• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೊರೋನಾ ನಡುವಣ ಗಣೇಶ ಚತುರ್ಥಿ ಆಚರಣೆಗೆ ಗೈಡ್ ಲೈನ್ಸ್‌ ಹೊರ ಬಿಟ್ಟ ಬಿಬಿಎಂಪಿ !

ಕರ್ಣ by ಕರ್ಣ
September 8, 2021
in ಕರ್ನಾಟಕ
0
ನಿರ್ಬಂಧಗಳೊಂದಿಗೆ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡಿದ ರಾಜ್ಯ ಸರ್ಕಾರ : ಇಲ್ಲಿದೆ ಸಂಪೂರ್ಣ ಮಾಹಿತಿ

Lord Ganesha , Ganesh Festival

Share on WhatsAppShare on FacebookShare on Telegram

ಇನ್ನೇನು ಕೆಲವೇ ದಿನಗಳಲ್ಲಿ ಸಂಭ್ರಮದ ಗಣೇಶ ಚತುರ್ಥಿ ಹಬ್ಬದ ದಿನ ಬರಲಿದೆ. ಈ ಬಾರಿಯೂ ಕೊರೋನಾ ನಡುವೆ ಸರ್ಕಾರ ಗಣೇಶನ ಹಬ್ಬಕ್ಕೆ ಅನುಮತಿ ಕೊಟ್ಟಿದೆ. ಆದರೆ ಬೆಂಗಳೂರು ನಗರದಲ್ಲಿ ಚೌತಿ ಆಚರಿಸಲು ಬೃಹತ್ ಮಹಾನಗರ ಪಾಲಿಕೆ ಕೆಲವೊಂದು ಕಂಡೀಷನ್ ಹಾಕಿದೆ. ಇದನ್ನು ಪಾಲಿಸದೆ ಗಣೇಶ ಚತುರ್ಥಿ ಆಚರಿಸ ಕೂಡದು ಎಂದು ಸಾರ್ವಜನಿಕರಿಗೆ ತಾಕೀತು ಮಾಡಿದೆ. 

ADVERTISEMENT

ಕೊರೋನಾ ಮತ್ತೊಮ್ಮೆ ಜನರ ಸಂಭ್ರಮವನ್ನು ಕಸಿದುಕೊಂಡಿದೆ. ಕಳೆದರಡು ವರ್ಷಗಳಿಂದ ಕೊರೋನಾ ಕರಿನೆರಳು ಬಿದ್ದು ತಣ್ಣಗಾಗಿದ್ದ ಗಣೇಶ ಚತುರ್ಥಿ ಹಬ್ಬವನ್ನು ಈ ಬಾರಿಯಾದರೂ ಅದ್ದೂರಿಯಾಗಿ ಆಚರಿಸುವ ಲಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಬಾರಿಯ ಗಣೇಶ ಚತುರ್ಥಿಯೂ ಕೊರೋನಾ ಕಾರಣದಿಂದ ಕಳೆಗುಂದಲಿದೆ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೋನಾ‌ ಇನ್ನೂ‌ ತಗ್ಗಿಲ್ಲ. ಪಕ್ಕದ ಕೇರಳದಲ್ಲಿ ಮತ್ತೆ ನಿಫಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿಗೆ ಮೂರನೇ ಅಲೆಯ ಭೀತಿಯೂ ಇದೆ.‌ ಈ ಎಲ್ಲಾ ಕಾರಣಗಳಿಂದ ಈ ಬಾರಿಯ ಗಣೇಶ ಚತುರ್ಥಿಗೂ ಬಿಬಿಎಂಪಿ ಕಡಿವಾಣ ಹಾಕಿದೆ. ಮೂರು ದಿನಗಳ ಕಾಲ ಗಣೇಶ ಹಬ್ಬ ಆಚರಣೆಗೆ ಒಟ್ಟಾರೆ ಅವಕಾಶ ಕೊಟ್ಟು ಕೆಲವೊಂದು ಕಂಡೀಷನ್ಸ್ ಅನ್ನೂ ಹಾಕಿದೆ. 


1. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಎತ್ತರದ ಮೂರ್ತಿಗೆ ಅವಕಾಶ


2. 198 ವಾರ್ಡ್ ಗಳಲ್ಲಿ ಒಂದು ಮೂರ್ತಿಗೆ ಅವಕಾಶ. ಆದರೆ ಸ್ಥಳ ಪಾಲಿಕೆ ನಿಗದಿ ಮಾಡುತ್ತೆ


3. 8ರ ಒಳಗಾಗಿ ಜಾಗ ನಿಗದಿ ಪಡಿಸಿ ವ್ಯವಸ್ಥೆ ಮಾಡಿಕೊಳ್ಳುವುದು


4. ಟ್ರಾಫಿಕ್ ಸಮಸ್ಯೆ ಆಗದಂತೆ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು, ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯ ಸಂಚಾರಿ ಪೊಲೀಸರ ಉಸ್ತುವಾರಿ


5. ಮೂರ್ತಿ ಪ್ರತಿಷ್ಟಾಪನೆ ಜಾಗದಲ್ಲಿ 20 ಮಂದಿಗೆ ಮಾತ್ರ ಅವಕಾಶ. ಇಲ್ಲಿ ಹೋಂ ಗಾರ್ಡ್ ಹಾಗೂ ಮಾರ್ಷಲ್ಸ್ ಉಸ್ತುವಾರಿ


6.   ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಯಾವುದೇ ಮನರಂಜನೆ, ಸಾಂಸ್ಕೃತಿಕ, ಡಿಜೆ, ಡ್ಯಾನ್ಸ್ ಗೆ ಅವಕಾಶ ಇಲ್ಲ


7. ಮೂರ್ತಿ ಪ್ರತಿಷ್ಟಾಪನೆ ಆಯೋಜಕರು ಕಡ್ಡಾಯವಾಗಿ ಲಸಿಕೆ ಪಡೆದಿಬೇಕು & ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು


8. ಬೆಂಗಳೂರು ನಗರದಲ್ಲಿ 3 ದಿನಗಳ ಕಾಲ ಗಣೇಶ ಹಬ್ಬ ಆಚರಿಸಲು ಅನುಮತಿ


9. POP ಇಂದ ತಯರಾದ ಮೂರ್ತಿಗಳಿಗೆ ಅವಕಾಶ ಇಲ್ಲ. POP ಇಂದ ತಯಾರದ ಮೂರ್ತಿ ಬಳಸಿದರೆ ದಂಡ ಹಾಗೂ ಕಠಿಣ ಶಿಕ್ಷೆ


10. ಮೂರ್ತಿ ವಿಸರ್ಜನೆಗೆ ಪಾಲಿಕೆಯಿಂದಲೇ ಮೊಬೈಲ್ ಟ್ಯಾಂಕರ್ ಇರಲಿದೆ. ಇದರ ಹೊರತಾಗಿ ನಗರದ ಯಾವುದೇ ಕೆರೆ ಹಳ್ಳ ಕೊಳ್ಳಿಗೆ ಮೂತ್ತಿ ವಿಸರ್ಜನೆ ಮಾಡಬಾರದು


11. ಮೂರ್ತಿ ಪ್ರತಿಷ್ಟಾಪನೆ ಮಾಡುವ ಜಾಗ ಕಡ್ಡಾಯವಾಗಿ ಆಗಾಗ್ಗೆ ಸ್ಯಾನಿಟೈಸ್ ಮಾಡುವುದು


12. ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ 6 ಅಡಿ ಅಂತರ ಪಾಲನೆ ಮಾಡುವುದು


13. ನಿಯಮ ಉಲ್ಲಂಘಿಸುವವರ ವಿರುದ್ಧ ವಿ.ನಿ ಕಾಯ್ದೆ 2005 & IPC 188 ಅಡಿಯಲ್ಲಿ ಕ್ರಮ ಜರುಗಿಸಲಾಗುವುದು


ಒಟ್ಟಾರೆ ಈ ಬಾರಿಯ ಗಣೇಶ ಚತುರ್ಥಿಗೂ‌ ಕೊರೋನಾ ವಕ್ರ ದೃಷ್ಟಿ ತಗುಲಿದೆ. ಕಳೆದ ಬಾರಿ‌ ಕೊರೋನಾ ಹೆಚ್ಚಿತ್ತು ಎಂಬ ಕಾರಣಕ್ಕೆ ಸಂಭ್ರಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ನಗರದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ರೂ ಮುನ್ನೆಚ್ಚರಿಕೆ ಕ್ರಮವಾಗಿ ಅದ್ದೂರಿ ಆಚರಣೆಗೆ ತಡೆ ಒಡ್ಡಲಾಗಿದೆ.‌ ಈ ಮೊದಲು ಸಂಪೂರ್ಣ ಆಚರಣೆಗೆ ಅವಕಾಶ ಕೊಡುವಂತೆ ಬೇಡಿಕೆಗಳು ಕೇಳಿಬಂದಿದ್ದರೂ, ಪಾಲಿಕೆ‌ ಮೂರನೇ ಅಲೆಯಿಂದ ನಗರವನ್ನು ಕಾಪಾಡುವ ನಿಟ್ಟಿನಲ್ಲಿ ಕಂಡೀಷನ್‌ಗಳನ್ನು ಹಾಕಿ ಚೌತಿ ಆಚರಣೆಗೆ ಅನುಮತಿ ಕೊಟ್ಟಿದೆ. 

Tags: BBMPCovid 19covid guidelinesGanesh ChaturthiGanesha Idol MakersguidelinesPublic Ganesha Pandalಕೋವಿಡ್-19
Previous Post

ಆನ್‌ಲೈನ್‌ನಲ್ಲಿ ಜೂಜಾಡಿದರೆ 6 ತಿಂಗಳ ಜೈಲು ಶಿಕ್ಷೆ; ಮಸೂದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಅಸ್ತು!

Next Post

ಅಫ್ಘಾನ್ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೆಲ್ಸ್

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Restricting salt consumption to protect people's health

ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ಉಪ್ಪು ಬಳಕೆಗೆ ಕಡಿವಾಣ: ಇಂದು ಸಂಜೆಯೇ ಮಾರ್ಗಸೂಚಿ ಪ್ರಕಟ | Salt

September 29, 2026
Next Post
ಅಫ್ಘಾನ್ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೆಲ್ಸ್

ಅಫ್ಘಾನ್ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೆಲ್ಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada