• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆರ್ಥಿಕ ಸಂಕಷ್ಟದ ನಡುವೆ ಕಟ್ಟಡ ಕೆಡವಲು ಹೊರಟ BDA: 110 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ.!!

ಕರ್ಣ by ಕರ್ಣ
August 23, 2021
in ಕರ್ನಾಟಕ
0
ಆರ್ಥಿಕ ಸಂಕಷ್ಟದ ನಡುವೆ ಕಟ್ಟಡ ಕೆಡವಲು ಹೊರಟ BDA: 110 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ.!!
Share on WhatsAppShare on FacebookShare on Telegram

ಇಡೀ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೂರಿದೆ. ರಾಜ್ಯ ಸರ್ಕಾರವೂ ಆರ್ಥಿಕ ಹೊಡೆತದಿಂದ ಕಂಗಾಲಾಗಿದೆ. ಇಂಥಾ ಸಂಕಷ್ಟದ ಸಮಯದಲ್ಲಿ ‌ಇಡೀ‌ ದೇಶದಲ್ಲಿ ತನ್ನದೇ ಆದ ಹೆಸರು ಮಾಡಿಕೊಂಡಿರುವ ಬೆಂಗಳೂರಿನ ಅಭಿವೃದ್ಧಿ ‌ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಖಾಸುಮ್ಮನೆ ಕೋಟಿ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದೆ. ವಿಪರ್ಯಾಸವೆಂದರೆ ಸುಸ್ಥಿತಿ ಕಟ್ಟಡವನ್ನು ಕೆಡವಿ ಹೊಸ ಬಿಲ್ಡಿಂಗ್ ಕಟ್ಟಲು ಹೊರಟಿದೆ. 

ADVERTISEMENT

ಸುಸ್ಥಿತ ಕಟ್ಟಡ ಕೆಡವಿ ‘ಅಭಿವೃದ್ಧಿ ಭವನ‘ ಕಟ್ಟಲು ಮುಂದಾಗಿರುವ ಪ್ರಾಧಿಕಾರ.!!

BDA. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಸಿಲಿಕಾನ್ ಸಿಟಿ ಬೆಂಗಳೂರಿನ ಫ್ಲೈ ಓವರ್ ಗಳು, ಬಡಾವಣೆಗಳನ್ನು ನಿರ್ಮಿಸಿ‌ ಬೆಂಗಳೂರಿನ ಅಭಿವೃದ್ಧಿ ಮಾಡುವುದರಲ್ಲಿ ಬಿಡಿಎ ಪಾತ್ರ ದೊಡ್ಡದು. ಅಂಥಾ ಬಿಡಿಎ ಪ್ರಾಧಿಕಾರವನ್ನು ಕೇಳುವವರು, ಹೇಳುವವರು ಯಾರೂ ಇಲ್ಲ ಎಂಬ ನಡವಳಿಕೆಯನ್ನು ತೋರುತ್ತಿದೆ. ಕೊರೋನಾ‌ ಹೊಡೆತದಿಂದ ಕಂಗೆಟ್ಟು ಹೋಗಿರುವ ಹೊತ್ತಲ್ಲಿ ಬರೋಬ್ಬರಿ‌ ನೂರಕ್ಕೂ ಅಧಿಕ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಭವನ ನಿರ್ಮಿಸಲು ಮುಂದಾಗಿದೆ. ಅಷ್ಟಕ್ಕೂ ಅಭಿವೃದ್ಧಿ ಭವನ ನಿರ್ಮಿಸುವುದು ಸಮಸ್ಯೆ ಅಲ್ಲ.‌ ಬಿಡಿಎ ಈಗಿರುವ ಕಟ್ಟಡ ಬಿರುಕು, ಬಳಕೆಗೆ‌ ಯೋಗ್ಯವಲ್ಲ, ಯಾವ ಸಮಯದಲ್ಲಿ ಬೇಕಿದ್ದರೂ ನೆಲಕ್ಕುರುಳುವ ಸಂಭವ ಎದುರಾದರೆ ಹೊಸ ಕಟ್ಟಡ ನಿರ್ಮಿಸುವ ವಾದ ಒಪ್ಪಿಕೊಳ್ಳುವಂತದ್ದು, ಆದರೆ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡವಿ 110 ಕೋಟಿ‌ ವೆಚ್ಚದಲ್ಲಿ ಅಭಿವೃದ್ಧಿ ಭವನ ನಿರ್ಮಿಸುವ ‌ಬಿಡಿಎ ಹೊರಟಿದೆ. 

ಅಭಿವೃದ್ಧಿ ಭವನ ನಿರ್ಮಿಸಲು BDA ಕೊಡುವ ಕಾರಣವೇನು.!?

– ಬಿಡಿಎಗೆ ಜಾಗದ ಕೊರತೆ ಇದೆ

– ಬಿಡಿಎ ಕಡತಗಳನ್ನು ರಾಶಿ ರಾಶಿಯಾಗಿ ಇಡಲಾಗುತ್ತಿದೆ

– ಕಡತಗಳನ್ನು‌ ಆಯಾ ವಿಭಾಗದ ಕಚೇರಿಯಲ್ಲಿ ಎಲ್ಲೆಂದರಲ್ಲಿ‌ ಇಡಲಾಗುತ್ತದೆ

– ಬಿಡಿಎಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ 

– ಪಾರ್ಕಿಂಗ್ ‌ಇಲ್ಲದ ಕಾರಣ ಜಾಗದ ವ್ಯಸವ್ಥೆ ಸಮರ್ಪಕವಾಗಿಲ್ಲ

– ಸದ್ಯಕ್ಕಿರುವ ಕಟ್ಟಡ ಅವೈಜ್ಞಾನಿಕವಾಗಿದೆ

– ದೊಡ್ಡ ಜಾಗದಲ್ಲಿ‌ ಸಣ್ಣ‌ ಕಚೇರಿ ಇದೆ

– ಇಡೀ ಬೆಂಗಳೂರಿನ ಅಭಿವೃದ್ಧಿಯ ಹೊಣೆ ಹೊತ್ತಿರುವ BDA ಕಟ್ಟಡ ಈ ರೀತಿ ಇದ್ದರೆ ಅದು ಬೆಂಗಳೂರಿಗೆ ಶೋಭೆಯಲ್ಲ

– ಅಭಿವೃದ್ಧಿ ಭವನ ನಿರ್ಮಾಣ ಆಗುತ್ತಿರುವುದು‌ ಸರ್ಕಾರದ ಹಣದಿಂದಲ್ಲ

– BDA ದುಡ್ಡಿನಿಂದಲೇ ಅಭಿವೃದ್ಧಿ ಭವನ ನಿರ್ಮಾಣ ಆಗ್ತಿದೆ

– BDA ಹಣ ಜನರಿಗೆ ನೇರವಾಗಿ ಸಂಬಂಧ ಪಡುವಂತದ್ದಲ್ಲ

– ಬೆಂಗಳೂರಿನ ಹೃದಯ ಭಾಗದಲ್ಲಿ 16 ಅಂತಸ್ತಿನ ಸರ್ಕಾರಿ ಕಟ್ಟಡ ಇರುವುದು ಹೆಮ್ಮೆ ಪಡಬೇಕಾದ ವಿಚಾರ

– ಹೊಸ ಅಭಿವೃದ್ಧಿ ಭವನ ಕಟ್ಟಡ ವೈಜ್ಞಾನಿಕವಾಗಿ ಇರಲಿದೆ

– ಜಮೀನಿನ ಬಳಕೆ ಹಾಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವದೇ ಅಭಿವೃದ್ಧಿ ಭವನ ಕಟ್ಟಡ ನಿರ್ಮಾಣದ ಗುರಿ

– ಈ ಎಲ್ಲಾ ಕಾರಣಗಳಿಂದ 110 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ

ನಿವೇಶನಗಳ ಹರಾಜಿನಿಂದ BDA ಗೆ ಬರಲಿದೆ‌ 1,800 ಕೋಟಿಗೂ ಅಧಿಕ‌ ಮೊತ್ತ.!!

ಯಾಕೆ ದಿಢೀರನೇ ಬಿಡಿಎ ಈ ಅಭಿವೃದ್ಧಿ ಭವನ ನಿರ್ಮಿಸಲು ಹೊರಟಿದೆ ಎಂದರೆ, ಇತ್ತೀಚೆಗೆ ಪ್ರಾಧಿಕಾರ ತನ್ನ ವ್ಯಾಪ್ತಿಯಲ್ಲಿ ಏಳು ಹಂತವಾಗಿ‌ ವಿವಿಧ ಲೇಔಟ್ ನಿವೇಶನಗಳನ್ನು ಹರಾಜು ಮಾಡಿತ್ತು. ಇದರಿಂದ‌ ಬಿಡಿಎಗೆ ಬರೋಬ್ಬರಿ‌ 1,800  ಕೋಟಿ ರೂ. ಹರಿದು ಬರಲಿದೆ. ಹೀಗಾಗಿ ಈಗ ಅಭಿವೃದ್ಧಿ ಭವನ ಕಟ್ಟಲು ಹೊರಟಿರುವ ಬಿಡಿಎ ಈ ಹಣದ ಮೇಲೆ ಕಣ್ಣಿದ್ದೆಯೇ ಎಂಬ ಅನುಮಾನ ಹುಟ್ಟಿಸಿದೆ. ಆದರೆ ಅಭಿವೃದ್ಧಿ ಮಾಡುವಾಗ ಇಂಥಾ ಟೀಕೆ ಟಿಪ್ಪಣಿಗಳು ಸರ್ವೇ ಸಾಮಾನ್ಯ ಅಂತ ಆರೋಪಗಳನ್ನೆಲ್ಲಾ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ತಳ್ಳಿ ಹಾಕಿದರು. ಅಲ್ಲದೆ ಅಭಿವೃದ್ಧಿ ಭವನ ನಿರ್ಮಾಣ ಆಗೇ ಆಗುತ್ತೆ.. ಅದಕ್ಕೆ ಬೇಕಾದ ಕೆಲಸಗಳು ಈಗಾಗಲೇ ಶುರುವಾಗಿದೆ ಅಂತ ಹೇಳಿದರು. 

