• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆಕ್ಸಿಜನ್ ಪೂರೈಕೆಗೆ ಹೈಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ: ರಾತ್ರೋ ರಾತ್ರಿ ಆಮ್ಲಜನಕ ಪೂರೈಸಿದ ಕೇಂದ್ರ

Any Mind by Any Mind
April 22, 2021
in ದೇಶ
0
ಆಕ್ಸಿಜನ್ ಪೂರೈಕೆಗೆ ಹೈಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ: ರಾತ್ರೋ ರಾತ್ರಿ ಆಮ್ಲಜನಕ ಪೂರೈಸಿದ ಕೇಂದ್ರ
Share on WhatsAppShare on FacebookShare on Telegram

1,400ಕ್ಕೂ ಹೆಚ್ಚು ಕರೋನ ರೋಗಿಗಳಿರುವ ಆರು ಮ್ಯಾಕ್ಸ್ ಆಸ್ಪತ್ರೆಗಳಿಗೆ ತುರ್ತು ಆಮ್ಲಜನಕವನ್ನು ಪೂರೈಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ಆದೇಶಿಸಿದೆ.

ADVERTISEMENT

ಮ್ಯಾಕ್ಸ್ ಆಸ್ಪತ್ರೆಗಳ ಮಾಲೀಕತ್ವದ ಬಾಲಾಜಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ಇಂದು ವಿಚಾರಣೆಗೆ ಒಳಪಡಿಸಿತ್ತು, ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ರಾತ್ರಿ 8 ಗಂಟೆಗೆ ವಿಶೇಷ ಸಭೆ ನಡೆಸಿ, ದೆಹಲಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು “ಏನಾದರು ಮಾಡಿ ಒದಗಿಸಿ” ಕೈಗಾರಿಕೆಗಳಿಂದ ಬರುವ ಸಂಪೂರ್ಣ ಉತ್ಪಾದನೆಯನ್ನು ವೈದ್ಯಕೀಯ ಬಳಕೆಗಾಗಿಯಾಗುವಂತೆ ನೋಡಿಕೊಳ್ಳಿ ಎಂದು ನಿರ್ದೇಶನ ನೀಡಿದೆ.

ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಮೆಡಿಕಲ್ ಆಕ್ಸಿಜನ್ ಅಗತ್ಯವಿರುವವರಿಗೆ ಅದನ್ನು ಒದಗಿಸುವುದು ನಾಗರಿಕರ ಜೀವನ ಹಕ್ಕು ಅದನ್ನು ರಕ್ಷಿಸಲು ನಾವು ಕೇಂದ್ರ ಸರ್ಕಾರಕ್ಕೆ ಸೂಚಿಸುತ್ತೇವೆ. ಯಾವುದೇ ವಿಧಾನದಿಂದ ಆಕ್ಸಿಜನ್ ಪೂರೈಸಲು ನಾವು ಕೇಂದ್ರ ಸರ್ಕಾರವನ್ನು ನಿರ್ದೇಶಿಸುತ್ತೇವೆ. ಪೂರೈಕೆ ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಅಗತ್ಯವಿದ್ದರೆ, ಕೇಂದ್ರಗಳು ಕೈಗಾರಿಕೆಗಳಿಂದ ಸಂಪೂರ್ಣ ಸ್ಟೀಲ್ ಮತ್ತು ಪೆಟ್ರೋಲಿಯಂ ಅನ್ನು ಬೇರೆಡೆಗೆ ತಿರುಗಿಸುವಂತೆ ನ್ಯಾಯಾಲಯ ತಿಳಿಸಿತು.

ಆಕ್ಸಿಜನ್ ಪೂರೈಕೆಯನ್ನು ತಕ್ಷಣವೇ ಪೂರೈಸದಿದ್ದರೆ ಅದರ ಅಗತ್ಯ ಇರುವ ಅಷ್ಟು ರೋಗಿಗಳ ಪ್ರಾಣಕ್ಕೆ ಅಪಾಯವಿದೆ ಎಂದು ಆಸ್ಪತ್ರೆಗಳ ಮಾಲೀಕತ್ವದ ಬಾಲಾಜಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿದ ಕೇಂದ್ರ ಸರ್ಕಾರ, ದೆಹಲಿಗೆ ಹೆಚ್ಚುವರಿ ಆಮ್ಲಜನಕವನ್ನು ಕೋರಿದೆ ಎಂದು ಆರೋಪಿಸಿತು.

“It is being implemented as we speak,” ಎಂದು ಕೇಂದ್ರದ ಪರ ವಕೀಲ ಅನಿಲ್ ಸೋನಿ ಹೇಳಿದರು.

ಆದರೆ ನ್ಯಾಯಪೀಠವು ಅವರ ಮಾತಿಗೆ ಪ್ರಭಾವಿತರಾಗದೆ.

“ನೀವು 400 ಮೆಟ್ರಿಕ್ ಟನ್ ಸರಬರಾಜು ಮಾಡುತ್ತಿರುವುದು ಯಾರಿಗೂ ಸಮಾಧಾನವಿಲ್ಲ.. ಕೇಂದ್ರವು ಆಜ್ಞೆ ಮಾಡುವ ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿದೆ.. ಟಾಟಾ ಸಹ ಸರಬರಾಜು ಮಾಡುತ್ತಿದೆ. ಮಿಸ್ಟರ್ ಟಾಟಾ ಕೂಡ ಸಹಾಯ ಮಾಡಲು ಸಿದ್ಧರಿರುತ್ತಾರೆ. ಎಲ್ಲರೂ ಈ ಕ್ಷಣದಲ್ಲಿ ಸಹಾಯ ಮಾಡಲು ಸಿದ್ಧರಿರಬೇಕು,” ಎಂದು ಸ್ವತಃ ಕೇಂದ್ರದ ನಿಲುವನ್ನು ಟೀಕಿಸಿದೆ‌.

ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಗೆ ಸಂಬಂಧಿಸಿದಂತೆ ತುರ್ತು ಅರ್ಜಿಯನ್ನು ದೆಹಲಿ ಹೈಕೋರ್ಟ್ ಆಲಿಸಿ ಕೇಂದ್ರಕ್ಕೆ ಚಾಟಿ ಬೀಸಿದ ಪರಿಣಾಮ, ಕೇಂದ್ರವನ್ನು ಪ್ರತಿನಿಧಿಸುವ ಎಸ್‌ಜಿ ತುಷಾರ್ ಮೆಹ್ತಾ ಅವರು ಆಮ್ಲಜನಕದ ಪೂರೈಕೆ ದಾರಿಯಲ್ಲಿದೆ, ಶೀಘ್ರದಲ್ಲೇ ಅದು ಆಸ್ಪತ್ರೆಗೆ ತಲುಪಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. O2 ಅನ್ನು ಮ್ಯಾಕ್ಸ್ ಆಸ್ಪತ್ರೆಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ನೀವು (ಕೇಂದ್ರ) ಆಮ್ಲಜನಕವನ್ನು ತಲುಪಿಸುವಿರಿ ಎಂಬ ಸಂಪೂರ್ಣ ನಂಬಿಕೆ ನಮ್ಮಲ್ಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.ಆದರೆ ಇನ್ನೂ ಅನೇಕ ಆಸ್ಪತ್ರೆಗಳು ಸಹ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ. ಇದು ರಾಷ್ಟ್ರೀಯ ತುರ್ತುಸ್ಥಿತಿಯಾಗಿರುವುದರಿಂದ ನೀವು ಆಕ್ಸಿಜನ್ ಪೂರೈಸುವಂತೆ ಆದೇಶವನ್ನು ರವಾನಿಸಬಹುದು ಎಂದು ತಿಳಿಸಿದೆ.

ಮ್ಯಾಕ್ಸ್ ಆಸ್ಪತ್ರೆ, ವೈಶಾಲಿ ಮತ್ತು ಗುರಗಾಂವ್‌ಗಳಿಗೆ ಕೇವಲ 8 ಗಂಟೆಗಳ ಆಕ್ಸಿಜನ್ ಸಾಮರ್ಥ್ಯವಿದೆ, ಬೆಳಿಗ್ಗೆ ತನಕ ಅದು ಉಳಿಯುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮುಂದೆ ಮ್ಯಾಕ್ಸ್ ಆಸ್ಪತ್ರೆಯನ್ನು ಪ್ರತಿನಿಧಿಸುವ ವಕೀಲ ಸಂದೀಪ್ ಸೇಥಿ ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈಗ 8000 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಇದೆ ಎಂದು ಗೋಯಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಆಮ್ಲಜನಕದ ಪೂರೈಕೆಯ ಉಸ್ತುವಾರಿಯಾದ ಸುಮಿತಾ ದಾವ್ರಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ವಿಷಯವನ್ನು ಪರಿಗಣಿಸಿ ನ್ಯಾಯಾಲಯವು, the fact of the matter is oxygen shortage, and we have to fulfill it ಎಂದು ಕೇಂದ್ರಕ್ಕೆ ಸೂಚಿಸಿದೆ.

ಆಮ್ಲಜನಕದ ಪೂರೈಕೆಯ ಕೊರತೆಯಿಂದ ಜನರು ಸಾಯುವುದನ್ನು ನಾವು ನೋಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಅರ್ಜಿಯಲ್ಲಿ ಹೇಳಿರುವಂತೆ ಆರು ಆಸ್ಪತ್ರೆಗಳು ಮತ್ತು ರೋಗಿಗಳ ಸಂಖ್ಯೆ ಈ ಕೆಳಗಿನಂತಿದೆ

Previous Post

ನಾಳೆಯಿಂದ ಮೇ31 ರವರೆಗೂ ಬ್ಯಾಂಕಿಂಗ್ ಸೇವೆ ಸಮಯ ಬದಲು

Next Post

ಕರೋನಾ ವಿಷಯದಲ್ಲಿ ದುಡ್ಡು ಪಡೆದಿದ್ದು ಕೇಂದ್ರ ಸರ್ಕಾರ, ಲಸಿಕೆಗಳಿಗೆ ಮಾತ್ರ ರಾಜ್ಯ ಸರ್ಕಾರ ಹಣ ಕೊಡಬೇಕೆ?

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಕರೋನಾ ವಿಷಯದಲ್ಲಿ ದುಡ್ಡು ಪಡೆದಿದ್ದು ಕೇಂದ್ರ ಸರ್ಕಾರ, ಲಸಿಕೆಗಳಿಗೆ ಮಾತ್ರ ರಾಜ್ಯ ಸರ್ಕಾರ ಹಣ ಕೊಡಬೇಕೆ?

ಕರೋನಾ ವಿಷಯದಲ್ಲಿ ದುಡ್ಡು ಪಡೆದಿದ್ದು ಕೇಂದ್ರ ಸರ್ಕಾರ, ಲಸಿಕೆಗಳಿಗೆ ಮಾತ್ರ ರಾಜ್ಯ ಸರ್ಕಾರ ಹಣ ಕೊಡಬೇಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada