ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದೆ. ಈಗ ಪಕ್ಷವನ್ನು ಪಾತಾಳದಿಂದ ಮೇಲೆತ್ತಲು ಬಹಳ ಶ್ರಮದ ಅಗತ್ಯ ಇದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವುದು ಮಾತ್ರ ‘ಉಂಡ ಮನೆಯಲ್ಲಿ ಗಳ ಇರಿಯುವ’ ಕೆಲಸ. ಕಾಂಗ್ರೆಸ್ ಪಕ್ಷ ಕಡು ಕಷ್ಟದಲ್ಲಿರುವಾಗ ‘ಜಿ-23’ ಎಂದು ಗುರುತಿಸಿಕೊಂಡಿರುವ ನಾಯಕರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.
ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಲು ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸಭೆ ಕರೆಯಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹೇಳಿದ್ದಾರೆ. ಅದರ ನಡುವೆ ಈ ‘ಜಿ-23’ ಗ್ಯಾಂಗ್ ಶುಕ್ರವಾರ ರಾತ್ರಿ ದೆಹಲಿಯಲ್ಲಿರುವ ಗುಲಾಮ್ ನಭಿ ಆಜಾದ್ ನಿವಾಸದಲ್ಲಿ ಸಭೆ ಸೇರಿದೆ. ಸಭೆಯಲ್ಲಿ ಆನಂದಶರ್ಮಾ, ಕಪಿಲ್ ಸಿಬಲ್, ಮನೀಷ್ ತಿವಾರಿ ಮತ್ತಿತರರು ಪಾಲ್ಗೊಂಡಿದ್ದಾರೆ. ಈ ಹೆಸರುಗಳನ್ನು ಮತ್ತೊಮ್ಮೆ ಗಮನಿಸಿ.
ಕಾಂಗ್ರೆಸ್ ಪಕ್ಷ ಗುಲಾಮ್ ನಭಿ ಅವರನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ, ರಾಜ್ಯಸಭೆಯ ಸದಸ್ಯ, ಕೇಂದ್ರ ಸಚಿವ, ಪ್ರತಿಪಕ್ಷದ ನಾಯಕ, ಹಲವು ರಾಜ್ಯಗಳಿಗೆ ಉಸ್ತುವಾರಿ ಎಲ್ಲವನ್ನೂ ಮಾಡಿದೆ. ಮತ್ತೊಮ್ಮೆ ರಾಜ್ಯಸಭಾ ಸದಸ್ಯತ್ವ ನೀಡಲಿಲ್ಲ ಎಂದು ಈಗ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಪಿಲ್ ಸಿಬಾಲ್ ಅವರಿಗೆ ರಾಜ್ಯಸಭಾ, ಲೋಕಸಭಾ ಸೀಟುಕೊಟ್ಟಿದೆ. ಕೇಂದ್ರ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿ ಪ್ರಮುಖ ಖಾತೆಯನ್ನೂ ಕೊಡಲಾಗಿತ್ತು. ಆದರೂ ಅವರಿಗೆ ಇನ್ನೂ ಆಸೆ. ಆನಂದ ಶರ್ಮಾ ಅವರಿಗೆ ರಾಜ್ಯಸಭಾ ಸ್ಥಾನ ನೀಡಿರುವುದಲ್ಲದೆ ರಾಜ್ಯಸಭೆಯ ಪ್ರತಿಪಕ್ಷದ ಉಪ ನಾಯಕನ ಸ್ಥಾನವನ್ನು ನೀಡಲಾಗಿದೆ. ಆದರವರು ಪ್ರತಿಪಕ್ಷದ ಸ್ಥಾನವನ್ನೇ ಬೇಕು ಎಂದು ಕಾಂಗ್ರೆಸ್ ವಿರುದ್ಧ ಕಹಳೆ ಮೊಳಗಿಸುತ್ತಿದ್ದಾರೆ. ಮನೀಶ್ ತಿವಾರಿ ಇದ್ದುದರಲ್ಲಿ ಯುವಕರು. ಅವರನ್ನು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯಂತಹ ಪ್ರಮುಖ ಖಾತೆ ಕೊಡಲಾಗಿತ್ತು. ಆದರೀಗ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಕೊಟ್ಟಿಲ್ಲ ಎಂದು ಬಂಡಾಯದ ಭಾವುಟ ಹಿಡಿದು ನಿಂತಿದ್ದಾರೆ.
ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಬಂದ ಮರುದಿನವೇ ಇವರೆಲ್ಲಾ ಸಭೆ ಸೇರುತ್ತಾರೆ ಎಂದರೆ ನಿಜಕ್ಕೂ ಇವರೆಲ್ಲಾ ಕಾಂಗ್ರೆಸ್ ಪಕ್ಷದ ಸೋಲನ್ನೇ ಬಯಸಿದ್ದರೇ ಎಂಬ ಅನುಮಾನ ಯಾರಿಗಾದರೂ ಮೂಡದೇ ಇರದು. ‘ನಾವು ಪಕ್ಷ ನಿಷ್ಠರು, ಶೀಘ್ರವೇ ಪಕ್ಷಕ್ಕೆ ಅಧ್ಯಕ್ಷರು ಆಯ್ಕೆ ಆಗಬೇಕು, ಅದಕ್ಕಾಗಿ ಒತ್ತಡ ಹೇರಲು ಒಂದೆಡೆ ಸೇರುತ್ತಿದ್ದೇವೆ’ ಎಂಬುದು ಇವರ ಸಮಜಾಯಿಷಿ. ನಿಜಕ್ಕೂ ಅದೇ ಇವರ ಉದ್ದಶವಾಗಿದ್ದರೆ ರಣದೀಪ್ ಸುರ್ಜೆವಾಲಾ ಹೇಳಿರುವಂತೆ ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ವಿಷಯ ಚರ್ಚಿಸಬಹುದಿತ್ತಲ್ಲವೇ? ಹೇಗೂ ಗುಲಾಮ್ ನಭಿ ಆಜಾದ್ ಮತ್ತು ಆನಂದ ಶರ್ಮಾ ಕಾರ್ಯಕಾರಣಿ ಸಮಿತಿ ಸದಸ್ಯರು.
ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಪಕ್ಷವನ್ನು 2024ರ ಲೋಕಸಭಾ ಚುನಾವಣೆಗೆ ಸನ್ನದ್ದುಗೊಳಿಸುವ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ದೊಡ್ಡ ಮಟ್ಟದ ಬದಲಾವಣೆ ಎಂದರೆ ಎಐಸಿಸಿ ಅಧ್ಯಕ್ಷರ ಬದಲಾವಣೆಯೂ ಸೇರಿರುತ್ತದೆ. ಅದೂ ಅಲ್ಲದೆ ರಾಹುಲ್ ಗಾಂಧಿ ಅಧ್ಯಕ್ಷರಾಗಲು ಈಗ ಒಪ್ಪಿರುವುದರಿಂದ ಮೂರ್ನಾಲ್ಕು ತಿಂಗಳಲ್ಲಿ ಎಐಸಿಸಿ ಅಧ್ಯಕ್ಷಗಾದಿಯ ಸಮಸ್ಯೆ ಇತ್ಯರ್ಥ ಆಗುತ್ತದೆ. ಈ ಸಂಗತಿ ಜಿ-23 ತಂಡದ ಸದಸ್ಯರಿಗೆ ತಿಳಿಯದ ವಿಷಯವೇನೂ ಅಲ್ಲ. ಆದರೂ ಪರ್ಯಾಯ ಸಭೆ ಸೇರಿ ‘ಗ್ಯಾಂಗ್ ಅಪ್’ ಆಗುತ್ತಿದ್ದಾರೆ ಎಂದರೆ ಬೇರೆ ಏನೋ ಮಸಲತ್ತು ನಡೆಸುತ್ತಿದ್ದಾರೆ ಎಂದೇ ಅರ್ಥ.
ಈ ಬಾರಿಯ ಕಾರ್ಯಕಾರಣಿ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಪ್ರಿಯಾಂಕಾ ಗಾಂಧಿ ಅವರನ್ನು ಸೇರಿದಂತೆ ಈಗ ಸೋತಿರುವ ಐದು ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಂದ ರಾಜೀನಾಮೆ ಪಡೆಯುತ್ತಾರೆ. ಈ ಕಠಿಣ ಕ್ರಮದ ಮೂಲಕ ಮುಂದೆ ಪ್ರತಿ ಹುದ್ದೆಗೂ ಇನ್ನು ಮುಂದೆ ಜವಾಬ್ದಾರಿ ಇರುತ್ತದೆ, ಅವರೇ ಹೊಣೆ ಹೊರಬೇಕಾಗುತ್ತದೆ. ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶ ಸಾರಲು ಕಾಂಗ್ರೆಸ್ ಮುಂದಾಗಿದೆ. ಇದೇ ರೀತಿ ‘ಜಿ-23’ ನಾಯಕರನ್ನು ನಿರ್ಲಕ್ಷಿಸುವ ನಿರ್ಧಾರವನ್ನೂ ತೆಗೆದುಕೊಳ್ಳಬೇಕಿದೆ. ಮುಲಾಜಿಲ್ಲದೆ ಇವರ ಮೇಲೆ ಕ್ರಮವನ್ನೂ ಕೈಗೊಳ್ಳಬೇಕಿದೆ ಎನ್ನುತ್ತಾರೆ ‘ಪ್ರತಿಧ್ವನಿ’ ಜೊತೆ ಮಾತನಾಡಿದ ಹೆಸರು ಬಹಿರಂಗಪಡಿಸಿಕೊಳ್ಳಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು. ಇದು ಬಹುತೇಕ ಕಾಂಗ್ರೆಸ್ ನಾಯಕರ ಅಭಿಪ್ರಾಯವೂ ಆಗಿದೆ. ಇಂತಹ ಪ್ರಾಮಾಣಿಕ ನಾಯಕರ ಮನದಿಂಗಿತಕ್ಕೆ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆ ಓಗೊಡುವುದೇ ಎಂಬುದನ್ನು ಕಾದುನೋಡಬೇಕಿದೆ.