ಕೊರೋನಾ (Corona) ಹಾಗೂ ಬಿಬಿಎಂಪಿ (BBMP) ಬಜೆಟ್ ನಡುವೆ ಪಾಲಿಕೆಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ. ಕಸ ಸಾಗಿಸೋ ಕಾಂಪ್ಯಾಕ್ಟ್ ವಾಹನಗಳ ಗಾರ್ಬೆಜ್ ಕಲೆಕ್ಟ್, ಲೋಕೇಶನ್ ಟ್ರೇಸ್ ಲೆಕ್ಕವೇ ಸಿಗ್ತಿಲ್ಲ. ವೆಹಿಕಲ್ ಗಳ GPS ಸಿಗ್ನಲ್ ಕೈಕೊಡ್ತಿದ್ದು, ಇವುಗಳನ್ನ ಪತ್ತೆಹಚ್ಚೋದು ಪಾಲಿಕೆಗೆ ದೊಡ್ಡ ಸವಾಲಾಗ್ತಿದ್ದು ಇದಕ್ಕೆ ಬಿಬಿಎಂಪಿ ಬೇರೇನೆ ದಾರಿ ಕಂಡುಕೊಂಡಿದೆ.
ತಾಂತ್ರಿಕ ಎಡವಟ್ಟಿನಿಂದ ಟ್ರಾಕ್ ಆಗ್ತಿಲ್ಲ ಕಾಂಪ್ಯಾಕ್ಟ್ ವಾಹನ
ಬೆಂಗಳೂರನ್ನ ಗಾರ್ಡನ್ ಸಿಟಿ ಅಂತಾರೆ . ಆದರೆ ಕೆಲ ವರ್ಷಗಳ ಹಿಂದೆ ನಮ್ಮ ರಾಜಧಾನಿ ಗಾರ್ಬೇಜ್ ಸಿಟಿ ಅಂತ ವಿಶ್ವಮಟ್ಟದಲ್ಲಿ ಅಪಖ್ಯಾತಿಗೊಳಗಾಗಿತ್ತು. ನಂತರ ಎಚ್ಚೆತ್ತ ಬಿಬಿಎಂಪಿ ಸಿಲಿಕಾನ್ ಸಿಟಿಯ ತ್ಯಾಜ್ಯ ವಿಲೇವಾರಿಗೆ ಕಠಿಣ ಕ್ರಮ ಕೈಗೊಂಡು ಕಸದ ಸಮಸ್ಯೆ ಬಗೆಹರಿಸಿ ಕೇಂದ್ರ ಸರ್ಕಾರದ ಕಸ ಮುಕ್ತ ನಗರ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು ಇದೆಲ್ಲ ಹಳೆ ವಿಷಯ ಬಿಡಿ. ಸದ್ಯ ಆಗುತ್ತಿರುವ ಸಮಸ್ಯೆ ಏನಂದರೆ ರಾಜಧಾನಿಯಲ್ಲಿ ಮತ್ತೆ ಸದ್ದಿಲ್ಲದೆ ಕೆಲ ಭಾಗಗಳಲ್ಲಿ ಕಸದ ಸಮಸ್ಯೆ ಸೃಷ್ಠಿಯಾಗ್ತಿದ್ದು, ಇದಕ್ಕೆ ಕಾರಣವೇನಂದ್ರೆದರೆ ಕಸ ಸಾಗಿಸೋ ವಾಹನಗಳ GPS ಟ್ರ್ಯಾಕಿಂಗ್ ಅವ್ಯವಸ್ಥೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 5,500 ಆಟೋ ಟಿಪ್ಪರ್ ಮತ್ತು 600 ಕಾಂಪ್ಯಾಕ್ಟರ್ ವಾಹನಗಳಿವೆ. ಕಸ ಸಂಗ್ರಹಕ್ಕಾಗಿ ಖಾಸಗಿಯವರಿಗೆ ಟೆಂಡರ್ ಕೊಟ್ಟಿರುವ ಪಾಲಿಕೆ, ಕಸ ಸಂಗ್ರಹಿಸಲು ಕೋಟ್ಯಾಂತ ರೂ ವೆಚ್ಚಮಾಡ್ತಿಡುತ್ತಿದೆ. ಈ ಹಿಂದೆ ಕಾಂಪ್ಯಾಕ್ಟ್ ವಾಹನಗಳ ಕೆಲಸದ ಬಗ್ಗೆ ದೂರು ಕೇಳಿಬಂದಾಗ ಈ ವೆಹಿಕಲ್ ಗಳ ಲೊಕೇಶನ್ ಟ್ರೇಸಿಂಗ್ ಗಾಗಿ GPS ಅನ್ನ ಅಳವಡಿಸಲಾಗಿತ್ತು. ಇದೀಗ ತಾಂತ್ರಿಕ ಯಡವಟ್ಟಿನಿಂದಾಗಿ ತ್ಯಾಜ್ಯ ವಿಲೇವಾರಿ ವಾಹನಗಳ ಲೊಕೇಶನ್ ಟ್ರಾಕ್ ಆಗ್ತಿಲ್ಲ. ಜಿಪಿಎಸ್ ಕೈಕೊಡ್ತಿರೋದ್ರಿಂದ ಕಸದ ವಾಹನಗಳ ಲೆಕ್ಕವೇ ಸಿಗ್ತಿಲ್ಲ ಪಾಲಿಕೆಗೆ. ಕಸದ ವಾಹನ ನಿತ್ಯ ಓಡಾಟ ನಡೆಸ್ತಿದ್ಯಾ ? ಕಸ ಸಂಗ್ರಹ ವಾಗ್ತಿದ್ಯಾ ಅನ್ನೋ ಮಾಹಿತಿ ಪಾಲಿಕೆ ಬಳಿಯೇ ಇಲ್ಲ. ಈ ಪೈಕಿ ಕೆಲವು ವಾಹನಗಳು ಅಡ್ರಸ್ ಗೆ ಇಲ್ಲದೇ ಮಿಸ್ಸಿಂಗ್ ಆಗಿವೆ, ಈ ಬಗ್ಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ಅವ್ಯವಹಾರದ ಆರೋಪ ಕೇಳಿಬರ್ತಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ವಿಭಾಜಂಟಿ ಆಯುಕ್ತ ಸರ್ಫರಾಜ್ ಖಾನ್ ದೊಡ್ಡ ಪ್ರಮಾಣದಲ್ಲಿ GPS ಅಳವಡಿಸಿರೋದರಿಂದ ಟೆಕ್ನಿಕಲ್ ಎರರ್ಸ್ ಆಗುತ್ತಿದೆ. ಕಾಂಪ್ಯಾಕ್ಟ್ ವೆಹಿಕಲ್ಸ್ ಓಡಾಡೋಡುವ ಜಾಗಗಳಲ್ಲಿ ಮಾರ್ಷಲ್ಸ್, RF ಗಾರ್ಡ್ಸ್ ಟ್ರ್ಯಾಕ್ ಮಾಡುತ್ತಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದೆ ಅನ್ನೋ ಮಾತು ಸತ್ಯಕ್ಕೆ ದೂರವಾದದ್ದು. ದಿನನಿತ್ಯ 4.500 ಟನ್ ಕಸ ಪ್ಲಾಂಟ್ ಗಳಿಗೆ ಬರ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ನಿಖರ ಮಾಹಿತಿಯನ್ನ ಕೊಡುತ್ತಿದ್ದಾರೆ. ಕೆಲ ವಾರ್ಡ್ ಗಳಲ್ಲಿ ಬ್ಲಾಕ್ ಗಳ ಸಂಖ್ಯೆ ಹೆಚ್ಚಳವಾಗಿದೆ. ಇದರ ಮ್ಯಾಫಿಂಗ್ ಮಾಡಬೇಕು. ಇದರಿಂದ ಗೊಂದಲ ಆಗಿದೆ. ಇದನ್ನ ಸರಿಪಡಿಸಲು ಮುಂದಿನ ದಿನಗಳಲ್ಲಿ ಆ್ಯಪ್ ಗಳ ಮೂಲಕ ಮಾನಿಟರ್ ಮಾಡಲು ಪಾಲಿಕೆ ಚಿಂತಿಸಿದೆ ಎಂದರು.
ಕಾಂಪ್ಯಾಕ್ಟ್ ವೆಹಿಕಲ್ಸ್ ಗಳ ಅವ್ಯವಸ್ಥೆಯ ಬಗ್ಗೆ ಪಾಲಿಕೆ ಎಚ್ಚರವಹಿಸಿದ್ದು ಅಂತಹ ಯಾವುದೇ ಪ್ರಾಬ್ಲಮ್ ಆಗ್ತಿಲ್ಲ ಎಂದಿದೆ. ಆದ್ರೆ GPS ಸಿಗ್ನಲ್ ಪ್ರಾಬ್ಲಮ್ ಆಗ್ತಿರೋದನ್ನ ಒಪ್ಪಿಕೊಂಡಿದ್ದು ಇದಕ್ಕೆ ಆ್ಯಪ್ ಒಂದನ್ನ ರೂಪಿಸ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸರಿಹೋಗಲಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.













