• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗಾಂಧಿ ಪರಿವಾರದ ನಿಷ್ಠರನ್ನು ಪ್ರಮುಖ ಹುದ್ದೆಗಳಿಂದ ದೂರವಿಡಿ : ಜಿ-23 ನಾಯಕರ ಆಗ್ರಹ

Any Mind by Any Mind
March 17, 2022
in ದೇಶ, ರಾಜಕೀಯ
0
ಗಾಂಧಿ ಪರಿವಾರದ ನಿಷ್ಠರನ್ನು ಪ್ರಮುಖ ಹುದ್ದೆಗಳಿಂದ ದೂರವಿಡಿ : ಜಿ-23 ನಾಯಕರ ಆಗ್ರಹ
Share on WhatsAppShare on FacebookShare on Telegram

ಪಂಚರಾಜ್ಯಗಳ ಚುನಾವಣೆಯಿಂದ ತೀವ್ರ ಮುಜುಗರಕ್ಕೆ ತುತ್ತಾಗಿರುವ ಕಾಂಗ್ರೆಸ್ನಲ್ಲಿ ಆಡಳಿತಾತ್ಮಕ ಸರ್ಜರಿ ನಡೆಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಈ ನಡುವೆ, ‘ಬಲಿಷ್ಠ ನಾಯಕತ್ವ’ಕ್ಕಾಗಿ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿರುವ ಜಿ-23 ನಾಯಕರು, ಚುನಾವಣೆಯ ಸೋಲಿನ ಕುರಿತು ಸಭೆ ನಡೆಸಿದ್ದಾರೆ. ಈ ಸಭೆಯ ಪ್ರಮುಖಾಂಶಗಳ ಕುರಿತು ಚರ್ಚೆ ನಡೆಸಲು ಹಾಗೂ ದೇಶದ ಅತ್ಯಂತ ಹಿರಿಯ ರಾಜಕೀಯ ಪಕ್ಷವನ್ನು ಮತ್ತೆ ಬಲಿಷ್ಟವಾಗಿ ಕಟ್ಟುವ ಸಲುವಾಗಿ ಜಿ-23 ಗುಂಪಿನ ಪ್ರತಿನಿಧಿಯಾಗಿ ಕಾಂಗ್ರೆಸ್ ಹಿರಿಯ ಸದಸ್ಯ, ಮಾಜಿ ರಾಜ್ಯಸಭಾ ಸಂಸದ ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ADVERTISEMENT

ಸದ್ಯಕ್ಕೆ ಪಕ್ಷವನ್ನು ಒಡೆಯುವ ನಿರ್ಧಾರವನ್ನು ಕೈಬಿಟ್ಟಿರುವ ಜಿ-23 ನಾಯಕರು, ಪಕ್ಷ ಒಡೆದಲ್ಲಿ ಅದನ್ನು ತಡೆದುಕೊಳ‌್ಳುವ ಶಕ್ತಿ ನಾಯಕರಿಗೆ ಇಲ್ಲ. ಪಕ್ಷವು ಮತ್ತಷ್ಟು ಪಾತಾಳಕ್ಕೆ ಇಳಿಯುವುದು ಖಚಿತವೆಂದು ‘ನಂಬಿರುವ’ ಇವರು, ಸಂಘಟಿತ ಹಾಗೂ ಎಲ್ಲರನ್ನೂ ಒಳಗೊಂಡ ನಾಯಕತ್ವ ಮತ್ತು ದೃಢ ನಿರ್ಧಾರ ಕೈಗೊಳ್ಳುವಿಕೆಯ ಪ್ರಸ್ತಾಪವನ್ನು ಸೋನಿಯಾ ಗಾಂಧಿ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಬೇಡಿಕೆಗಳಲ್ಲಿ ರಾಷ್ಟ್ರೀಯ ನಾಯಕತ್ವದ ಬದಲಾವಣೆಯ ಪ್ರಸ್ತಾಪವನ್ನೂ ಕೈಬಿಟ್ಟಿರುವ ಸಾಧ್ಯತೆಗಳಿವೆ.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಪರಾಮರ್ಶೆ ನಡೆಸಲು ಕರೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಅವರ ಈ ‘ತ್ಯಾಗ’ವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ‘ಸರ್ವಾನುಮತದಿಂದ’ ತಿರಸ್ಕರಿಸಲಾಯಿತು, ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಭೆಯ ಬಳಿಕ ಹೇಳಿದ್ದರು.

Also Read : ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದ ‘ಜಿ-23’ ನಾಯಕರ ಗ್ಯಾಂಗ್ ಅಪ್

ರಾಜಿನಾಮೆ ಬದಲಾಗಿ, ಕಾಂಗ್ರೆಸ್ ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ತರಲು ನಿರ್ಧಾರ ಕೈಗೊಳ್ಳುವಂತೆ ಸೋನಿಯಾ ಗಾಂಧಿಯವರಿಗೆ ಸಿಡಬ್ಲ್ಯೂಸಿ ಸಭೆಯಲ್ಲಿ ಇತರ ಸದಸ್ಯರು ಮನವಿ ಮಾಡಿಕೊಂಡಿದ್ದರು. ಇದರ ಫಲವಾಗಿ, ಪಂಚರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ರಾಜಿನಾಮೆಯನ್ನು ಕೇಳಲಾಯಿತು. ಮುಂದುವರೆದು, ಇತರ ಬದಲಾವಣೆಗಳನ್ನು ಪಟ್ಟಿಮಾಡಲು ಜೈರಾಂ ರಮೇಶ್, ಅಜಯ್ ಮಾಕೆನ್, ಅವಿನಾಶ್ ಪಾಂಡೆ ಮತ್ತು ಜೀತೆಂದ್ರ ಸಿಂಗ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಇವರೆಲ್ಲರೂ ಹಿಂದಿನಿಂದಲೂ ಗಾಂಧಿ ಪರಿವಾರದೊಂದಿಗೆ ಗುರುತಿಸಿಕೊಂಡವರು.

ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಜಿ-23 ನಾಯಕರು, ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಸ್ಥಾನಗಳಿಗೆ ‘ಗಾಂಧಿ ಪರಿವಾರ’ಕ್ಕೆ ನಿಷ್ಠರಾಗಿರುವವರನ್ನು ಮಾತ್ರ ನೇಮಿಸುವುದನ್ನು ಟೀಕಿಸಿದೆ. ಗಾಂಧಿ ಪರಿವಾರಕ್ಕೆ ನಿಷ್ಠೆ ತೋರಿಸುವ ಸಲುವಾಗಿ, ರಾಷ್ಟ್ರ ನಾಯಕರನ್ನು ಎಲ್ಲಾ ತಪ್ಪುಗಳಿಂದಲೂ ದೂರವಿಟ್ಟು, ನಾಮ್ ಕೆ ವಾಸ್ತೆ ಬದಲಾವಣೆಗಳನ್ನು ಮಾತ್ರ ಸೂಚಿಸುವ ಅಪಾಯವಿದೆ ಎಂದು ಜಿ-23 ನಾಯಕರು ಆರೋಪಿಸಿದ್ದಾರೆ.

ಈ ಬಾರಿಯ ಜಿ-23 ಸಭೆಯಲ್ಲಿ ಹಳೆಯ ನಾಯಕರ ಜತೆ, ಗಾಂಧಿ ಪರಿವಾರದ ಆಪ್ತರಾಗಿದ್ದ ಮಣಿಶಂಕರ್ ಅಯ್ಯರ್ ಅವರು ಕೂಡಾ ಗುರುತಿಸಿಕೊಂಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಈ ಸಭೆಯಲ್ಲಿ ಕಪಿಲ್ ಸಿಬಲ್, ಮನೀಶ್ ತಿವಾರಿ, ಆನಂದ್ ಶರ್ಮಾ, ಫೃಥ್ವಿರಾಜ್ ಚವ್ಹಾಣ್, ಭೂಪಿಂದರ್ ಹೂಡಾ, ರಾಜ್ ಬಬ್ಬರ್ ಹಾಗೂ ಶಂಕರ್ ಸಿಂಗ್ ವಘೇಲಾ ಅವರೂ ಹಾಜದ್ದರು.

ಈ ಹಿಂದೆ ಜಿ-23 ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಶಶಿ ತರೂರ್, ಈ ಬಾರಿ ಜಿ-23ಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಗುರುತಿಸಿಕೊಂಡಿದ್ದರು.

Tags: BJPCongress PartyCovid 19ಕರೋನಾಕೋವಿಡ್-19ಗಾಂಧಿ ಕುಟುಂಬಗಾಂಧಿ ಜಯಂತಿಗಾಂಧಿ ಪರಿವಾರಜಿ-23ನರೇಂದ್ರ ಮೋದಿಪ್ರಮುಖ ಹುದ್ದೆಪ್ರಿಯಾಂಕಾ ಗಾಂಧಿಬಿಜೆಪಿರಾಹುಲ್ ಗಾಂಧಿಸೋನಿಯಾ ಗಾಂಧಿ
Previous Post

ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸುತ್ತಿರುವವರ ವಿರುದ್ಧ ಗುಡುಗಿದ ವಿಪಕ್ಷ ನಾಯಕ ಸಿದ್ದರಾಮಯ್ಯ

Next Post

ಮೇಲ್ಮನೆಗೆ ಎಎಪಿ ಅಭ್ಯರ್ಥಿಯಾಗಿ Turbanoter ಹರ್ಭಜನ್ ಸಿಂಗ್!

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
Next Post
ಮೇಲ್ಮನೆಗೆ ಎಎಪಿ ಅಭ್ಯರ್ಥಿಯಾಗಿ Turbanoter ಹರ್ಭಜನ್ ಸಿಂಗ್!

ಮೇಲ್ಮನೆಗೆ ಎಎಪಿ ಅಭ್ಯರ್ಥಿಯಾಗಿ Turbanoter ಹರ್ಭಜನ್ ಸಿಂಗ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada