ಕರೋನಾ ಎರಡನೇ ಅಲೆ ರಾಜ್ಯಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಂಕಿಂಗ್ ಸಮಯವನ್ನು ಬದಲಿಸಿದೆ ಎಂದು SLBC (ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್) ತಿಳಿಸಿದ್ದಾರೆ.
ಕರೋನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಂಬಲಕ್ಕೆ ನಿಲ್ಲುತ್ತೇವೆ ಹಾಗೂ ನಮ್ಮ ಬ್ಯಾಂಕ್ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯನ್ನು ಕಾಪಾಡಿಕೊಳ್ಳಲು ಹಾಗೆ ಸಾಂಕ್ರಾಮಿಕ ರೋಗವನ್ನು ಆದಷ್ಟು ತಡೆಯಲು ಬ್ಯಾಂಕಿಂಗ್ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸುತ್ತಿದ್ದೇವೆ ಎಂದು ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್ ಚಂದ್ರಶೇಖರ ಪತ್ರದ ಮೂಲಕ ತಿಳಿಸಿದ್ದಾರೆ.

ಪತ್ರದಲ್ಲಿ ನಮೂದಿಸಿದಂತೆ, ಏಪ್ರಿಲ್ 22 ರಿಂದ ಮೇ 31 ರವರೆಗೆ ರಾಜ್ಯದ ಎಲ್ಲಾ ಬ್ಯಾಂಕುಗಳು ಇನ್ನೂ ಮುಂದೆ ಬೆಳಿಗ್ಗೆ 10 ರಿಂದ ಮಧ್ಯಹ್ನಾ 2 ಗಂಟೆವರೆಗೆ ಮಾತ್ರ ಸೇವೆ ನೀಡಲಿದೆ ಎಂದು ತಿಳಿಸಿದೆ. ಶೇಕಡಾ 50% ರಷ್ಟು ಮಾತ್ರ ಸಿಬ್ಬಂದಿ ಹಾಜರಾಗುವಂತೆ ತಿಳಿಸಿದೆ.

ಅಂಗವಿಕಲರು, ಬಾಣಂತಿ, ಗರ್ಭಿಣಿ ಇತ್ಯಾದಿ ವಿಶೇಷ ಸಿಬ್ಬಂದಿಗಳಿಗೆ ಮನೆ ಮೂಲಕವೇ ವರ್ಕ್ ಮಾಡುವುದಾಗಿ ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ಬೇಸಿಕ್ ಸೇವೆಗಳು ಮಾತ್ರ ಲಭ್ಯವಿದ್ದು ಉದಾಹರಣೆಗೆ, ಹಣ ವರ್ಗಾವಣೆ, ಕ್ಲಿಯರಿಂಗ್ ಸೇವೇ, ಸರ್ಕಾರಿ ವ್ಯವಹಾರ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲಾ ಸಿಬ್ಬಂದಿಗಳು ಕರೋನಾ ಮಾರ್ಗಸೂಚಿ ಪಾಲಿಸುವುದಾಗಿ SLBC ತಿಳಿಸಿದ್ದಾರೆ.







