• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನ ಹೊರ ವಲಯದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ ಇಳಿದ ಬಿಬಿಎಂಪಿ : 118 ಕೋಟಿ ಬಜೆಟ್!

Any Mind by Any Mind
June 29, 2022
in ಕರ್ನಾಟಕ
0
ಬೆಂಗಳೂರಿನ ಹೊರ ವಲಯದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ ಇಳಿದ ಬಿಬಿಎಂಪಿ : 118 ಕೋಟಿ ಬಜೆಟ್!
Share on WhatsAppShare on FacebookShare on Telegram

ಕೊನೆಗೂ ಬಿಬಿಎಂಪಿಯ ಹೊರ ವಲಯಗಳಿಗೆ ಶಾಲೆ ಕಾಲೇಜು ಭಾಗ್ಯ ಸಿಕ್ಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಬರೋಬ್ಬರಿ 118 ಕೋಟಿ ಅನುದಾನದಲ್ಲಿ ಪಾಲಿಕೆಯ 110 ಹಳ್ಳಿಗಳಿಗೆ ಅನುಕೂಲವಾಗುವಂತೆ ಹೊಸ ಶಾಲೆ ಕಾಲೇಜುಗಳು ನಿರ್ಮಾಣವಾಗಲಿದೆ.

ADVERTISEMENT

ಅಭಿವೃದ್ಧಿ ಪಥದಲ್ಲಿರುವ ರಾಜಧಾನಿಗೆ ಹೊಸ ಶಾಲಾ ಕಾಲೇಜುಗಳ ನಿರ್ಮಾಣ!

ದಿನದಿಂದ ದಿನಕ್ಕೆ ರಾಜಧಾನಿ ಬೆಂಗಳೂರು ಅಭಿವೃದ್ಧಿ ಕಾಣುತ್ತಿದೆ. ಹೀಗಾಗಿ ನಗರದ ಸಾಕ್ಷರತೆ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಶಾಲೆ ಕಾಲೇಜುಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಸದ್ಯ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಮಾತ್ರ ಪಾಲಿಕೆ‌ ಅಧೀನದ ಶಿಕ್ಷಣ ಸಂಸ್ಥೆಗಳಿವೆ. ಬಿಬಿಎಂಪಿ ಹೊರವಲಯದ ವಲಯಗಳಲ್ಲಿ ಈವರೆಗೆ ಪಾಲಿಕೆಗೆ ಶಾಲಾ, ಕಾಲೇಜು ನಿರ್ಮಾಣ ಸಾಧ್ಯ ಆಗಿರಲಿಲ್ಲ. ಇದೀಗ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಬಿಎಂಪಿ ಹೊಸ ಶಾಲೆ ಕಾಲೇಜುಗಳ ನಿರ್ಮಾಣ ಮಾಡಲಿದೆ.

118 ಕೋಟಿಯಲ್ಲಿ ಏಳು ಶಾಲೆ-ಕಾಲೇಜುಗಳ ನಿರ್ಮಾಣ!

ಹೊಸ ಶಾಲೆ, ಕಾಲೇಜುಗಳ ನಿರ್ಮಾಣ ಹಾಗೂ ಶಾಲೆ ಅಭಿವೃದ್ಧಿ ಪಡಿಸಲು 118 ಕೋಟಿ ಅನುದಾನ ಸರ್ಕಾರ ನೀಡಿದೆ. ಈ ಮೂಲಕ 110 ಹಳ್ಳಿಗಳಲ್ಲೂ ಶಾಲಾ ಕಾಲೇಜು ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. 118 ಕೋಟಿ ಪೈಕಿ 77 ಕೋಟಿಯಲ್ಲಿ 7 ಹೊಸ ಶಾಲೆ ಕಾಲೇಜುಗಳ ನಿರ್ಮಾಣ ಹಾಗೂ ಉಳಿದಂತೆ 33 ಕೋಟಿ ರೂಪಾಯಿಲ್ಲಿ ಪಾಲಿಕೆ ಶಾಲೆ ಕಾಲೇಜುಗಳ ಉನ್ನತೀಕರಣಕ್ಕೆ ಮೀಸಲಿಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಮಾತ್ರ ಪಾಲಿಕೆಗೆ ಶಾಲೆ ಕಾಲೇಜುಗಳಿವೆ. ಬಿಬಿಎಂಪಿಯ ಈ ಮೂರು ಕೇಂದ್ರ ವಲಯದಲ್ಲಿ ಒಟ್ಟು 160 ಶಾಲಾ ಕಾಲೇಜುಗಳಿವೆ. ಆದರೆ ಹೊಸದಾಗಿ ಸೇರ್ಪಡೆಗೊಂಡ‌ 110 ಹಳ್ಳಿಗಳನ್ನು ಒಳಗೊಂಡ ಮಹಾದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿಯ ವಲಯದಲ್ಲಿ ಪಾಲಿಕೆಗೆ ಶಿಕ್ಷಣ ಕೇಂದ್ರಗಳಿಲ್ಲ. ಹೀಗಾಗಿ ಈ 110 ಹಳ್ಳಿಗಳಿಗೆ ಶಾಲಾ‌ ಕಾಲೇಜು ನಿರ್ಮಾಣ ಮಾಡುವ ತುರ್ತು ಅಗತ್ಯವಿತ್ತು ಅಂತ ಬಿಬಿಎಂಪಿ ಶಿಕ್ಷಣ ವಿಭಾಗದ ಉಪ ಆಯುಕ್ತ ಉಮೇಶ್ ತಿಳಿಸಿದ್ದಾರೆ.

ಹೊಸ ಶಾಲೆ-ಕಾಲೇಜುಗಳ ನಿರ್ಮಾಣಕ್ಕೆ ಕಳೆದ ಡಿಸೆಂಬರ್ ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ!

110 ಹಳ್ಳಿಗಳನ್ನು ಒಳಗೊಂಡಿರುವ ಹೊರ ವಲಯಗಳಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಾಣ ಮಾಡುವಂತೆ ಕಳೆದ ಡಿಸೆಂಬರ್ ನಲ್ಲೇ ಪಾಲಿಕೆ ಪ್ರಸ್ತಾವನೆ ಸಲ್ಲಸಿತ್ತು. ಈಗ ಅದಕ್ಕೆ ಸರ್ಕಾರ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಸ್ತು ಅಂದಿದ್ದು, ಒಂದೇ ಕಡೆ ನರ್ಸರಿಯಿಂದ ಪದವಿ ಪೂರ್ವ ಶಿಕ್ಷಣ ಲಭಿಸುವಂತೆ ಶಾಲೆ ಕಾಲೇಜು ನಿರ್ಮಾಣದ ಲೆಕ್ಕಾಚಾರದಲ್ಲಿದೆ ಬಿಬಿಎಂಪಿ.

ಎಲ್ಲೆಲ್ಲಿ ಹೊಸ ಬಿಬಿಎಂಪಿ ಶಾಲೆ-ಕಾಲೇಜು?

ಶೆಟ್ಟಿಹಳ್ಳಿಯಲ್ಲಿ 9.60 ಕೋಟಿ ವೆಚ್ಚದಲ್ಲಿ, ಅರಕೆರೆಯಲ್ಲಿ 7.60 ಕೋಟಿಯಲ್ಲಿ, ವಿಜ್ಞಾನಪುರಯಲ್ಲಿ 7.60 ಕೋಟಿಯಲ್ಲಿ, ರಘುನಹಳ್ಳಿಯಲ್ಲಿ 7.60 ಕೋಟಿ, ಲಗ್ಗೆರೆಯಲ್ಲಿ 7.60 ಕೋಟಿ, ಕೆಂಗೇರಿಯಲ್ಲಿ (ಉಲ್ಲಾಳ) 7.60 ಕೋಟಿ ಹಾಗೂ ಥಣಿಸಂಧ್ರ, ಅಗ್ರಹಾರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್ ನಲ್ಲಿ 29.40 ಕೋಟಿ ವೆಚ್ಚದಲ್ಲಿ ಒಂದೇ ಕ್ಯಾಂಪಸ್ ನಲ್ಲಿ‌ ನರ್ಸರಿಯಿಂದ ಪದವಿ ಪೂರ್ವ ಶಿಕ್ಷಣದ ವರೆಗೆ ಬಿಬಿಎಂಪಿ ಶಿಕ್ಷಣ ಸಂಸ್ಥೆ ತೆರಯಲಿದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿಬಿಬಿಎಂಪಿ
Previous Post

2ನೇ ಟಿ-20: ಹೂಡಾ ಚೊಚ್ಚಲ ಶತಕ, ಭಾರತಕ್ಕೆ 4 ರನ್ ರೋಚಕ ಜಯ

Next Post

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

'ಬುಲ್ಲಿ ಬಾಯ್' ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada