ಆನ್ಲೈನ್ ಗೇಮ್ಗಳು ಸೇರಿದಂತೆ ಎಲ್ಲ ತರಹದ ಜೂಜಾಟವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಿ ಮತ್ತು ಜೂಜಾಟದಲ್ಲಿ ಭಾಗಿಯಾದವರಿಗೆ ದಂಡ ಮತ್ತು ವಿಧಿಸುವ ಶಿಕ್ಷೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆನ್ಲೈನ್ ಜೂಜಾಟವನ್ನ ನಿಷೇಧಿಸುವುದಕ್ಕಾಗಿ “ಕರ್ನಾಟಕ ಪೊಲೀಸ್ ಕಾಯ್ದೆ1963” ತಿದ್ದುಪಡಿ ತರಲಾಗುತ್ತಿದೆ ಮತ್ತು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ.
ಕಂಪ್ಯೂಟರ್, ಮೊಬೈಲ್ ಅಪ್ಲಿಕೇಶನ್ ಅಥವಾ ಯಾವುದಾದರು ಮನರಂಜನಾ ಕ್ಲಬ್ಗಳು, ಗೇಮಿಂಗ್ ಹೌಸ್ಗಳಲ್ಲಿ ಈ ತರಹದ ಚಟುವಟಿಕೆಗಳನ್ನು ನಡೆಸಿದರೆ ಅಪರಾಧ ಎಂದು ಪರಿಗಣಿಸುವ ಪ್ರಸ್ತಾಪ ತಿದ್ದುಪಡಿಯಲ್ಲಿದೆ.
also read: ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್
ಯಾವುದೇ ಬಗ್ಗೆಯ ಜೂಜಾಟದಲ್ಲಿ ಭಾಗಿಯಾಗುವುದು ಮತ್ತು ಜೂಜು ಕೇಂದ್ರ ತೆರೆಯುವುದು , ಸಾರ್ವಜಿನಕ ಸ್ಥಳಗಳಲ್ಲಿ ಜೂಜಾಟವನ್ನು ನಡೆಸುವುದು, ಜೂಜಾಟದ ಆರೋಪದಲ್ಲಿ ಗಡಿಪಾರು ಮಾಡಲಾದ ಆರೋಪಿತರು ಮರಳಿ ಬರುವುದು ಕಂಡು ಬಂದಲ್ಲಿ ಅಪರಾಧ ಪ್ರಕರಣಗಳಿಗೆ ವಿಧಿಸುತ್ತಿದ ಶಿಕ್ಷೆ ಮತ್ತು ದಂಡವನ್ನು ಹೆಚ್ಚಿಸುವ ಪ್ರಸ್ತಾಪವುಳ್ಳ ತಿದ್ದುಪಡಿ ಮಸೂದೆಗೆ ಶನಿವಾರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಕಳೆದ ವರ್ಷ ಈ ಕುರಿತು ಸಾಮಾಜಿಕ ಕಳಕಳಿವುಳ್ಳ ನಟ ಚೇತನ್ರವರು, ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ‘ಸ್ಟಾರ್ಸ್’ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’?” ಎಂದು ಚೇತನ್ ಪ್ರಶ್ನಿಸಿದರು.
ಯಾವ ಅಪರಾಧಕ್ಕೆ ಏನು ಶಿಕ್ಷೆ
* ಮೇಲಿನ ಆರೋಪಗಳ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಲೇಬೇಕಾದ ವಿಶೇಷ ಕಾರಣಗಳು ಇಲ್ಲದಿರುವ ಸಂದರ್ಭದಲ್ಲಿ ಅಪರಾಧ ಸಾಬೀತಾದರೆ ಆರು ತಿಂಗಳವರೆಗೆ ಜೈಲು ಮತ್ತು ₹ 10,000 ದಂಡ.
* ಜೂಜು ಕೇಂದ್ರ ತೆರೆಯುವುದು, ಅದಕ್ಕಾ ಗಿ ಕಟ್ಟ ಡ ಬಾಡಿಗೆಗೆ ನೀಡುವುದು, ಜೂಜು ಕೇಂದ್ರ ದಮೇಲ್ವಿ ಚಾರಣೆ ನಡೆಸುವವರು, ಜೂಜಾಟಕ್ಕೆ ಸಾಲ ನೀಡುವವರಿಗೆಮೂರು ವರ್ಷಗಳವರೆಗೆ ಜೈಲು ಮತ್ತು ₹ 1 ಲಕ್ಷದವರೆಗೆ ದಂಡ.
* ಜೂಜಾಡುವ ಉದ್ದೇ ಶಕ್ಕಾ ಗಿ ಸಾರ್ವಜನಿಕ ಸ್ಥ ಳಗಳಲ್ಲಿ ಸೇರಿರುವ ಅಪರಾಧಕ್ಕೆ ಆರು ತಿಂಗಳ ಜೈಲು ಮತ್ತು ₹ 10,000 ದಂಡ.
* ಜೂಜಾಟದ ಅಪರಾಧ ಸಾಬೀತಾಗಿ ಗಡೀಪಾರುಮಾಡಿದ ಆದೇಶ ಉಲ್ಲಂ ಘಿಸಿ ಆ ಪ್ರದೇಶವನ್ನು ಮರು ಪ್ರವೇಶ ಮಾಡಿದರೆ ₹ 25,000ದಿಂದ ₹ 1 ಲಕ್ಷದವರೆಗೆ ದಂಡ.
* ಯಾವುದೇ ಬಗೆಯಜೂಜು ಕೇಂದ್ರ ಗಳಲ್ಲಿ ಜೂಜಾಟದಲ್ಲಿ ತೊಡಗಿರುವವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 10,000 ದಂಡ. *ಸಾರ್ವಜನಿಕ ಸ್ಥ ಳದಲ್ಲಿ ಜೂಜಾಡುತ್ತಿದ್ದ ವರಿಗೆ ಒಂದು ವರ್ಷ ಜೈಲು ಮತ್ತು ₹ 20,000 ದಂಡ.
*ಸಾರ್ವಜನಿಕ ಸ್ಥ ಳದಲ್ಲಿ ಜೂಜಾಡುತ್ತಿದ್ದವರಿಗೆ ಒಂದು ವರ್ಷ ಜೈಲು ಮತ್ತು ₹ 20,000 ದಂಡ.