ಬೆಂಗಳೂರಿನ (Bengaluru) ಬಿಬಿಎಂಪಿ (BBMP ) ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಈ ಬೆನ್ನಲ್ಲೇ ಕಾಂಗ್ರೆಸ್ (Congress) ಮತ್ತು ಬಿಜೆಪಿ (Bjp) ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈಗಾಗಲೇ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರನ್ನ (Greater Bangalore) ಐದು ವಲಯಗಳನ್ನಾಗಿ ವಿಂಗಡಿಸಿದ್ದು, ಸೆಪ್ಟೆಂಬರ್ 2 ರಂದು ನಗರ ಪಾಲಿಕೆ ಗಡಿಯ ಅಂತಿಮ ಅಧಿಸೂಚನೆ ಹೊರಡಿಸಲಿದೆ.

ಆ ಬಳಿಕ ನವೆಂಬರ್ 1ರಂದು ವಾರ್ಡ್‌ಗಳ ಅಂತಿಮ ಅಧಿಸೂಚನೆ ಪ್ರಕಟವಾಗೋ ಸಾಧ್ಯತೆ ಇದೆ. ಉಭಯ ಪಕ್ಷಗಳು ಚುನಾವಣಾ ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿವೆ. ಬಿಜೆಪಿ ನಾಯಕರು ಮೋದಿ ನಾಮಬಲದ ಜಪ ಮಾಡ್ತಿದ್ರೆ, ಮಹಾ ನಗರದ ಗದ್ದುಗೆ ಹಿಡಿಯಲು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಈಗಿನಿಂದಲೇ ರಣತಂತ್ರ ಶುರು ಮಾಡಿದ್ದಾರೆ.

ಇತ್ತ ಗ್ರೇಟರ್ ಬೆಂಗಳೂರು, ಬ್ಲ್ಯಾಂಡ್ ಬೆಂಗಳೂರು ಮೂಲಕ ಮಹಾನಗರಕ್ಕೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದೇ ತಿಂಗಳ 10ಕ್ಕೆ ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ವಿಚಾರ ಕ್ರೆಡಿಟ್ ಪಾಲಿಟಿಕ್ಸ್ ಗೆ ದಾರಿ ಮಾಡಿಕೊಟ್ಟಿದ್ದು, ಬಿಬಿಎಂಪಿ ಚುನಾವಣೆ ಹಿನ್ನಲೆ ಈಗ ಮತ್ತಷ್ಟು ರಂಗು ಪಡೆದುಕೊಂಡಿದೆ.