ಹೈದ್ರಾಬಾದ್‌ನಲ್ಲಿ ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದಿದ್ದ ಕಾಲ್ತುಳಿತ ದುರಂತ ನಟ ಅಲ್ಲು ಅರ್ಜುನ್‌ಗೆ ಸಂಕಷ್ಟ ತಂದೊಡ್ಡಿದೆ.. ಈಗಾಗಲೇ ಬಂಧನವಾಗಿ ಜೈಲಿಗೆ ಹೋಗಿ ಬಂದಿದ್ದ ನಟ ಅಲ್ಲು ಅರ್ಜುನ್, ಸದ್ಯ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.. ಈ ನಡುವೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಟಾಲಿವುಡ್‌ನಲ್ಲಿ ಭಾರೀ ಸಂಚನ ಮೂಡಿಸಿದೆ..
ನಿನ್ನೆ ತೆಲಂಗಾಣ ವಿಧಾನಸಭೆಯಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ಕಿಡಿಕಾರಿದ್ದರು.. ಪೊಲೀಸರು ಅನುಮತಿ ನಿರಾಕರಿಸಿದ್ರೂ ಥಿಯೇಟರ್‌ಗೆ ನಟ ಮೆರವಣಿಗೆ ಮೂಲಕ ಬಂದಿದ್ದೇ ಕಾಲ್ತುಳಿತಕ್ಕೆ ಕಾರಣ ಅಂತ ಆರೋಪಿಸಿದ್ರು. ಮೃತ ಮಹಿಳೆ ರೇವತಿ ಸಾವಿಗೆ ನಟ ಅಲ್ಲು ಅರ್ಜುನ್ ನೇರ ಹೊಣೆ ಅಂತ ಸಿಟ್ಟು ಹೊರ ಹಾಕಿದ್ರು.. ಆ ಬಳಿಕ ನಟ ಅಲ್ಲು ಅರ್ಜುನ್ ಸುದ್ದಿಗೋಷ್ಠಿ ನಡೆಸಿ ಆರೋಪ ತಳ್ಳಿ ಹಾಕಿದ್ರು.. ಕಾಲ್ತುಳಿತ ಘಟನೆ ಆಕಸ್ಮಿಕ ಅಂದಿದ್ದ ಅಲ್ಲು ಅರ್ಜುನ್, ನಾನು ಥಿಯೇಟರ್‌ಗೆ ಹೋಗಲು ಪೊಲೀಸರು ಪರ್ಮಿಷನ್ ಕೊಟ್ಟಿದ್ರು ಅಂದಿದ್ದರು.
ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ನಟ ಅಲ್ಲು ಅರ್ಜುನ್ ಟಾಂಟ್ ಕೊಡುತ್ತಿದ್ದಂತೆ ಭಾನುವಾರ ಹೈದ್ರಾಬಾದ್ ಪೊಲೀಸ್ರು ವಾಗ್ದಾಳಿ ಮಾಡಿದ್ದಾರೆ. ಹೈದ್ರಾಬಾದ್ ಎಸಿಪಿ ವಿಷ್ಣುಮೂರ್ತಿ ಮಾತನಾಡಿ, ವೀರ-ಶೂರ ಅಂತ ಜಾಸ್ತಿ ಮೆರೆದಾಡಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಏಕವಚನದಲ್ಲೇ ನಟ ಅಲ್ಲು ಅರ್ಜುನ್‌ಗೆ ಎಚ್ಚರಿಕೆ ನೀಡಿದ್ದಾರೆ.. ಇನ್ನು ನೀನು ಮಾಡ್ತಿರೋದೇನು..? ನಿನಗೆ ಗೈಡೆನ್ಸ್ ಯಾರು ಕೊಡ್ತಿದ್ದಾರೆ..? ಹೇಳೋದು ಒಂದು.. ಮಾಡುವುದು ಒಂದು. ನಿಮ್ಮ ಚರ್ಮವನ್ನ ಒಳ್ಳೆ ರೀತಿ ಇಟ್ಟುಕೊಳ್ಳದಿದ್ರೆ.. ಸುಲಿದು ಹಾಕುತ್ತೇನೆ ಎಂದಿದ್ದಾರೆ. ಪೊಲೀಸ್ ಇಲಾಖೆ ಸಮಾಜದ ಶಾಂತಿಗೆ ಪ್ರತಿದಿನ ಶ್ರಮಿಸುತ್ತದೆ. ನಿನ್ನಂತ ವೀರರು, ಶೂರರು
ಬಹಳ ಜನ ಬಂದ್ರು.. ಕಾಲ ಗರ್ಭದಲ್ಲಿ ಕಳೆದುಹೋದ್ರು. ನಿನ್ನ ಹಿಂದೆ ಪೊಲೀರನ್ನ ಕಳಿಸಿಲ್ಲ ಅಂದ್ರೆ ಹೇಗಿರುತ್ತೆ.. ಸಾರ್ವನಿಕವಾಗಿ ತಿರುಗಲು ಸಾಧ್ಯವಿಲ್ಲ ಹುಷಾರ್ ಎಂದಿದ್ದಾರೆ.
ಇಷ್ಟೆಲ್ಲಾ ಆಗ್ತಿದ್ದಂತೆ ಹೈದ್ರಾಬಾದ್‌ನ ಜ್ಯುಬಿಲಿ ಹಿಲ್ಸ್‌ನ ನಟ ಅಲ್ಲು ಅರ್ಜುನ್ ನಿವಾಸದ ಮುಂದೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಅಲ್ಲು ಅರ್ಜುನ್ ನಿವಾಸದ ಮೇಲೆ ದಾಳಿ ಮಾಡಿದ ಕೆಲವು ಕಿಡಿಗೇಡಿಗಳು, ಟೊಮ್ಯಾಟೋ ಹಾಗು ಕಲ್ಲು ತೂರಾಟ ಮಾಡಿದ್ದಾರೆ.. ಹೂ ಕುಂಡಗಳನ್ನ ಕೆಳಗೆ ಹಾಕಿ ಪೀಸ್ ಪೀಸ್ ಮಾಡಿದ್ದಾರೆ.. ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತಾ ಆಗ್ರಹಿಸಿ, ನಟ ಅಲ್ಲು ಅರ್ಜುನ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ.. ಆದರೆ ಅಭಿಮಾನಿಗಳು ಶಾಂತ ರೀತಿಯಲ್ಲಿರಿ ಜಾಲತಾಣ ಹಾಗು ಹೊರಗೂ ಆಕ್ರೋಶ ವ್ಯಕ್ತಪಡಿಸಬೇಡಿ ಎಂದು ಅಲ್ಲು ಕರೆ ನೀಡಿದ್ದಾರೆ.