ಇಂದು ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಪ್ರತಿಭಟನೆ ಕಿಚ್ಚಿನ ನಡುವೆ ವಿವಿಧ ಸಂಘಟನೆಗಳಿಂದ ಇನ್ನಷ್ಟು ಪ್ರತಿಭಟನೆ ನಡೆಯಲಿದೆ.ಬೆಳಗಾವಿಯ ಕೊಂಡಸ ಕೊಪ್ಪದಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ AITUCಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ಇನ್ನು ಮತ್ತೊಂದೆಡೆ ಲಾಠಿ ಚಾರ್ಜ್ ಹಾಗೂ ಪೊಲೀಸರ ನಡೆ ಖಂಡಿಸಿ ಪಂಚಮಸಾಲಿ ಸಮುದಾಯ ರಾಜ್ಯಾದ್ಯಂತ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರಸ್ತೆ ತಡೆಗೆ ಕರೆ ನೀಡಲಾಗಿದೆ.
ಇಂದು (ಡಿ.12) ಬೆಳಗಾವಿ ಜಿಲ್ಲಾಡಳಿತ ಒಟ್ಟು 10 ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದು, ವಿವಿಧ ಸಂಘಟನೆಗಳು ಇವತ್ತು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಹೀಗಾಗಿ ಬೆಳಗಾವಿ ಇಂದು ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ.