• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹತ್ತರಿಂದ ಏಳು ದಿನಕ್ಕೆ ಹೋಮ್ ಐಸೋಲೇಷನ್ ಅವಧಿ ಇಳಿಸಿದ ಪಾಲಿಕೆ : ನಂತರ ಕರೋನಾ ಪರೀಕ್ಷೆ ಅಗತ್ಯವಿಲ್ಲ

ಕರ್ಣ by ಕರ್ಣ
January 19, 2022
in ಕರ್ನಾಟಕ
0
ಹತ್ತರಿಂದ ಏಳು ದಿನಕ್ಕೆ ಹೋಮ್ ಐಸೋಲೇಷನ್ ಅವಧಿ ಇಳಿಸಿದ ಪಾಲಿಕೆ : ನಂತರ ಕರೋನಾ ಪರೀಕ್ಷೆ ಅಗತ್ಯವಿಲ್ಲ
Share on WhatsAppShare on FacebookShare on Telegram

ಕರೋನಾ ಓಟಕ್ಕಿಳಿದರೂ ಸಾವಿನ ಸಂಖ್ಯೆ ಬಹಳ ಕಡಿಮೆ ನೆಮ್ಮದಿಯ ಸಂಗತಿ. ಆಸ್ಪತ್ರೆ ಸೇರುವವರ ಸಂಖ್ಯೆಯೂ ಹಿಡಿತದಲ್ಲಿದೆ. ಹೀಗಾಗಿ ಬಿಬಿಎಂಪಿ ಹೋಮ್ ಐಸೋಲೇಷನ್ ಅವಧಿ ಕಡಿತ ಹಾಗೂ ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿದ್ದ ಆ್ಯಂಟಿ ಬಯಾಟಿಕ್ ಮಾತ್ರಯೊಂದನ್ನು ಪಟ್ಟಿಯಿಂದ ಹೊರಗಿಟ್ಟಿದೆ.

ADVERTISEMENT

ಆ್ಯಂಟಿ ಬಯಾಟಿಕ್ ಮಾತ್ರೆ ನುಂಗಿದರೆ ಜೋಕೆ

ರಾಜ್ಯಕ್ಕೆ ಮಾತ್ರವಲ್ಲ ಕರೋನಾಗೂ ಬೆಂಗಳೂರೇ ರಾಜಧಾನಿ. ಇಡೀ ದೇಶದಲ್ಲಿ ಕರೋನಾಗೆ ಸಂಬಂಧಿಸಿ ಅಗ್ರ ಪಟ್ಟಿಯಲ್ಲಿರುವ ಬೆಂಗಳೂರಿನಲ್ಲಿ ಸೋಂಕು ಹೈಕ್ ಆಗುತ್ತಲೇ ಇದೆ. ಈಗಾಗಲೇ ನಗರದಲ್ಲಿ 20 ಸಾವಿರಕ್ಕೂ ಅಧಿಕ ಸೋಂಕು ದಾಖಲಾಗಿರುವ ಉದಾಹರಣೆಗಳಿವೆ. ಇದೀಗ ಸೋಂಕು ಹೆಚ್ಚಳವಾಗಿದ್ದರೂ ಮರಣ ದರ ಕಡಿಮೆ ಇದೆ ಎಂಬ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಬಿಬಿಎಂಪಿ. ಪಾಸಿಟಿವ್ ಬಂದು ಹೋಮ್ ಐಸೋಲೇಷನ್ ಆಗುವ ಜನರ ಕ್ವಾರಂಟೈನ್ ಅವಧಿ ಕಡಿತಗೊಳಿಸುವುದರ ಜೊತೆಗೆ ಸೋಂಕಿತರಿಗೆ ನೀಡಲಾಗುತ್ತಿದ್ದ ಐವರ್ ಮೆಕ್ಟಿನ್ ಎಂಬ ಆ್ಯಂಟಿ ಬಯಾಟಿಕ್ ಔಷಧಿಯನ್ನು ಸೋಂಕಿತರಿಗೆ ನೀಡದಂತೆ ಸೂಚಿಸಿದೆ.

ಸೋಂಕಿತರಿಗೆ ಐವರ್ ಮೆಕ್ಟಿನ್ ಬಳಸದಂತೆ ಬಿಬಿಎಂಪಿ ಸೂಚನೆ

ಕರೋನಾ ಮೂರನೇ ಅಲೆಯ ಟ್ರೀಟ್ಮೆಂಟ್ನಿಂದ ಸೀವಿಯರ್ ಆ್ಯಂಟಿ ಬಯಾಟಿಕ್‌ ಮಾತ್ರೆಯೊಂದಕ್ಕೆ ಗೇಟ್ ಪಾಸ್ ನೀಡಲಾಗಿದೆ. ಹೈ ಪಿವರ್ ಐವರ್ ಮೆಕ್ಟಿನ್ ಔಷಧಿಯನ್ನು ಸೋಂಕಿತರಿಗೆ ನೀಡಲಾಗುತ್ತಿರಯವ ಔಷಧಿಗಳ ಪಟ್ಟಿಯಿಂದ ಪಾಲಿಕೆ ಕೈ ಬಿಟ್ಟಿದೆ. ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳವಾಗಿದ್ದರೂ ತೀವ್ರತೆ ಕಡಿಮೆ ಇದೆ. ಹೀಗಾಗಿ ಮೈಲ್ಡ್ ರೋಗ ಲಕ್ಷಣ ಹಿನ್ನಲೆ, ಆ್ಯಂಟಿ ಬಯಾಟಿಕ್ ಔಷಧಿಯಾಗಿರುವ ಐವರ್ ಮೆಕ್ಟಿನ್ ಗೆ ಗೇಟ್ ಪಾಸ್ ನೀಡಲಾಗಿದೆ. ಇದರ ಬದಲಿಗೆ ಸಾಮಾನ್ಯ ಪ್ರಮಾಣದ ಮಾತ್ರೆಗಳನ್ನು ನೀಡಲು ಸೂಚಿಸಲಾಗಿದೆ. ಎರಡನೇ ಅಲೆಯಲ್ಲಿ ಐವರ್ ಮೆಕ್ಟಿನ್ ಬಳಕೆ ತೀವ್ರ ಪ್ರಮಾಣದಲ್ಲಿ ಆಗಿದ್ದರಿಂದ ಬ್ಲಾಕ್ ಫಂಗಸ್ ಕೇಸ್ ಹೆಚ್ಚಾಗಿತ್ತು. ಈ ಬಾರಿ ರೋಗ ಲಕ್ಷಣ ಕ್ಷೀಣವಾಗಿರುವ ಜೊತೆಗೆ ವ್ಯಾಕ್ಸಿನೇಷನ್‌ ಕೂಡ ಆಗಿರುವುದರಿಂದ ಐವರ್ ಮೆಕ್ಟಿನ್ ಔಷಧಿ ಕೊರೋನಾ ಟ್ರೀಟ್ಮೆಂಟ್ ಪಟ್ಟಿಯಿಂದ ಪಾಲಿಕೆ ದೂರ ಇಟ್ಟಿದೆ.

ಹೋಮ್ ಐಸೋಲೇಷನ್ ಅವಧಿಯಲ್ಲಿ 3 ದಿನ ಕಡಿತ

ಕರೋನಾ‌ ಸೋಂಕು ಹೆಚ್ಚಳವಾಗುತ್ತಿದ್ದರೂ, ಹೋಮ್ ಐಸೋಲೇಷನ್ ನಲ್ಲೇ ಹೆಚ್ಚು ಮಂದಿ‌ ಗುಣಮುಖರಾಗುತ್ತಿದ್ದಾರೆ. ಈ ಹಿನ್ನೆಲೆ ಹೋಮ್ ಐಸೋಲೇಷನ್ ಅವಧಿಯನ್ನು ಪಾಲಿಕೆ ಕಟ್ ಆಫ್ ಮಾಡಿದೆ. ಈ ಮೋದಲು ಸೋಂಕಿತರು ಹತ್ತು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಬೇಕಿತ್ತು‌. ಆದರೆ ಈಗ ಹತ್ತು ದಿನಗಳಿಂದ 7 ದಿನಗಳಿಗೆ ಹೋಮ್ ಐಸೋಲೇಷನ್ ಅವಧಿ ಕಡಿತ ಮಾಡಲಾಗಿದೆ. ಸೋಂಕು ತಗುಲಿ ಏಳನೇ ದಿನಕ್ಕೆ ಸೋಂಕಿತರು ಐಸೋಲೇಷನ್ ಕ್ವಿಟ್ ಮಾಡಬಹುದು. ಅದಾಗಿಯೂ ಏಳನೇ ದಿನಕ್ಕೆ ಸೋಂಕಿತರು ಮತ್ತೆ ಕರೋನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಏಳನೇ ದಿನಕ್ಕೆ ಕೊರೋನಾ ಪರೀಕ್ಷೆ ಮಾಡಿಸದಯೇ ಹೋಮ್ ಕ್ವಾರಂಟೈನ್ ಕ್ವಿಟ್ ಮಾಡಬಹುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಮೂರನೇ ಅಲೆ ಎರಡನೇ ಅಲೆಯಂತೆ ಭೀಕರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸೋಂಕು ಹೆಚ್ಚಳವಾಗಿರುವ ಹೊತ್ತಲ್ಲೇ ಬಿಬಿಎಂಪಿ ಇಂಥಾ ಮಹತ್ವದ ಹೆಜ್ಜೆಗಳನ್ನು ಇಟ್ಟು ಸೋಂಕು ತಡೆಯುವ ಕಡೆಗೆ ಗಮನ ಹರಿಸುತ್ತಿದೆ. ಇದು ಜನರಿಗೆ ಬಹಳ ಅನುಕೂಲವಾಗಲಿದೆ.

Tags: BBMPCovid 19ಕರೋನಾಕೋವಿಡ್-19
Previous Post

ಪಂಚರಾಜ್ಯ ಚುನಾವಣೆ; ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಎಎಪಿ

Next Post

ಪಂಜಾಬ್ ಚುನಾವಣೆ: ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಗೊತ್ತೇ?

Related Posts

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ
ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

by ಪ್ರತಿಧ್ವನಿ
April 16, 2026
0

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ...

Read moreDetails
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಪಂಜಾಬ್ ಚುನಾವಣೆ: ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಗೊತ್ತೇ?

ಪಂಜಾಬ್ ಚುನಾವಣೆ: ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಗೊತ್ತೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada