• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

Any Mind by Any Mind
June 29, 2022
in ದೇಶ
0
‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?
Share on WhatsAppShare on FacebookShare on Telegram

ADVERTISEMENT

ಕಳೆದ ವರ್ಷ ‘ಬುಲ್ಲಿ ಬಾಯಿ’ ಅಪ್ಲಿಕೇಶನ್‌ನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮದಲ್ಲಿ‌ ದೊಡ್ಡ ಬಿರುಗಾಳಿ ಸೃಷ್ಟಿಯಾಗಿತ್ತು. ದೂರುಗಳು ದಾಖಲಾದಂತೆ ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ ‘ಹರಾಜು’ ಸೈಟ್ ಅನ್ನು ತೆಗೆದುಹಾಕಲಾಯಿತು ಮತ್ತು ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಲಾಯಿತು. ತಕ್ಷಣವೇ GitHub ಕಾನೂನಾತ್ಮಕ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಹಕರಿಸಲಾಗುವುದು ಎಂಬ ಭರವಸೆ ನೀಡಿತ್ತು. ಇದೀಗ ‘ಬುಲ್ಲಿ ಬಾಯಿ’ ಆ್ಯಪ್‌ನ ಸೃಷ್ಟಿಕರ್ತ ನೀರಜ್ ಬಿಷ್ಣೋಯ್ ಮತ್ತು ಇಬ್ಬರು ಸಹ ಆರೋಪಿಗಳಿಗೆ ಜಾಮೀನು ನೀಡುವುದರೊಂದಿಗೆ, ಪ್ರಕರಣದ ಎಲ್ಲಾ ಆರು ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣವು ನ್ಯಾಯಾಲಯಗಳ ಮುಂದಿರುವಾಗ ಮತ್ತು ಆ ಆ್ಯಪ್‌ನ ಅಸಹಜ ಅಂಶಗಳು, ಅದರ ಸೃಷ್ಟಿಕರ್ತರು ಮತ್ತು ಅದರ ಉದ್ದೇಶ ಸಾರ್ವಜನಿಕ ನೆನಪಿನಿಂದ ಮರೆಯಾಗುತ್ತಿರುವ ಈ ಹೊತ್ತಲ್ಲಿ ಆರೋಪಿಗಳಿಗೆ ಸಿಕ್ಕಿರುವ ಜಾಮೀನು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯಗೊಳಿಸುವಲ್ಲಿ ಇಂತಹ ಅಪ್ಲಿಕೇಶನ್‌ಗಳ ಪಾತ್ರವನ್ನು ಮತ್ತೊಮ್ಮೆ ನಮಗೆ ನೆನಪಿಸುತ್ತವೆ.

ಜಗತ್ತಿನಲ್ಲಿ ನಡೆದ ಹಲವಾರು ಸಂಶೋಧನೆಗಳು‌ ಈಗಾಗಲೇ ಮತ್ತು ಆನ್‌ಲೈನ್ ದುರ್ಬಳಕೆಯು ನಿರಂತರ ಏರುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿವೆ. ಟ್ರೋಲಿಂಗ್‌ನಂತಹ (ಹಿಂಬಾಲಿಸುವುದು, ಡಾಕ್ಸಿಂಗ್, ಸೆಕ್ಸ್ಟಿಂಗ್ ಮತ್ತು ಸೈಬರ್‌ಬುಲ್ಲಿಯಿಂಗ್) ಎಲ್ಲಾ ರೀತಿಯ ಸಾಂಕೇತಿಕ ಹಿಂಸಾಚಾರಗಳು ಮುಖ್ಯವಾಗಿ ಮಹಿಳೆಯರು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಸಿಕೊಂಡು ಕಿರುಕುಳ, ಪ್ರಾಬಲ್ಯ ಮತ್ತು ಸಾಂಕೇತಿಕ ನಿಯಂತ್ರಣವನ್ನು ಘೋಷಿಸುವ ಒಂದು ಮಾರ್ಗವಾಗಿದೆ. ಇದನ್ನು ತಡೆಯಬೇಕಾದ ಹೊಣೆ ಮತ್ತು ಕರ್ತವ್ಯ ಆಯಾಯ ದೇಶಗಳ ಸರ್ಕಾರದ್ದಾಗಿದೆ.

ಆದರೆ ಸರ್ಕಾರಗಳ ಮತ್ತು‌ ಕಾನೂನು ಜಾರಿ ಮಾಡಬೇಕಾದ ಆಡಳಿತ ಯಂತ್ರಗಳ ನಿರುತ್ಸಾಹ, ತಡವಾದ ಪ್ರತಿಕ್ರಿಯೆ, ದಂಡ ವಿಧಿಸುವಲ್ಲಿನ‌ ವಿಫಲತೆ ಅಂತಹ ಅಪರಾಧಗಳ ಗಂಭೀರ ಸ್ವರೂಪವನ್ನು ಮರೆಮಾಚುತ್ತದೆ. ಮತ್ತು ಕಿರುಕುಳ ಅನುಭವಿಸಿದವರ ಮೇಲೆಯೇ ಅದನ್ನು ತಡೆಯುವ ಹೊಣೆಗಾರಿಕೆಯನ್ನು ವಹಿಸಿ ತಮ್ಮ‌ ಕರ್ತವ್ಯಗಳಿಂದ ಜಾರಿ ಕೊಳ್ಳುತ್ತವೆ.

ಭಾರತದಲ್ಲಿ, ಟ್ರೋಲಿಂಗ್ ಅನ್ನು ಸಾರ್ವಜನಿಕ ಜೀವನದಲ್ಲಿರುವ ಅನೇಕ ವ್ಯಕ್ತಿಗಳು ಅನುಭವಿಸುತ್ತಿದ್ದರೂ ಅತ್ಯಾಚಾರ, ಕೊಲೆ ಬೆದರಿಕೆಗಳು ಮತ್ತು ವೈಯಕ್ತಿಕ ಮಾಹಿತಿಯ ಹಂಚಿಕೆ (ಡಾಕ್ಸಿಂಗ್) ಗಳಂತಹ ದೌರ್ಜನ್ಯಗಳು ಸಾರ್ವಜನಿಕ ವಲಯದಲ್ಲಿರುವ ಮಹಿಳೆಯರ ಮೇಲೆಯೇ ಹೆಚ್ಚು‌ ಕೇಂದ್ರೀಕರಿಸುತ್ತದೆ. ಮಹಿಳಾ ಪತ್ರಕರ್ತರು, ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಕೆಲವು ಸಾರ್ವಜನಿಕ ಸಭೆಗಳಲ್ಲಿ ನಿರ್ಭಿಡೆಯಿಂದ ಮಾತನಾಡುವವರನ್ನು ಹೆಚ್ಚು ಗುರಿಯಾಗಿಸಲಾಗುತ್ತಿದೆ.
ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಆನ್‌ಲೈನ್ ಫೋರಮ್‌ಗಳಲ್ಲಿ ಖಾಸಗಿ ಸಂದೇಶಗಳು, ಟ್ರೋಲಿಂಗ್, ಡಾಕ್ಸಿಂಗ್ ಮತ್ತು ಸೆಕ್ಸ್‌ಟಿಂಗ್ ಥ್ರೆಡ್‌ಗಳ ಮೂಲಕ ಸಾವು ಮತ್ತು ಅತ್ಯಾಚಾರ ಬೆದರಿಕೆಗಳನ್ನು ಎದುರಿಸುವ ಇಂತಹ ಮಹಿಳೆಯರು ನಿಯಮಿತವಾಗಿ ಸಾಂಕೇತಿಕ ಹಿಂಸಾಚಾರಕ್ಕೆ ಒಳಗಾಗುತ್ತಾರೆ.

ಸಾಮಾಜಿಕ ಮಾಧ್ಯಮದ ಬಳಕೆಯ ಧನಾತ್ಮಕ ವಿಷಯಗಳ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳುವ ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ಹೊಂದಿರುವ ಮತ್ತು ನಿರ್ವಹಿಸುವ ಖಾಸಗಿ ಸಂಸ್ಥೆಗಳು ಇಂತಹ ನಡವಳಿಕೆಯನ್ನು ನಿಗ್ರಹಿಸುವಲ್ಲಿ ಅಷ್ಟೇ ಉತ್ಸಾಹ ತೋರುವುದಿಲ್ಲ. ಕಾನೂನು ಜಾರಿ ಪ್ರತಿಕ್ರಿಯೆಗಳು ಇಂತಹ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತವೆ, ಆದರೆ ಅಪರಾಧಿಗಳನ್ನು ಹಿಡಿಯಲು ಮತ್ತು ಶಿಕ್ಷಿಸಲು ಮತ್ತು ಈ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಲು ಸಮಯ ತೆಗೆದುಕೊಳ್ಳುತ್ತದೆ.

ಇಂತಹ ಪ್ರಕರಣಗು ಬೆಳಕಿಗೆ ಬಂದಾಗ ಒಮ್ಮೆ ಸಾರ್ವಜನಿಕರು ಇದನ್ನು ಉಗ್ರವಾಗಿ ಖಂಡಿಸಿದರೂ ಕಾಲ ಕಳೆದಂತೆ ಇಂತಹ ಟ್ರೋಲ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಕಾಲಿಟ್ಟ ನಂತರ ಅಂತಹ‌ ನಡವಳಿಕೆಗಳನ್ನು ಒಪ್ಪಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಲು‌ ಪ್ರಾರಂಭಿಸುತ್ತದೆ.

ಇನ್ನೊಂದೆಡೆ ಮಾಧ್ಯಮ ಕವರೇಜ್ ಸಹ ಮಹಿಳೆಯರಿಗೆ ಎರಡು ಅಲುಗಿನ ಕತ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಒಂದು ಕಡೆ ಮಹಿಳೆಯರನ್ನು ಬೆಂಬಲಿಸುತ್ತೇವೆ ಎನ್ನುತ್ತಲೇ ಅವರನ್ನು ಶಕ್ತಿಹೀನರು ಎಂದು ನಿರೂಪಿಸುವ ಪ್ರಯತ್ನ ನಡೆದರೆ ಇನ್ನೊಂದೆಡೆ ನಿಖರವಾಗಿ ಮಾತನಾಡುವ ಮಹಿಳೆಯರನ್ನು ಅವರ ನಡವಳಿಕೆಗಾಗಿ ದೂಷಿಸುತ್ತವೆ.

ಬುಲ್ಲಿ ಬಾಯ್ ಪ್ರಕರಣದಲ್ಲೂ ಆದದ್ದು ಇದೇ. ಒಂದಲ್ಲ ಒಂದು ಕಾರಣಕ್ಕಾಗಿ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಂಡ ಮುಸ್ಲಿಂ ಮಹಿಳೆಯರನ್ನು ಮೊದಲು ನಕಲಿ ಹರಾಜು ಸೈಟ್ ಅಲ್ಲಿ ಸಾಂಕೇತಿಕವಾಗಿ “ಮಾರಾಟ” ಕ್ಕೆ ಇಡಲಾಯಿತು. ಅನೇಕರು ಪತ್ರಕರ್ತರು ಇದರ ಪ್ರಮುಖ ಗುರಿಗಳಾಗಿದ್ದರೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಲೇಜು ವಿದ್ಯಾರ್ಥಿಯೊಬ್ಬರ ವಯಸ್ಸಾದ ತಾಯಿಯನ್ನು ಸಹ ಹರಾಜಿಗೆ ಇಡಲಾಗಿತ್ತು.

ಇಂತಹ ಅಪರಾಧಗಳು ಶಿಕ್ಷೆಗೆ ಗುರಿಯಾಗದೆ ಹೋದಾಗ, ಇತರರಿಗೆ ಮಹಿಳೆಯರ ವಿರುದ್ಧ ಇದೇ ರೀತಿ ವರ್ತಿಸುವ ದೈರ್ಯ ಬರುತ್ತದೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅತಿರೇಕದ ಕೃತ್ಯಗಳನ್ನು ಎಸಗಲು ಪ್ರೇರೇಪಣೆ ನೀಡುತ್ತದೆ.

ಸಾರ್ವಜನಿಕ ವಲಯದಲ್ಲಿ ಸಕ್ರಿಯರಾಗಿರುವ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ಈ ಸಾಂಕೇತಿಕ ಹಿಂಸಾಚಾರದ ಉದ್ದೇಶಪೂರ್ವಕ ಮತ್ತು ಅಮಾನವೀಯ ಕೃತ್ಯಕ್ಕೆ ಎಚ್ಚರಿಕೆಯಿಂದ ಆಯ್ಕೆ ಮಾಡಿರುವುದೇ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ತೋರಿಸುತ್ತದೆ. ಈ ರೀತಿ ನಡೆಯುತ್ತಿರುವ ಸಾಂಕೇತಿಕ ಹಿಂಸಾಚಾರವನ್ನು ಕ್ಷುಲ್ಲಕಗೊಳಿಸುವುದರ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ನಾವು ತಾಲಿಬಾನ್ ತರಹದ ಸಮಾಜವನ್ನು ಸೃಷ್ಟಿಸುವ ಅಪಾಯದಲ್ಲಿದ್ದೇವೆ. ಆದ್ದರಿಂದ ಗುರಿಯಾದವರು ಮಾತ್ರವಲ್ಲದೆ ಹೆಣ್ಣು-ಗಂಡು, ಬಹುಸಂಖ್ಯಾತರು-ಅಲ್ಪಸಂಖ್ಯಾತರು ಎಂಬ ಬೇಧವವಿಲ್ಲದೆ ಎಲ್ಲರೂ ಇಂತಹ ಆನ್‌ಲೈನ್‌ನ ಬೆದರಿಕೆಯ ವಿರುದ್ಧ ನಿಲುವು ತೆಗೆದುಕೊಳ್ಳಬೇಕು ಮತ್ತು ಮಾತನಾಡಬೇಕು. ಯಾಕೆಂದರೆ ಇಂತಹ ಬೆದರಿಕೆಗಳಿರುವ ಸಮಾಜದಲ್ಲಿ ಸೋಲುವುದು ಮಹಿಳೆಯರಷ್ಟೇ ಅಲ್ಲ, ಎಲ್ಲರೂ ಸೋಲುತ್ತಾರೆ.

ಮೂಲ: ಸುಮನಾ ಕಸ್ತೂರಿ, ‘ದಿ ವೈರ್’

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಬೆಂಗಳೂರಿನ ಹೊರ ವಲಯದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ ಇಳಿದ ಬಿಬಿಎಂಪಿ : 118 ಕೋಟಿ ಬಜೆಟ್!

Next Post

ಉದಯಪುರ ಹತ್ಯೆ : ಕೃತ್ಯಕ್ಕೆ ಬುದ್ಧಿಜೀವಿಗಳು, ಚಿಂತಕರ ಖಂಡನೆ ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Related Posts

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?
Top Story

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

by ಪ್ರತಿಧ್ವನಿ
June 30, 2026
0

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ, ಕೋಲ್ಕತಾದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ನೀಡುವುದನ್ನು...

Read moreDetails
ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

June 30, 2026
Rajamauli Sdeep Iga Movie

ಪ್ಯಾರಿಸ್‌ನಲ್ಲಿ ಸುದೀಪ್‌ ನಟನೆಗೆ ಮೆಚ್ಚುಗೆ:ಈಗ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್! ನಿರ್ದೇಶಕ ರಾಜಮೌಳಿಗೆ ಜಾಗತಿಕ ಗೌರವ…

June 30, 2026
belagavi Crime news love

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಧ್ವಂಸ..! : ಮಗ ಮಾಡಿದ ತಪ್ಪಿಗೆ ಕಣ್ಣೀರಿನಲ್ಲಿ ಬಡ ಕುಟುಂಬ..

June 30, 2026
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಡಿಕೆ ಶಿವಕುಮಾರ್‌ ಘೋಷಣೆ..

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಡಿಕೆ ಶಿವಕುಮಾರ್‌ ಘೋಷಣೆ..

June 30, 2026
Next Post
ಉದಯಪುರ ಹತ್ಯೆ : ಕೃತ್ಯಕ್ಕೆ ಬುದ್ಧಿಜೀವಿಗಳು, ಚಿಂತಕರ ಖಂಡನೆ ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಉದಯಪುರ ಹತ್ಯೆ : ಕೃತ್ಯಕ್ಕೆ ಬುದ್ಧಿಜೀವಿಗಳು, ಚಿಂತಕರ ಖಂಡನೆ ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada