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. ಈಗ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕೊಂಡಯ್ಯನವರಿಗೆ ಇನ್ನೊಂದು ಬಿರುದು ಇದೆ: ಅದು ‘ಜಿಂದಾಲ್‍ ಏಜೆಂಟ್‍’ ಎಂಬುದು. ಹೌದು ಕೊಂಡಯ್ಯ ಬಹಿರಂಗವಾಗಿಯೇ ಜಿಂದಾಲ್‍ ಪರ ಬ್ಯಾಟಿಂಗ್ ಮಾಡುತ್ತ ಬಂದವರು. ಜಿಂದಾಲ್‍ ಯೋಜನೆಗಳು ಸರಾಗವಾಗಿ ನಡೆಯಲು ಸರ್ಕಾರಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸುತ್ತ ಬಂದವರು.

ಇದರಲ್ಲಿ ಮುಚ್ಚುಮರೆ ಏನಿಲ್ಲ. ಬಿಜೆಪಿ ಸರ್ಕಾರ ಜಿಂದಾಲ್‍ ಕಂಪನಿಗೆ  3 ಸಾವಿರ ಎಕರೆ ಭೂಮಿಯನ್ನು ವರ್ಗಾವಣೆ ಮಾಡಲು ಹೊರಟಾಗ ಸದನದಲ್ಲಿ ಕಾಂಗ್ರೆಸ್‍ ಇದನ್ನು ಆಕ್ಷೇಪಿಸಿ ಹೋರಾಟ ಮಾಡುತ್ತಿದ್ದರೆ, ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೊಂಡಯ್ಯ, ಜಿಂದಾಲ್‍ಗೆ ಭೂಮಿ ಬರ್ಗಾವಣೆ ಮಾಡುವುದೇ ಸೂಕ್ತ ಮತ್ತು ಹಾಗೇ ಮಾಡಲೇಬೇಕು ಎಂದು ಘಂಟಾಘೋಷವಾಗಿ ಸಾರಿದ್ದರು.

ಇನ್ನೊಂದು ಸಲ ತುಂಗಭದ್ರಾ ನದಿ ನೀರಿನ ಕೊರತೆಯಾದಾಗ ಜಿಂದಾಲ್‍ಗೆ ನೀರು ಸರಬರಾಜು ನಿಲ್ಲಿಸುವ ಅನಿವಾರ್ಯತೆ ಇತ್ತು. ಆಗಲೂ ಪ್ರೆಸ್‍ಮೀಟ್‍ ಮಾಡಿದ್ದ ಕೊಂಡಯ್ಯನವರು ರೈತರ ಪರ  ನಿಲ್ಲದೇ, ಜಿಂದಾಲ್‍ಗೆ ಯಾವ ಕಾರಣಕ್ಕೂ ನೀರು ಸರಬರಾಜು ನಿಲ್ಲಿಸಬಾರದು ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ಜಿಂದಾಲ್‍ ಒಡೆಯ ಸಜ್ಜನ್‍ ಜಿಂದಾಲ್‍ರ ಕೃಪಕಟಾಕ್ಷ ಕೊಂಡಯ್ಯರ ಮೇಲಿದೆ. ರಾಜಕೀಯವಾಗಿ ನೋಡಿದರೆ ಕೊಂಡಯ್ಗನವರ ಗಾಡ್‍ಫಾದರ್‍ ಮಲ್ಲಿಕಾರ್ಜುನ ಖರ್ಗೆ. ಹೀಗಾಗಿ ಈ ಸಲವೂ ಮೇಲಿನ ಎಲ್ಲ ಕಾರಣಗಳಿಂದ ಕೊಂಡಯ್ಯನವರಿಗೆ ಮತ್ತೆ ಟಿಕೆಟ್‍ ಗ್ಯಾರಂಟಿ.

ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವಿನ ಸಂಬಂಧ ಚೆನ್ನಾಗಿದೆ. ಇತ್ತ ಕಡೆ ಹೊಸಪೇಟೆ (ವಿಜಯನಗರ) ಶಾಸಕ ಮತ್ತು ಸಚಿವ ಆನಂದಸಿಂಗ್‍ ಜೊತೆಗೂ ಕೊಂಡಯ್ಯನವರ ದೋಸ್ತಿ ಚೆನ್ನಾಗಿದೆ. ಹೀಗಾಗಿ ತೆರೆಮರೆಯಲ್ಲಿ ಕೊಂಡಯ್ಯ ಗೆಲುವಿಗೆ ಇವರೆಲ್ಲ ಸಹಕರಿಸಲಿದ್ದಾರೆ.

ಕಳೆದ ಸಲ ಕೊಂಡಯ್ಯ ವಿರುದ್ಧ ಬಿಜೆಪಿ ಚನ್ನಬಸನಗೌಡ ಎಂಬ ‘ವೀಕ್‍’ ಕ್ಯಾಂಡಿಡೇಟ್‍ ಹಾಕಿತ್ತು. ಈಗ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಚನ್ನಬಸನಗೌಡ ಮತ್ತೆ ಟಿಕೆಟ್‍ ಬಯಸಿದ್ದಾರೆ. ಇದರ ಬದಲು ತೀವ್ರ ಸ್ಪರ್ಧೆ ನೀಡಬಲ್ಲ ಎಚ್‍. ಆರ್‍ ಗವಿಯಪ್ಪ ಅಥವಾ ಕಾರ್ತಿಕ್‍ ಘೋರ್ಪಡೆ ಅವರನ್ನು ಕಣಕ್ಕೆ ಇಳಿಸುವುದು ಉತ್ತಮ್ಮ ಎಂದು ಬಿಜೆಪಿಯ ಒಂದು ಗುಂಪು ವಾದಿಸುತ್ತಿದೆ. ಗವಿಯಪ್ಪ ಮತ್ತು ಕಾರ್ತಿಕ್‍ ಘೋರ್ಪಡೆ ಇಬ್ಬರೂ ಏಕಕಾಲಕ್ಕೆ ಕಾಂಗ್ರೆಸ್‍ನಿಂದ  ಬಿಜೆಪಿಗೆ ಬಂದವರು. ಎಚ್‍.ಆರ್‍ ಗವಿಯಪ್ಪ ಕಾಂಗ್ರೆಸ್‍ನಿಂದ  ಬಳ್ಳಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತರಾಗಿದ್ದರು.  ಈಗ ಗವಿಯಪ್ಪನವರಿಗೆ ಎಂಎಲ್‍ಸಿ ಆಗುವುದು ಇಷ್ಟವಿಲ್ಲ. ಮತ್ತೆ ಎಂಎಲ್‍ಎ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಅವರ ಗುರಿ.

ಘೋರ್ಪಡೆ ಮನೆತನದ ಕಾರ್ತಿಕ್‍ ಘೋರ್ಪಡೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸಹೋದರಿ ಯಶೋಧರಾ ರಾಜೆ ಕುಟುಂಬದ ಜೊತೆಗೆ  ಬೀಗತನ ಮಾಡಿದ್ದಾರೆ. ಯಶೋಧರಾ ರಾಜೆ ಕೂಡ ಮಧ್ಯಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಚಿವೆಯೂ ಆದವರು. ಹೀಗಾಗಿ ಕಾರ್ತಿಕ್‍ ಅವರಿಗೆ ಟಿಕೆಟ್‍ ಸಿಗುವುದು ಸುಲಭ. ಆದರೆ  60 ವರ್ಷದ ಅವರಿಗೇ  ಇದರಲ್ಲಿ ಆಸಕ್ತಿ ಇಲ್ಲ.

