• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಾಲೆಗಳಲ್ಲಿ ಗಣಪತಿ ಮೂರ್ತಿ ಕೂರಿಸಲು ಅವಕಾಶ; ವಿವಾದ ಸೃಷ್ಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ಕರ್ಣ by ಕರ್ಣ
August 18, 2022
in ಕರ್ನಾಟಕ, ರಾಜಕೀಯ
0
ಶಾಲೆಗಳಲ್ಲಿ ಗಣಪತಿ ಮೂರ್ತಿ ಕೂರಿಸಲು ಅವಕಾಶ; ವಿವಾದ ಸೃಷ್ಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ
Share on WhatsAppShare on FacebookShare on Telegram

ರಾಜ್ಯದಲ್ಲಿ ಇದೀಗ ಧರ್ಮ ದಂಗಲ್‌ಗೆ ಹೊಸ ವಿಚಾರ ಸೇರ್ಪಡೆಯಾಗಿದೆ.‌ ಗಣೇಶ ಹೆಸರಿನಲ್ಲಿ ಶಿಕ್ಷಣ ಇಲಾಖೆ ಹೊಸ ಕಾಂಟ್ರವರ್ಸಿ ಹುಟ್ಟಿ ಹಾಕಿದೆ. ಶಿಕ್ಷಣ ಸಚಿವರ ಆ ಒಂದು ಹೇಳಿಕೆಗೆ ಪರೋಕ್ಷವಾಗಿ ವಕ್ಫ್ ಬೋರ್ಡ್ ಟಾಂಗ್ ನೀಡಿದ್ದು, ಹಲವು ಬೇಡಿಕೆ ಶಿಕ್ಷಣ ಸಚಿವರ ಮುಂದೆ ಇಟ್ಟಿದೆ. 

ADVERTISEMENT

ಹೊಸ ವಿವಾದಕ್ಕೆ ಮುನ್ನುಡಿ ಬರೆದ ಶಿಕ್ಷಣ ಸಚಿವ  ಬಿ.ಸಿ.ನಾಗೇಶ್ 

ಹಿಜಾಬ್, ಪಠ್ಯ ಪರಿಷ್ಕರಣೆ , ಭಗವದ್ಗೀತೆ ಕಾಂಟ್ರವರ್ಸಿ ಆದ್ಮೇಲೆ ಇದೀಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದ ಮುನ್ನೆಲೆಗೆ ಬಂದಿದ್ದು, ಮತ್ತೆ ಶಾಲೆ- ಕಾಲೇಜುಗಳಲ್ಲಿ ಧರ್ಮ ದಂಗಲ್ ಶುರುವಾಗಿದೆ.‌ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣಪತಿ ಕೂರಿಸಲು ಅವಕಾಶ ನೀಡುತ್ತೇವೆ ಎಂಬ ಹೇಳಿಕೆಗೆ ವಾಕ್ ವಕ್ಫ್ ಬೋರ್ಡ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.‌ ಹೌದು, ಶಿಕ್ಷಣ ಸಚಿವ ಬಿಸಿ ನಾಗೇಶ್ ಎಲ್ಲಾ ಶಾಲೆಗಳಲ್ಲಿ ಗಣೇಶನ ಮೂರ್ತಿ ಕೂರಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿರೋದು ಈಗ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ. 

ಗಣೇಶೋತ್ಸವಕ್ಕೆ ಅವಕಾಶ ಕೊಟ್ರೆ, ಮುಸ್ಲಿಮರ ಹಬ್ಬಕ್ಕೂ ಅವಕಾಶಕ್ಕೆ ನೀಡುವಂತೆ ಆಗ್ರಹ 

ಇದಕ್ಕೆ ಪ್ರತಿಯಾಗಿ ಟಾಂಗ್ ಕೊಟ್ಟಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ ಶಿಕ್ಷಣ ಸಚಿವರ ಈ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ ಮುಸ್ಲಿಮರ ಧಾರ್ಮಿಕ ಹಬ್ಬಗಳಿಗೂ ಶಿಕ್ಷಣ ಸಚಿವರು ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಇದರ ಜೊತೆಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. 

ಶಿಕ್ಷಣ ಸಚಿವರಿಗೆ ಪರೋಕ್ಷವಾಗಿ ಕಾಲೆಳದ ಅಧ್ಯಕ್ಷ ಶಾಫಿ ಸ‌ಅದಿ : 

ಮುಸ್ಲಿಮರ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು. ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು. ಗಣೇಶನ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು. ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು. ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು.‌ ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು. ಮುಸ್ಲಿಮರ ಆಚರಣೆಗೂ ಕೂಡಾ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಜಾಬ್ ವಿವಾದ ಆದಾಗಲೂ ನಾವು ಒಂದು ವಿಷಯ ಸ್ಪಷ್ಟ ಪಡಿಸಿದ್ದೇವೆ. ಧಾರ್ಮಿಕ‌ ವಿಚಾರಗಳನ್ನು ತಿಳಸೋ ಮೂಲಕ ಅಪನಂಬಿಕೆ ಹೋಗಲಾಡಿಸಬೇಕು.‌ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಅವಕಾಶ ಮಾಡಿಕೊಡಬೇಕು. ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ರೀತಿಯಲ್ಲೇ ಮುಸ್ಲಿಮರ ಹಬ್ಬಕ್ಕೂ ಅವಕಾಶ ಮಾಡಿಕೊಡಬೇಕು ಎಂಬುವುದು ವಕ್ಫ್ ಬೋರ್ಡ್ ಅಧ್ಯಕ್ಷರ ವಾದ. ಒಟ್ಟಾರೆ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣೇಶ ಹಬ್ಬ ಆಚರಣೆಗೆ ಹೇಳಿಕೆಗೆ ಪರ, ವಿರೋಧ ಚರ್ಚೆ ಆಗ್ತಿದ್ದು, ಮತ್ತೆ ಇದು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಗಿಲ್-ಧವನ್‌ ಅಜೇಯ ಆಟ: ಜಿಂಬಾಬ್ವೆಗೆ 10 ವಿಕೆಟ್‌ ಸೋಲಿನ ಪಾಠ

Next Post

ದೆಹಲಿ; ಬಿಎಸ್‌ಪಿ ಸಂಸದ ಅನ್ಸಾರಿ ಮನೆ ಮೇಲೆ ಇಡಿ ದಾಳಿ

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
ದೆಹಲಿ; ಬಿಎಸ್‌ಪಿ ಸಂಸದ ಅನ್ಸಾರಿ ಮನೆ ಮೇಲೆ ಇಡಿ ದಾಳಿ

ದೆಹಲಿ; ಬಿಎಸ್‌ಪಿ ಸಂಸದ ಅನ್ಸಾರಿ ಮನೆ ಮೇಲೆ ಇಡಿ ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada