ಇತ್ತೀಚಿನ ಇ-ಹರಾಜಿನಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1,036 ಕಾರ್ನರ್ ಸೈಟ್‌ಗಳ ಪೈಕಿ 628 ಸೈಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. 391.68 ಕೋಟಿ ಮೂಲ ಬೆಲೆಯಾದರೂ ಈ ಸೈಟ್‌ಗಳನ್ನು 589.13 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.
ಬನಶಂಕರಿ, ಜೆ.ಪಿ.ನಗರ, ಕೆಂಪೇಗೌಡ ಬಡಾವಣೆ, ಅಂಜನಾಪುರ ಮತ್ತಿತರ ಬಡಾವಣೆಗಳ ಕಾರ್ನರ್ ನಿವೇಶನಗಳನ್ನು ಹರಾಜು ಹಾಕಲಾಯಿತು.

ಬನಶಂಕರಿ 2ನೇ ಹಂತದಲ್ಲಿ ಒಂದು ಕಾರ್ನರ್ ಸೈಟ್ ಅನ್ನು 4.39 ಕೋಟಿ ರೂ.ಗೆ ಮಾರಾಟ ಮಾಡಲಾಗಿದ್ದು, ಇದು ಅತ್ಯಧಿಕ ಬೆಲೆಯಾಗಿದೆ. ಕೆಂಪೇಗೌಡ ಲೇಔಟ್ 7ನೇ ಹಂತದಲ್ಲಿರುವ ಮತ್ತೊಂದು ನಿವೇಶನ ಚದರ ಮೀಟರ್‌ಗೆ 1,14,600 ರೂಯಾಗೆ ಮಾರಟವಾಗಿದ್ದು ದಾಖಲೆಯಾಗಿದೆ. ಮೂಲ ಬೆಲೆಗಿನ್ನ ಹೆಚ್ಚಿನ ಬೆಲೆಗೆ ಗ್ರಾಹಕರು ಬಿಡ್ ಮಾಡಿ ಸೈಟ್ಗಳನ್ನು ಖರೀದಿಸಿದ್ದಾರೆ ಎನ್ನುವುದೇ ಮುಖ್ಯ ವಿಷಯ.