ಹೀಗಾಗಿ ಮತ್ತೆ ಚನ್ನಬಸನಗೌಡರಿಗೇ ಬಿಜೆಪಿ ಟಿಕೆಟ್‍ ಸಿಗುವುದು ಪಕ್ಕಾ  ಆಗಿದೆ. ಆಗ ಮತ್ತೆ ಕೊಂಡಯ್ಯ ಹಾದಿ ಸುಗಮವಾಗಬಹುದು. ಕಾಂಗ್ರೆಸ್‍ನಿಂದ ಕೊಂಡಯ್ಯ ಅಲ್ಲದೇ ಮಾಜಿ ಶಾಸಕ, ಮಾಜಿ ರಾಜ್ಯಸಭಾ ಸದಸ್ಯ ಅನಿಲ್‍ ಲಾಡ್‍ ಕೂಡ ಆಕಾಂಕ್ಷಿ.  ಹಾಗೆಯೇ ಮಾಜಿ ಸಚಿವ ಸಂತೋಷ್‍ ಲಾಡ್‍ ಮುಂಡರಗಿ ನಾಗರಾಜ್‍ ಎಂಬಾತನಿಗೆ ಟಿಕೆಟ್‍ ಕೊಡಿಸುವ ಯತ್ನ ಮಾಡುತ್ತಿದ್ದಾರೆ. ಬಳ್ಳಾರಿ ಮೂಲದ ಈ ಮುಂಡರಗಿ ನಾಗರಾಜ್‍ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಜಿಲ್ಲಾ ಪಂಚಾಯತ್‍ ಕ್ಷೇತ್ರದ ಸದಸ್ಯ.

ಇಲ್ಲಿ ಅನಿಲ್‍ ಲಾಡ್‍ಗೆ ಏಕಾಏಕಿ ಟಿಕೆಟ್‍ ನೀಡಲು ಯಾವ ಕಾರಣಗಳೂ ಇಲ್ಲ. ಮುಂಡರಗಿ ನಾಗರಾಜ್‍ಗೂ ಟಿಕೆಟ್‍ ಸಿಗುವುದು ಕಷ್ಟ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸೋತು ಬಂದಿರುವ ಸಂತೋಷ್‍ ಲಾಡ್‍ ಬಳ್ಳಾರಿಯಲ್ಲಿ ಮತ್ತೆ ತಮ್ಮ ಅಸ್ತಿತ್ವ ಸಾರಲು ಮುಂಡರಗಿ ನಾಗರಾಜ್‍ ಹೆಸರನ್ನು ಮುಂದೆ ತರುತ್ತಿದ್ದಾರಷ್ಟೇ.

ಹೀಗಾಗಿ ಸಿಟ್ಟಿಂಗ್‍ ಎಂಎಲ್‍ಸಿ ಕೆ.ಸಿ ಕೊಂಡಯ್ಯನವರಿಗೇ ಮತ್ತೊಂದು ಅವಕಾಶ ಸಿಗಲಿದೆ.  ಬಿಜೆಪಿಯ ರೆಡ್ಡಿ-ರಾಮುಲು, ಆನಂದ್‍ಸಿಂಗ್‍  ಅವರ ಪರೋಕ್ಷ ಸಹಾಯ ಮತ್ತು ಉದ್ಯಮಿ ಸಜ್ಜನ ಜಿಂದಾಲ್‍ ಅವರ ‘ನಿಧಿ’ ಕೊಂಡಯ್ಯ ಪರ ಕೆಲಸ ಮಾಡಲಿವೆ!

ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‍ ಮತ್ತು ಬಿಜೆಪಿಗಳ ರಾಜಕೀಯ ದಿವಾಳಿತನಕ್ಕೆ ಈ ವಿದ್ಯಮಾನ ಸಾಕ್ಷಿಯಾಗಿದೆ.

Tags: BellariBellaryBellary DistrictBellary RepublicBJPCongress PartyElectionElectionslegislative councilಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದತ್ತಾತ್ರೇಯ ಪೀಠ ವಿವಾದ: ಹೈ ಕೋರ್ಟ್ ಆದೇಶದಲ್ಲಿ ಇರುವುದಾದರು ಏನು ?

Next Post

ಮಹಿಳೆಯ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಮಹಿಳೆ ಪಾರು

Related Posts

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
0

ಮೇಷ ರಾಶಿಯ ಇಂದಿನ ಭವಿಷ್ಯ ಮೇಷ ರಾಶಿಯವರು ಈ ದಿನ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾವುದೇ ವ್ಯವಹಾರ ಮಾಡುವಾಗ ಎಚ್ಚರವಹಿಸಿ. ಪರಿಚಿತರೊಂದಿಗೆ ಹಣದ ವ್ಯವಹಾರ...

Read moreDetails
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

December 18, 2025
Next Post
ಮಹಿಳೆಯ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಮಹಿಳೆ ಪಾರು

ಮಹಿಳೆಯ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಮಹಿಳೆ ಪಾರು

Please login to join discussion

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!