ಕರೋನಾ ಓಟಕ್ಕಿಳಿದರೂ ಸಾವಿನ ಸಂಖ್ಯೆ ಬಹಳ ಕಡಿಮೆ ನೆಮ್ಮದಿಯ ಸಂಗತಿ. ಆಸ್ಪತ್ರೆ ಸೇರುವವರ ಸಂಖ್ಯೆಯೂ ಹಿಡಿತದಲ್ಲಿದೆ. ಹೀಗಾಗಿ ಬಿಬಿಎಂಪಿ ಹೋಮ್ ಐಸೋಲೇಷನ್ ಅವಧಿ ಕಡಿತ ಹಾಗೂ ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿದ್ದ ಆ್ಯಂಟಿ ಬಯಾಟಿಕ್ ಮಾತ್ರಯೊಂದನ್ನು ಪಟ್ಟಿಯಿಂದ ಹೊರಗಿಟ್ಟಿದೆ.
ಆ್ಯಂಟಿ ಬಯಾಟಿಕ್ ಮಾತ್ರೆ ನುಂಗಿದರೆ ಜೋಕೆ
ರಾಜ್ಯಕ್ಕೆ ಮಾತ್ರವಲ್ಲ ಕರೋನಾಗೂ ಬೆಂಗಳೂರೇ ರಾಜಧಾನಿ. ಇಡೀ ದೇಶದಲ್ಲಿ ಕರೋನಾಗೆ ಸಂಬಂಧಿಸಿ ಅಗ್ರ ಪಟ್ಟಿಯಲ್ಲಿರುವ ಬೆಂಗಳೂರಿನಲ್ಲಿ ಸೋಂಕು ಹೈಕ್ ಆಗುತ್ತಲೇ ಇದೆ. ಈಗಾಗಲೇ ನಗರದಲ್ಲಿ 20 ಸಾವಿರಕ್ಕೂ ಅಧಿಕ ಸೋಂಕು ದಾಖಲಾಗಿರುವ ಉದಾಹರಣೆಗಳಿವೆ. ಇದೀಗ ಸೋಂಕು ಹೆಚ್ಚಳವಾಗಿದ್ದರೂ ಮರಣ ದರ ಕಡಿಮೆ ಇದೆ ಎಂಬ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಬಿಬಿಎಂಪಿ. ಪಾಸಿಟಿವ್ ಬಂದು ಹೋಮ್ ಐಸೋಲೇಷನ್ ಆಗುವ ಜನರ ಕ್ವಾರಂಟೈನ್ ಅವಧಿ ಕಡಿತಗೊಳಿಸುವುದರ ಜೊತೆಗೆ ಸೋಂಕಿತರಿಗೆ ನೀಡಲಾಗುತ್ತಿದ್ದ ಐವರ್ ಮೆಕ್ಟಿನ್ ಎಂಬ ಆ್ಯಂಟಿ ಬಯಾಟಿಕ್ ಔಷಧಿಯನ್ನು ಸೋಂಕಿತರಿಗೆ ನೀಡದಂತೆ ಸೂಚಿಸಿದೆ.
ಸೋಂಕಿತರಿಗೆ ಐವರ್ ಮೆಕ್ಟಿನ್ ಬಳಸದಂತೆ ಬಿಬಿಎಂಪಿ ಸೂಚನೆ
ಕರೋನಾ ಮೂರನೇ ಅಲೆಯ ಟ್ರೀಟ್ಮೆಂಟ್ನಿಂದ ಸೀವಿಯರ್ ಆ್ಯಂಟಿ ಬಯಾಟಿಕ್ ಮಾತ್ರೆಯೊಂದಕ್ಕೆ ಗೇಟ್ ಪಾಸ್ ನೀಡಲಾಗಿದೆ. ಹೈ ಪಿವರ್ ಐವರ್ ಮೆಕ್ಟಿನ್ ಔಷಧಿಯನ್ನು ಸೋಂಕಿತರಿಗೆ ನೀಡಲಾಗುತ್ತಿರಯವ ಔಷಧಿಗಳ ಪಟ್ಟಿಯಿಂದ ಪಾಲಿಕೆ ಕೈ ಬಿಟ್ಟಿದೆ. ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳವಾಗಿದ್ದರೂ ತೀವ್ರತೆ ಕಡಿಮೆ ಇದೆ. ಹೀಗಾಗಿ ಮೈಲ್ಡ್ ರೋಗ ಲಕ್ಷಣ ಹಿನ್ನಲೆ, ಆ್ಯಂಟಿ ಬಯಾಟಿಕ್ ಔಷಧಿಯಾಗಿರುವ ಐವರ್ ಮೆಕ್ಟಿನ್ ಗೆ ಗೇಟ್ ಪಾಸ್ ನೀಡಲಾಗಿದೆ. ಇದರ ಬದಲಿಗೆ ಸಾಮಾನ್ಯ ಪ್ರಮಾಣದ ಮಾತ್ರೆಗಳನ್ನು ನೀಡಲು ಸೂಚಿಸಲಾಗಿದೆ. ಎರಡನೇ ಅಲೆಯಲ್ಲಿ ಐವರ್ ಮೆಕ್ಟಿನ್ ಬಳಕೆ ತೀವ್ರ ಪ್ರಮಾಣದಲ್ಲಿ ಆಗಿದ್ದರಿಂದ ಬ್ಲಾಕ್ ಫಂಗಸ್ ಕೇಸ್ ಹೆಚ್ಚಾಗಿತ್ತು. ಈ ಬಾರಿ ರೋಗ ಲಕ್ಷಣ ಕ್ಷೀಣವಾಗಿರುವ ಜೊತೆಗೆ ವ್ಯಾಕ್ಸಿನೇಷನ್ ಕೂಡ ಆಗಿರುವುದರಿಂದ ಐವರ್ ಮೆಕ್ಟಿನ್ ಔಷಧಿ ಕೊರೋನಾ ಟ್ರೀಟ್ಮೆಂಟ್ ಪಟ್ಟಿಯಿಂದ ಪಾಲಿಕೆ ದೂರ ಇಟ್ಟಿದೆ.

ಹೋಮ್ ಐಸೋಲೇಷನ್ ಅವಧಿಯಲ್ಲಿ 3 ದಿನ ಕಡಿತ
ಕರೋನಾ ಸೋಂಕು ಹೆಚ್ಚಳವಾಗುತ್ತಿದ್ದರೂ, ಹೋಮ್ ಐಸೋಲೇಷನ್ ನಲ್ಲೇ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದಾರೆ. ಈ ಹಿನ್ನೆಲೆ ಹೋಮ್ ಐಸೋಲೇಷನ್ ಅವಧಿಯನ್ನು ಪಾಲಿಕೆ ಕಟ್ ಆಫ್ ಮಾಡಿದೆ. ಈ ಮೋದಲು ಸೋಂಕಿತರು ಹತ್ತು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಬೇಕಿತ್ತು. ಆದರೆ ಈಗ ಹತ್ತು ದಿನಗಳಿಂದ 7 ದಿನಗಳಿಗೆ ಹೋಮ್ ಐಸೋಲೇಷನ್ ಅವಧಿ ಕಡಿತ ಮಾಡಲಾಗಿದೆ. ಸೋಂಕು ತಗುಲಿ ಏಳನೇ ದಿನಕ್ಕೆ ಸೋಂಕಿತರು ಐಸೋಲೇಷನ್ ಕ್ವಿಟ್ ಮಾಡಬಹುದು. ಅದಾಗಿಯೂ ಏಳನೇ ದಿನಕ್ಕೆ ಸೋಂಕಿತರು ಮತ್ತೆ ಕರೋನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಏಳನೇ ದಿನಕ್ಕೆ ಕೊರೋನಾ ಪರೀಕ್ಷೆ ಮಾಡಿಸದಯೇ ಹೋಮ್ ಕ್ವಾರಂಟೈನ್ ಕ್ವಿಟ್ ಮಾಡಬಹುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಮೂರನೇ ಅಲೆ ಎರಡನೇ ಅಲೆಯಂತೆ ಭೀಕರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸೋಂಕು ಹೆಚ್ಚಳವಾಗಿರುವ ಹೊತ್ತಲ್ಲೇ ಬಿಬಿಎಂಪಿ ಇಂಥಾ ಮಹತ್ವದ ಹೆಜ್ಜೆಗಳನ್ನು ಇಟ್ಟು ಸೋಂಕು ತಡೆಯುವ ಕಡೆಗೆ ಗಮನ ಹರಿಸುತ್ತಿದೆ. ಇದು ಜನರಿಗೆ ಬಹಳ ಅನುಕೂಲವಾಗಲಿದೆ.