• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪೇ & ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ : ವಾರ್ಷಿಕ 300 ಕೋಟಿ ಆದಾಯ ನಿರೀಕ್ಷೆ

ಕರ್ಣ by ಕರ್ಣ
August 30, 2022
in ಕರ್ನಾಟಕ
0
ಪೇ & ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ : ವಾರ್ಷಿಕ 300 ಕೋಟಿ ಆದಾಯ ನಿರೀಕ್ಷೆ
Share on WhatsAppShare on FacebookShare on Telegram

ಇತ್ತೀಚೆಗಷ್ಟೇ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಪೇ & ಪಾರ್ಕಿಂಗ್ ನೀತಿ ಜಾರಿ ಮಾಡುವ ಬಗ್ಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ಇದೀಗ ಇದಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಪೇ & ಪಾರ್ಕಿಂಗ್ 2020 ನೀತಿ ಜಾರಿಯಾಗಲಿದೆ. ಈ ಮೂಲಕ ಬಿಬಿಎಂಪಿ ವಾರ್ಷಿಕವಾಗಿ 300 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ.

ADVERTISEMENT

2020 ಪೇ & ಪಾರ್ಕಿಂಗ್ ನೀತಿ ಜಾರಿಗೆ ಸರ್ಕಾರ ಒಪ್ಪಿಗೆ 

ಮಹಾನಗರ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ‌ ಮಿತಿ ಮೀರುತ್ತಿದ್ದು, ಇದಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಸರ್ಕಾರ ಪೇ & ಪಾರ್ಕಿಂಗ್ ನೀತಿಯನ್ನು ಜಾರಿಗೊಳಿಸಲು ಅನುಮೋದನೆ ನೀಡಿದೆ. 2020ರಲ್ಲಿ ಪೇ & ಪಾರ್ಕಿಂಗ್ ನೀತಿಯನ್ನು ರೂಪುಗೊಳಿಸಿದ್ದು, ಹಲವು ಬಾರಿ ಜಾರಿಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದರೀಗ ಬೆಳೆಯುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಈಗ ಅಂತಿಮವಾಗಿ ನೀತಿಯನ್ನು ಜಾರಿಗೆ ತೆರಲಾಗಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಸಿದ್ಧಪಡಿಸಿದ್ದ ಪಾರ್ಕಿಂಗ್ ಪಾಲಿಸಿ 2.0ಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಇನ್ನುಮುಂದೆ ರಸ್ತೆಗಳಲ್ಲಿ ನಿಲ್ಲಿಸುವ ಎಲ್ಲ ವಾಹನಗಳಿಗೆ ಹಣಪಾವತಿ ಮಾಡಬೇಕಾಗುತ್ತದೆ. ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಮತ್ತು ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ನೀತಿ ಜಾರಿಗೆ ತರಲಾಗುತ್ತಿದೆ. 2020ರಲ್ಲೇ ಬಿಬಿಎಂಪಿ ವ್ಯಾಪ್ತಿಗೆ ಒಳಗೊಂಡಂತೆ ಹೊಸ ಪಾರ್ಕಿಂಗ್ ಪಾಲಿಸಿ ಜಾರಿಗೊಳಿಸಲು ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿತ್ತು. ಆದರೀಗ ಎಲ್ಲಾ ಹಂತಗಳು ದಾಟಿ ನೀತಿ ಜಾರಿಯಾಗಿದೆ. ಡಲ್ಟ್ ಮಾಹಿತಿ ಪ್ರಕಾರ 2020ರಲ್ಲಿ ನಗರದಲ್ಲಿ 75 ಲಕ್ಷಕ್ಕೂ ಅಧಿಕ ವಾಹನಗಳಿವೆ. ವಾರ್ಷಿಕ 10 ಲಕ್ಷ ವಾಹನಗಳ ಸರಾಸರಿ ಹೆಚ್ಚಳವನ್ನು ನಿರೀಕ್ಷಿಸಲಾಗಿದ್ದು, ಪ್ರಸ್ತುತ 1 ಕೋಟಿ ವಾಹನಗಳು ಇರುವುದಾಗಿ ಅಂದಾಜಿಸಲಾಗಿದೆ. ಈ ಪೈಕಿ ಶೇ.90ಕ್ಕೂ ಅಧಿಕ ವಾಹನಗಳು ಖಾಸಗಿ ವಾಹನಗಳಾಗಿದ್ದು, ಬಹುತೇಕರು ತಮ್ಮ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳವನ್ನು ಹೊಂದಿಲ್ಲ. ಆದ್ದರಿಂದ ಎಲ್ಲಾ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಾರು, ಬೈಕ್, ಆಟೋ, ಮಿನಿ ಬಸ್‌ಗಳು, ಟೆಂಪೋ ಟ್ರಾವೆಲರ್, ಗೂಡ್ಸ್ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಈ ವಾಹನಗಳ ನಿಲುಗಡೆಗೆ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಹೊಸ ಪಾರ್ಕಿಂಗ್ ಪಾಲಿಸಿ ಜಾರಿಗೊಳಿಸಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪೇ & ಪಾರ್ಕಿಂಗ್ 2020 ನೀತಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಾರುಕಟ್ಟೆ ಪ್ರದೇಶ, ರಸ್ತೆಯ ಮಾದರಿ ಸೇರಿ ವಿವಿಧೆಡೆ ಪಾರ್ಕಿಂಗ್‌ಗೆ ಬಗೆಬಗೆಯ ದರವಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಈ ಯೋಜನೆ ಅಡಿಯಲ್ಲೇ 85 ಸ್ಮಾರ್ಟ್ ಪಾರ್ಕಿಂಗ್ ಸ್ಥಳಗಳು ಒಳಗೊಳ್ಳಲಿವೆ. ಇದು ನಗರದ ಟ್ರಾಫಿಕ್ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು. ಇನ್ನುಮುಂದೆ ಪ್ರತ್ಯೇಕ ವಾಹನ ನಿಲುಗಡೆ ಸ್ಥಳ ಇಲ್ಲದವರು ವಾಹನ ಖರೀದಿಗೆ ಹಿಂದೇಟು ಹಾಕಲಿದ್ದಾರೆ. ಜತೆಗೆ, ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಪ್ರಯಾಣಿಕರ ವೇದಿಕೆ ಅಧ್ಯಕ್ಷ ವಿನಯ್ ಶ್ರೀನಿವಾಸ್, ಈ ನೀತಿ ಜಾರಿಗೊಳಿಸುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಲಾಭದ ಹಾದಿಗೆ ತರಬಹುದಾಗಿದೆ. ಒಂದೇ‌ ಮನೆಯಲ್ಲಿ ಬೇಕಾಬಿಟ್ಟಿ ಐದಾರು ಕಾರುಗಳು ಖರೀದಿ ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ತಡೆ ನೀಡಿದಂತಾಗಿದೆ‌ ಎಂದರು.

ಪೇ & ಪಾರ್ಕಿಂಗ್ ನೀತಿಯಿಂದ ವಾರ್ಷಿಕ 300 ಕೋಟಿ ರೂ. ಆದಾಯ

ಈ ಹೊಸ ನೀತಿಯಿಂದ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಒಟ್ಟು 13 ಸಾವಿರ ಎಕರೆಗೂ ಅಧಿಕ ಭೂಮಿ ಆರ್ಥಿಕ ಲಾಭವಿಲ್ಲದೇ ಬಳಕೆಯಾಗುತ್ತಿತ್ತು ಅದಕ್ಕೆ ಕಡಿವಾಣ ಹಾಕಿದಂತೆ ಆಗಲಿದೆ. ಈ ಮೂಲಕ ವಾಹನಗಳಿಗೆ ಶುಲ್ಕ ವಿಧಿಸುವ ನಿಯಮ ಜಾರಿಗೊಳಿಸಿದರೆ ವಾರ್ಷಿಕ 300 ಕೋಟಿ ರೂ. ಆದಾಯ ಬರಲಿದೆ. ಹೀಗಾಗಿ, ಸಾರ್ವಜನಿಕ ಸ್ಥಳ ಅಥವಾ ಬೀದಿಗಳಲ್ಲಿ ಕಾರು ನಿಲುಗಡೆ ಮಾಡುವವರಿಗೆ ವಾರ್ಷಿಕ 1 ಸಾವಿರ ರೂ.ಗಳಿಂದ 5 ಸಾವಿರ ರೂ.ವರೆಗೆ ಶುಲ್ಕ ವಿಧಿಸಲು ಚಿಂತಿಸಲಾಗಿದೆ. ಈ ನೀತಿಯ ಮೂಲಕ, ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಯೋಜನೆ, ಉಚಿತ ಪಾರ್ಕಿಂಗ್‌ನಿಂದ ಪಾವತಿಸುವ ಪಾರ್ಕಿಂಗ್, ಸರ್ಕಾರಿ ಪಾರ್ಕಿಂಗ್ ಸ್ಥಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು, ಪಾರ್ಕಿಂಗ್ ನಿರ್ವಹಣೆ ಮತ್ತು ಹಣ ಪಾವತಿಗೆ ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಅಭಿವೃದ್ಧಿ ಆಗಲಿದೆ.

ಪೇ & ಪಾರ್ಕಿಂಗ್ ಪಾಲಿಸಿ ಜಾರಿಗೆ ಕಾರಣವೇನು.!?

ಹೆಚ್ಚು ಕಮ್ಮಿ ಒಂದು ಕೋಟಿ ವಾಹನಗಳು ಬೆಂಗಳೂರಲ್ಲಿದೆ. ಪ್ರತಿ ವರ್ಷ 10% ವಾಹನಗಳು ಹೊಸದಾಗಿ ಸೇರ್ಪಡೆಯಾಗುತ್ತಿದೆ. ಸರಾಸರಿ ಗಂಟೆಗೆ 15km ಟ್ರಾಫಿಕ್ ಇದೆ. ಘನ ವಾಹನಗಳದ್ದು ಗಂಟೆಗೆ ಸರಾಸರಿ 10km ಟ್ರಾಫಿಕ್ ಆಗುತ್ತಿದೆ. 2031ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಾಹನಗಳ ದಟ್ಟಣೆ ಹಾಗೂ ಸುವ್ಯವಸ್ಥಿತ ಪಾರ್ಕಿಂಗ್ ಗುರಿ ಹೊಂದಲಾಗಿದೆ. ನಗರದ 11 ಪ್ರಮುಖ ರಸ್ತೆಗಲ್ಲಿ ಈಗಾಗಲೇ ಪೇ ಅ್ಯಂಡ್ ಪಾರ್ಕಿಂಗ್ ಇದೆ. ಹೊಸದಾಗಿ 85 ರಸ್ತೆಗಳನ್ನು ಪೇ ಆ್ಯಂಡ್ ಪಾರ್ಕಿಂಗ್ ಗೆ ಗುರುತು ಮಾಡಲಾಗಿದೆ. ಹೀಗಾಗಿ ಸುವ್ಯವಸ್ಥಿತ ಪಾರ್ಕಿಂಗ್ ಪಾಲಿಸಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಬಿಬಿಎಂಪಿ, DULT, ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಯೋಗದಲ್ಲಿ ಹೊಸ ಪಾಲಿಸಿ ಜಾರಿಯಾಗಿದೆ. 

ಪೇ & ಪಾರ್ಕಿಂಗ್ ದರ ನಿಗದಿ ಹೇಗೆ.!?

ಸಣ್ಣ ಕಾರುಗಳಿಗೆ ವರ್ಷಕ್ಕೆ ₹ 1000, ಮಧ್ಯಮ ಗಾತ್ರ ಕಾರುಗಳಿಗೆ ವರ್ಷಕ್ಕೆ ₹3000 – ₹4000, MUV, SUV ಕಾರುಗಳಿಗೆ ವರ್ಷಕ್ಕೆ ₹5000, ಸ್ಥಳಕ್ಕೆ ತಕ್ಕಂತೆ ಪಾರ್ಕಿಂಗ್ ದರ ಬದಲಾವಣೆ ಆಗಲಿದೆ. P&P ಮೀಸಲು ಜಾಗದ ನಿಲುಗಡೆಗೆ ₹25 ರೂಪಾಯಿಯಿಂದ‌ ₹75 ವರೆಗೆ ದರ ನಿಗದಿ ಮಾಡಲಾಗಿದೆ. ಸ್ಥಳ/ಏರಿಯಾಗೆ ಅನುಗುಣವಾಗಿ ಗಂಟೆಗೆ ಮೇಲಿನ ದರ ನಿಗದಿಯಾಗಿದೆ. ಕೊನೆಗೂ ಕಳೆದ ಎರಡು ವರ್ಷಗಳಿಂದ ಭಾರಿ ಚರ್ಚೆಗೆ ಕಾರಣವಾಗಿದ್ದ ಪೇ & ಪಾರ್ಕಿಂಗ್ ಪಾಲಿಸಿ ಈಗ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಕೆಲವೇ ದಿನಗಳಲ್ಲಿ ನೀತಿ ಜಾರಿಯಾಗಲಿದ್ದು, ಜನರು ಇನ್ಮುಂದೆ ಬೇಕಾಬಿಟ್ಟಿ ವಾಹನಗಳ ಖರೀದಿ ಮಾಡುವುದು ಹಾಗೂ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ತಡೆ ಬೀಳಲಿದೆ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ತಾಲಿಬಾನ್ ಆಳ್ವಿಕೆಗೆ ವರ್ಷ: ಅಫ್ಘಾನಿಸ್ತಾನದಲ್ಲಿ ಸೆಕೆಂಡರಿ ಸ್ಕೂಲ್‌ಗಳಿಗೂ ಹೆಣ್ಣುಮಕ್ಕಳಿಗೆ ಅನುಮತಿ‌ ಇಲ್ಲ 

Next Post

ಕರೋನಾ ಹೆಚ್ಚಳ : ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ!

Related Posts

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
0

ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ  ಎದ್ದು ಕಾಣುವ ಕಲಾವಿದ ನಾ ದಿವಾಕರ “ ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ...

Read moreDetails
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

December 18, 2025
Next Post
Covid-19 | ಕಡ್ಡಾಯಾಗಿ ಮಾಸ್ಕ್‌ ಧರಿಸಬೇಕು, ಉಲ್ಲಂಘಿಸಿದರೆ ದಂಡ : ಕೇರಳ ಸರ್ಕಾರ ಆದೇಶ

ಕರೋನಾ ಹೆಚ್ಚಳ : ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ!

Please login to join discussion

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada