ರಾಜ್ಯದಲ್ಲಿ ಕರೋನ ಸೋಂಕು ಮತ್ತೆ ಹೆಚ್ಚಳ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶವನ್ನು ಹೊರಡಿಸಿದೆ.
ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಲಾಡ್ಜ್,, ಹೋಟೆಲ್, ಕ್ಲಬ್, ರೆಸ್ಟೋರೆಂಟ್, ಪಬ್, ಛತ್ರಗಳು, ಸಿನಿಮಾ ಹಾಲ್, ವಿದ್ಯಾಸಂಸ್ಥೆಗಳು, ಸಾರ್ವಾಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್, ಮೆಟ್ರೋ, ಟ್ರೈನ್, ಶಾಪಿಂಗ್ ಮಾಲ್ಗಳಲ್ಲಿ ಸೇರಿದಂತೆ ಮಾರುಕಟ್ಟೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಅಂತ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ನಿರ್ದೇಶಗಳಲ್ಲಿ ಉಲ್ಲೇಖ ಮಾಡಿದೆ.
ರಾಜ್ಯದಲ್ಲಿ 659 ಹೊಸ ಪ್ರಕರಣಗಳು ದಾಖಲಾದರೆ. ಬೆಂಗಳೂರು ನಗರ ಒಂದರಲ್ಲೇ 450 ಹೊಸ ಪ್ರಕರಣಗಳು ದಾಖಲಾಗಿದೆ. ಎರಡು ಸಾವುಗಳು ವರದಿಯಾಗಿದೆ.