ಒಟ್ಟು 16 ಅಂತಸ್ತು.. 2 ವರ್ಷ.. 4.50 ಲಕ್ಷ ಚದರ ಅಡಿಯ ಕಟ್ಟಡದ ಗುರಿ.!!

ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಅಭಿವೃದ್ಧಿ ಭವನ ನಿರ್ಮಿಸಲು ಹೊರಟಿರುವ ಬಿಡಿಎ, ಒಟ್ಟು 14 + 2 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಲೆಕ್ಕಾಚಾರ ಹೊಂದಿದೆ. 2 ಅಂತಸ್ತು ಭೂಗತ ಪಾರ್ಕಿಂಗ್ ವ್ಯವಸ್ಥೆ, 14 ಅಂತಸ್ತಿನ ಕಚೇರಿ ವ್ಯವಸ್ಥೆ ನಿರ್ಮಿಸುವ ಯೋಜನೆ ಪ್ರಾಧಿಕಾರದ್ದು. ಅಷ್ಟಕ್ಕೂ ಬಿಡಿಎ ಇರುವುದು ಬಹಳ ಹಳೆಯ ಕಟ್ಟಡ ಹಾಗೂ 20 ವರ್ಷಗಳ ಹಿಂದೆ ನಿರ್ಮಾಣ ಆಗಿರುವ ಕಟ್ಟಡದಲ್ಲಿ. ಹೀಗಿದ್ದರೂ, ಒಟ್ಟು 2 ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಿ ಭವನ ನಿರ್ಮಿಸುವ ಪಣ ತೊಟ್ಟಿದೆ. ಇದಕ್ಕೆ ಸರ್ಕಾರದ ಅನುದಾವಿಲ್ಲ..‌ ಸಂಪೂರ್ಣವಾಗಿ ಬಿಡಿಎ ದುಡ್ಡಿನಲ್ಲೇ ನಿರ್ಮಾಣಗೊಳ್ಳಲಿದೆ. ಒಟ್ಟು 4.50 ಲಕ್ಷ ಚದರ ಅಡಿಯ ಕಟ್ಟಡವದು. ಈ ಪೈಕಿ 2.50 ಲಕ್ಷ ಚದರ ಅಡಿ ಬಿಡಿಎ ಕಚೇರಿಗೇ‌ ಬಳಕೆಯಾಗಲಿದೆ. ಉಳಿದಂತೆ  2 ಲಕ್ಷ ಚದರ ಅಡಿ ಜಾಗದಲ್ಲಿ ಕಚೇರಿ ನಿರ್ಮಿಸಿ‌ ವಿವಿಧ ಇಲಾಖೆಗಳಿಗೆ ಬಾಡಿಗೆಗೆ ಕೊಟ್ಟು ಆದಾಯದ ಮೂಲ ಮಾಡಿಕೊಳ್ಳುವ ಲೆಕ್ಕಾಚಾರ ಬಿಡಿಎದ್ದು. ಅಂದಹಾಗೆ, ಬಿಡಿಎ ಒಟ್ಟು 2 ಎಕರೆ 29 ಗುಂಟೆ ಜಮೀನು ಒಟ್ಟಾರೆ ಹೊಂದಿದೆ.‌

Tags: BDA‌bengalurusr vishwanath
Previous Post

ಮೈಸೂರು: ವಾರಾಂತ್ಯ ಕರ್ಫ್ಯೂ ಉಲ್ಲಂಘನೆ, 116 ವಾಹನಗಳನ್ನು ವಶಪಡಿಸಿಕೊಂಡ ಪೋಲಿಸ್

Next Post

ಮೈಸೂರು: ಮಗುವನ್ನು ನಿರಾಕರಿಸಿದ ಅವಿವಾಹಿತ ದಂಪತಿಗಳು: ಹೈಕೋರ್ಟ್ ನಿಂದ ಮಹತ್ವದ ತೀರ್ಪು!

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಬೋಧಕ, ಬೋಧಕೇತರರನ್ನು ಕರೋನಾ ಫ್ರಂಟ್ ಲೈನ್ ಕಾರ್ಯಕರ್ತರೆಂದು ಪರಿಗಣಿಸಿ: ಬೊಮ್ಮಾಯಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಮೈಸೂರು: ಮಗುವನ್ನು ನಿರಾಕರಿಸಿದ ಅವಿವಾಹಿತ ದಂಪತಿಗಳು: ಹೈಕೋರ್ಟ್ ನಿಂದ ಮಹತ್ವದ ತೀರ್ಪು!

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada